ತಂದೆಯಾಗಿ ಬಡ್ತಿ ಪಡೆದ ಬುಮ್ರಾ: ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಣೇಶನ್

Jasprith Bumrha
Published on

ನವದೆಹಲಿ: ಟೀಮ್​ ಇಂಡಿಯಾದ ವೇಗದ ಬೌಲರ್​ ಜಸ್​ಪ್ರೀತ್​ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್, ಇಂದು (ಸೆ.04)​ ಗಂಡು ಮಗುವಿಗೆ ಜನ್ಮ ನೀಡಿದ್ದು, ಬುಮ್ರಾ ಅವರು ತಂದೆಯಾಗಿ ಬಡ್ತಿ ಪಡೆದಿದ್ದಾರೆ.

ಮಗುವಿಗೆ ಅಂಗದ್ ಜಸ್​ಪ್ರೀತ್​​ ಬುಮ್ರಾ​ ಎಂದು ನಾಮಕರಣ ಮಾಡಲಾಗಿದೆ. ಏಷ್ಯಾ ಕಪ್​ ಟೂರ್ನಿಯಲ್ಲಿ ಭಾಗವಹಿಸಿದ್ದ ಬುಮ್ರಾ, ಮಗ ಜನಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಂದು ನಡೆಯಲಿರುವ ನೇಪಾಳ ವಿರುದ್ಧ ಪಂದ್ಯಕ್ಕೆ ಬುಮ್ರಾ ಅಲಭ್ಯರಾಗಲಿದ್ದಾರೆ.

ಎಕ್ಷ್​ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಬುಮ್ರಾ, ನಮ್ಮ ಪುಟ್ಟ ಕುಟುಂಬ ಈಗ ಬೆಳೆದಿದೆ ಮತ್ತು ನಮ್ಮ ಹೃದಯಗಳು ನಾವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚು ತುಂಬಿವೆ. ಇಂದು ಬೆಳಗ್ಗೆ ನಾವು ನಮ್ಮ ಪುಟ್ಟ ಕಂದ ಅಂಗದ್​ ಜಸ್ಪ್ರಿತ್​ ಬೂಮ್ರಾನನ್ನು ಜಗತ್ತಿಗೆ ಸ್ವಾಗತಿಸಿದೆವು. ನಾವೀಗ ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ತನ್ನೊಂದಿಗೆ ತರುವ ಎಲ್ಲದಕ್ಕೂ ಕಾಯಲು ಸಾಧ್ಯವಿಲ್ಲ ಎನ್ನುವ ಮೂಲಕ ಬೂಮ್ರಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಕ್ರೀಡಾ ವಾಹಿನಿ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನಿರೂಪಕಿಯಾಗಿರುವ ಸಂಜನಾ ಗಣೇಶನ್, 2014ರ ಮಿಸ್ ಇಂಡಿಯಾದ ಫೈನಲಿಸ್ಟ್ ಆಗಿದ್ದಾರೆ. 28 ವರ್ಷದ ಸಂಜನಾ, ಸ್ಟಾರ್ ಸ್ಪೋರ್ಟ್ಸ್ ಅಲ್ಲದೆ, ಹಲವು ಖಾಸಗಿ ಚಾನೆಲ್‌ಗಳಲ್ಲೂ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಐಪಿಎಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ತಜ್ಞರೊಂದಿಗೆ ವಿಶ್ಲೇಷಣೆ ಮಾಡಿ, ಮೈದಾನದಿಂದ ವರದಿ ಮಾಡಿದ್ದಾರೆ.

ಬುಮ್ರಾ ಮತ್ತು ಸಂಜನಾ ಅವರದ್ದು ಲವ್​ ಮ್ಯಾರೇಜ್​. ಮಾರ್ಚ್ 14 ಮತ್ತು 15 ರಂದು ಗೋವಾದಲ್ಲಿ ಹಸೆಮಣೆ ಏರಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net