More

    ಟಾಪ್​ಲೆಸ್​ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ವೈರಲ್​ ಆಯ್ತು ನಟಿ ನೀಲಿಮಾ ಕೊಟ್ಟ ಉತ್ತರ

    ಚೆನ್ನೈ: ನಟಿ ನೀಲಿಮಾ ರಾಣಿ ಅವರು ತಮಿಳು ಮನರಂಜನಾ ಲೋಕದ ಪ್ರಸಿದ್ಧ ನಟಿ. ಕಮಲ್​ ಹಾಸನ್​ ಅವರ ದೇವರ ಮಗನ್​ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಾನ್​ ಮಹಾನ್​ ಅಲ್ಲ, ಸಂತೋಷ್​ ಸುಬ್ರಮಣ್ಯಂ ಸೇರಿದಂತೆ ಅನೇಕ ಸಿನಿಮಾಗಲ್ಲಿ ನಟಿಸಿದ್ದಾರೆ.

    ನೀಲಿಮಾ ಅವರು ಸಿನಿಮಾಗಳಿಂತ ಧಾರಾವಾಹಿಗಳಲ್ಲಿ ಹೆಚ್ಚು ನಟಿಸಿದ್ದಾರೆ. ಸುಮಾರು 50 ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಮೂಲಕ ತಮಿಳು ಮನರಂಜನಾ ಲೋಕದಲ್ಲಿ ತುಂಬಾ ಖ್ಯಾತಿ ಗಳಿಸಿದ್ದಾರೆ. ಅಲ್ಲದೆ, ಅವರೊಬ್ಬ ಕಂಠದಾನ ಕಲಾವಿದೆಯೂ ಹೌದು.

    ಇದನ್ನೂ ಓದಿ: ಚಿತಾಭಸ್ಮವನ್ನು ಶಿಂಗೋ ನದಿಯಲ್ಲಿ ವಿಸರ್ಜಿಸಿ ಕಾರ್ಗಿಲ್ ಯುದ್ಧವೀರನ ಕೊನೆಯ ಆಸೆಯನ್ನು ಪೂರೈಸಿದ ಮಗಳು

    ನೀಲಿಮಾ ಅವರು ಇತ್ತೀಚೆಗೆ ರಾಘವ ಲಾರೆನ್ಸ್ ಅಭಿನಯದ ರುದ್ರನ್ ಚಿತ್ರದಲ್ಲಿ ವೈದ್ಯನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಅನುಭವದ ಕುರಿತು ಜನಪ್ರಿಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ನೀಲಿಮಾ ಅವರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಟಿಯರ ಅರೆಬೆತ್ತಲೆ ನಟನೆಯ ಬಗ್ಗೆ ತುಂಬಾ ಬೋಲ್ಡ್​ ಆಗಿ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಟಾಪ್​ಲೆಸ್​ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ನೀಲಿಮಾ ಅವರನ್ನು ಪ್ರಶ್ನಿಸಲಾಯಿತು.

    ಇದಕ್ಕೆ ಉತ್ತರಿಸಿದ ನೀಲಿಮಾ, ನಿಜವಾಗಿ ಟಾಸ್​ಲೆಸ್ ಆಗಿ ನಟಿಸುತ್ತಿರುವುದು ದೊಡ್ಡ ವಿಷಯ ಎಂದು ನನಗನ್ನಿಸುವುದಿಲ್ಲ. ನಾನು ಸಾಕಷ್ಟು ಚಿತ್ರಗಳನ್ನು ಮಾಡಿದ್ದೇನೆ. ಎಷ್ಟೋ ನಟಿಯರು ಇಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ನಟಿಯ ಈ ಉತ್ತರ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ಟಾಪ್​ಲೆಸ್​ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ವೈರಲ್​ ಆಯ್ತು ನಟಿ ನೀಲಿಮಾ ಕೊಟ್ಟ ಉತ್ತರ

    ಸಿನಿಮಾ ಹೊರತುಪಡಿಸಿ ನೀಲಿಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿರುತ್ತಾರೆ. ಅಭಿಮಾನಿಗಳ ಜೊತೆ ಆಗಾಗ ಸಂವಾದವನ್ನು ನಡೆಸುತ್ತಿರುತ್ತಾರೆ. ಈ ಹಿಂದೆ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪ್ರಶೋತ್ತರ ಸೆಷೆನ್ಸ್​ ನಡೆಸಿದ್ದರು. ಈ ವೇಳೆ ನೆಟ್ಟಿಗನೊಬ್ಬ ನೀವು ಧರಿಸುವ ಒಳಉಡುಪಿನ ಸೈಜ್​ ಎಷ್ಟು? ಎಂದು ಕೇಳಿದ್ದ. ಇದಕ್ಕೆ ಉತ್ತರಿಸಿದ್ದ ನೀಲಿಮಾ ನಾನೇಕೆ ಅದನ್ನು ನಿನಗೆ ಹೇಳಬೇಕು? ನೀನೇನು ಮಾರಾಟ ಮಾಡುತ್ತೀದ್ದೀಯಾ? ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ನಿಮಗೆ ಯಾವ ಲೈಂಗಿಕ ಭಂಗಿ ಇಷ್ಟ? ತಿಂಗಳಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತೀರಾ? ಎಂದು ಕೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ನೀಲಿಮಾ, ಇಂತಹ ಕ್ಷೀಣಬುದ್ಧಿ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಲಿ ಎಂದಿದ್ದರು. (ಏಜೆನ್ಸೀಸ್​)

    ನೆಟ್ಟಿಗ ಕೇಳಿದ ತೀರಾ ಅಶ್ಲೀಲ ಪ್ರಶ್ನೆಗೆ ಖ್ಯಾತ ಕಿರುತೆರೆ ನಟಿ ಕೊಟ್ಟ ಬೋಲ್ಡ್​ ಉತ್ತರ ಹೀಗಿತ್ತು…

    ತಂದೆಯಾಗಿ ಬಡ್ತಿ ಪಡೆದ ಬುಮ್ರಾ: ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಣೇಶನ್

    5 ಲಕ್ಷ ಸಾಲಕ್ಕೆ ಬಡ್ಡಿ, ಮೀಟರ್ ಬಡ್ಡಿ ಸೇರಿ 1 ಕೋಟಿ ಕೊಡ್ಬೇಕಂತೆ! ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts