More

    ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್​ಡೌನ್​ ಧ್ವನಿ ನೀಡಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನ

    ನವದೆಹಲಿ: ಚಂದ್ರಯಾನ-3 ಮಿಷನ್​ ಉಡಾವಣೆ ಸಂದರ್ಭದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿ ಎನ್​. ವಲರಮತಿ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

    ಭಾರತದ ಮೂರನೇ ಚಂದ್ರಯಾನ ಯೋಜನೆ ಚಂದ್ರಯಾನ-3 ವೇಳೆ ರಾಕೆಟ್​ ಉಡಾವಣೆ ಸಂದರ್ಭದಲ್ಲಿ ಕೌಂಟ್​ಡೌನ್​ ಧ್ವನಿ ನೀಡಿದ ವಲರಮತಿ ಅವರು ಮೂಲತಃ ತಮಿಳುನಾಡಿನ ಅರಿಯಲೂರಿನವರು. ಶನಿವಾರ ಸಂಜೆ ಹೃದಯಾಘಾತದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಚಂದ್ರಯಾನ 3 ವೇಳೆ ನೀಡಿದ ಧ್ವನಿ ಅವರ ಕೊನೆಯ ಕೌಂಟ್​ಡೌನ್ ಧ್ವನಿಯಾಗಿದೆ.

    ಇದನ್ನೂ ಓದಿ: ಸಬ್​ಕಾ ಸಾಥ್.. ವಿಶ್ವಕ್ಕೆ ಮಾದರಿ ಮಂತ್ರ; 100 ಕೋಟಿ ಹಸಿದ ಹೊಟ್ಟೆಗಳಿಂದ 200 ಕೋಟಿ ಕುಶಲ ಕೈಗಳವರೆಗೆ ಪ್ರಗತಿ ಕಂಡಿದೆ ಭಾರತ: ಮೋದಿ

    ವಲರಮತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್, ಶ್ರೀಹರಿಕೋಟಾದಿಂದ ಇಸ್ರೋದ ಮುಂದಿನ ಕಾರ್ಯಾಚರಣೆಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕ್ಷಣಗಣನೆ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ನಿಮಗೆ ಪ್ರಣಾಮಗಳು ಎಂದು ಎಕ್ಷ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವಲರಮತಿ ಅವರು ನಿಧನಕ್ಕೆ ಸಂತಾಪಗಳನ್ನು ಸೂಚಿಸುತ್ತಿದ್ದಾರೆ.

    ಅಂದಹಾಗೆ ಚಂದ್ರಯಾನ 3 ಮಿಷನ್​ನನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಆಗಸ್ಟ್​ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ ಲ್ಯಾಂಡರ್​ ಮತ್ತು ಪ್ರಗ್ಯಾನ್​ ರೋವರ್​ ಒಳಗೊಂಡಿದ್ದ ಲ್ಯಾಂಡರ್​ ಮಾಡ್ಯೂಲ್​ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಸಾಫ್ಟ್​ ಲ್ಯಾಂಡಿಂಗೆ ಮಾಡಿತು. ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದೆ.

    ಇದನ್ನೂ ಓದಿ: ಫೇಕ್ ವೆಬ್​ಸೈಟ್​ಗಳ ಹಾವಳಿ: ಶಾಪಿಂಗ್, ನೌಕರಿ, ತರಬೇತಿ ಹೆಸರಲ್ಲಿ ಮೋಸ; ಜನರ ಸಾವಿರಾರು ಕೋಟಿ ರೂಪಾಯಿ ಲೂಟಿ

    ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನಲ್ಲಿಗೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ-3 ಗಳಿಸಿದೆ. ಚಂದ್ರನ 1 ದಿನ ಭೂಮಿಯ 14ಕ್ಕೆ ಸಮನಾಗಿದ್ದು, 14 ದಿನ ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್​ ರೋವರ್​ ಇದೀಗ ಸ್ತಬ್ಧವಾಗಿದೆ. ಸೆ. 22ಕ್ಕೆ ಮತ್ತೆ ಕಾರ್ಯಾಚರಣೆ ಆರಂಭಿಸಬಹುದು ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲೆ ಸಲ್ಫರ್​ ಸೇರಿದಂತೆ ಅನೇಕ ಅಂಶಗಳು ಇರುವುದನ್ನು ಪ್ರಗ್ಯಾನ್​ ರೋವರ್​ ಪತ್ತೆಹಚ್ಚಿದೆ. (ಏಜೆನ್ಸೀಸ್​)

    ಸೋಫಾ ಸೆಟ್‌ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್‌ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ

    ಕನ್ನಡಿಗ ರಾಹುಲ್​ ಫಿಟ್​; ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ವಿಶ್ವಕಪ್​ಗೆ ಭಾರತ ತಂಡ ಬಹುತೇಕ ಅಂತಿಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts