ಈ ಸ್ಥಳಕ್ಕೆ ಹೋಗಲು ಹೆದರುತ್ತಿರುವ ಗ್ರಾಮಸ್ಥರು...!

Villagers
Published on

ತುಮಕೂರು: ಹೆಣ್ಣು ಪ್ರತಿಮೆಗೆ ಕರಿ ಮೇಕೆಗಳ ಬಲಿಕೊಟ್ಟು ಕ್ಷುದ್ರದೇವತೆಯ ಆರಾಧನೆ ಮಾಡಿರುವ ಘಟನೆ ಹೆಬ್ಬೂರು ವ್ಯಾಪ್ತಿಯ ರಾಮೇಗೌಡನಪಾಳ್ಯ ಹಾಗೂ ತುರುಚನಕಟ್ಟೆ ಗ್ರಾಮದ ಬಳಿಯ ಹೇಮಾವತಿ ನಾಲೆ ಬಳಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

ಎರಡು ದಿನದ ಹಿಂದೆ ತಡರಾತ್ರಿ 12 ಗಂಟೆಗೆ ಹೆಣ್ಣು ಪ್ರತಿಮೆಗೆ ದಿಗ್ಭಂಧನ ಹಾಕಿ ಕರಿ ಮೇಕೆಗಳ ಬಲಿ ನೀಡಿ ವಾಮಾಚಾರ ಅಥವಾ ಭೂತೋಪಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಣ್ಣಿನ ಗೊಂಬೆಗೆ ನಿಂಬೆಹಣ್ಣಿನ ರಸದಿಂದ ಅಭಿಷೇಕವನ್ನು ಮಾಡಲಾಗಿದೆ. ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಹೆಬ್ಬೂರು ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹೋಗಲು ಗ್ರಾಮಸ್ಥರು ತುಂಬಾ ಭಯ ಪಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net