More

    ಬೆಡಗಿಯರ ‘ಚಾಲೆಂಜ್ ಎಕ್ಸೆಪ್ಟೆಡ್’ : ಭಾರತದ ಮೇಲೆ ತಮಗಿರುವ ಪ್ರೀತಿ ವ್ಯಕ್ತಪಡಿಸಿದ ಸೋನಮ್

    ನವದೆಹಲಿ:  ಇದೀಗ ಸಾಮಾಜಿಕ ಜಾಲತಾಣದ ತುಂಬೆಲ್ಲ, ಅದೂ ಹೆಚ್ಚಾಗಿ ವಾರಾಂತ್ಯದಲ್ಲಿ ‘ಚಾಲೆಂಜ್ ಎಕ್ಸೆಪ್ಟೆಡ್’ ಟ್ರೆಂಡ್ ಹೆಚ್ಚುತ್ತಿದೆ.
    ವಾರಾಂತ್ಯದಲ್ಲಿ ವಾಟ್ಸ್ಯಾಪ್, ಇನ್‌ಸ್ಟಾಗ್ರಾಮ್ ತೆರೆದರೆ ಅದರ ತುಂಬೆಲ್ಲ ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರಗಳ ಪ್ರವಾಹವೇ. ಇದರಲ್ಲಿ ಸೆಲೆಬ್ರಿಟಿಗಳ ಪಾಲು ಅಧಿಕ. ಫಿಲ್ಟರ್ ಮಾಡಿದ ತಮ್ಮ ಫೋಟೋ ಹಾಕಿ “ಚಾಲೆಂಜ್ ಎಕ್ಸೆಪ್ಟೆಡ್” ಎಂದು ಬರೆದಿರುತ್ತಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಹಳೆಯ ಟ್ರೆಂಡ್ ಸಾಮಾಜಿಕ ಮಾಧ್ಯಮದಲ್ಲಿ ಮರುಜೀವ ಪಡೆದುಕೊಂಡಿದೆ.
    ಯಾಕಿದು ಚಾಲೆಂಜ್ ಎಕ್ಸೆಪ್ಟೆಡ್?: ವೈರಲ್ ಆದ ಚಾಲೆಂಜ್ ಅಕ್ಸೆಪ್ಟೆಡ್ ಸವಾಲು ಕಪ್ಪು ಮತ್ತು ಬಿಳಿ ಫೋಟೊ ಹಂಚಿಕೊಳ್ಳುವುದು, ಸಕಾರಾತ್ಮಕತೆ ಮತ್ತು ಮಹಿಳಾ ಸಬಲೀಕರಣ ಬೆಂಬಲಿಸುವ ಮಾರ್ಗವಾಗಿ ಸ್ನೇಹಿತರನ್ನು ಆಹ್ವಾನಿಸುವುದನ್ನು ಒಳಗೊಂಡಿರುತ್ತದೆ.
    ಈ ಸವಾಲಿನಲ್ಲಿ ಟೀನಾ ಅಂಬಾನಿ, ಕರಿಷ್ಮಾ ಕಪೂರ್, ಬಿಪಾಶಾ ಬಸು ಸೇರಿ ಇನ್ನೂ ಹಲವು ಘಟಾನುಘಟಿ ಸೆಲೆಬ್ರಿಟಿಗಳೂ ಭಾಗಿಯಾಗಿದ್ದಾರೆ.

    ಇದನ್ನೂ ಓದಿ:  ಸುಶಾಂತ್​ ಕೇಸ್​ ಸಿಬಿಐಗೆ ಯಾಕೆ ಒಪ್ಪಿಸುತ್ತಿಲ್ಲ? ಅಭಿಮಾನಿಗಳ ಪ್ರಶ್ನೆ …

    ಈ ಮಧ್ಯೆ ” ಈ ಜಗತ್ತಿನ ಸುತ್ತಲೂ ನಕಾರಾತ್ಮಕತೆ ತುಂಬಿ ತುಳುಕುತ್ತಿರುವಾಗ, ನಾವೆಲ್ಲ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳೋಣ” ಎಂದು ಟೀನಾ ಅಂಬಾನಿ ಕಪ್ಪು ಬಿಳುಪು ಫೋಟೊ ಹಂಚಿಕೊಳ್ಳುವುದರ ಜತೆಗೆ ಬರೆದುಕೊಂಡಿದ್ದಾರೆ. “ಮಹಿಳೆಯರಾದ ನಾವು ಒಬ್ಬರನ್ನೊಬ್ಬರು ಕೆಳಕ್ಕೆ ಎಳೆಯುವ ಬದಲು ನಮ್ಮನ್ನು ಮೇಲಕ್ಕೆತ್ತಿಕೊಳ್ಳೋಣ.” ಎಂಬ ಸಂದೇಶ ಕೂಡ ಸಾರಿದ್ದಾರೆ.
    ದಿಯಾ ಮಿರ್ಜಾ, ಬಿಪಾಶಾ ಬಸು, ಕರಿಷ್ಮಾ ಕಪೂರ್, ಡಿಸೈನರ್ ಮಸಾಬಾ ಗುಪ್ತಾ, ಮೀರಾ ಕಪೂರ್ ಕಪ್ಪು ಬಿಳುಪು ಫೋಟೊ ಹಂಚಿಕೊಂಡಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿರುವ ಸೋನಮ್ ಕಪೂರ್ ಅವರು ಕೇನ್ಸ್‌ನಿಂದ ಚಿತ್ರವನ್ನು ಹಂಚಿಕೊಂಡಿದ್ದಾರೆ. “ನಾನು ಈ ಕಪ್ಪು ಮತ್ತು ಬಿಳಿ ಚಿತ್ರವನ್ನು ಪ್ರೀತಿಸುತ್ತೇನೆ. ಇದು ಭಾರತ ಮತ್ತು ಭಾರತೀಯ ಸೃಜನಶೀಲತೆಯ ಮೇಲಿನ ನನ್ನ ಪ್ರೀತಿಯನ್ನು ಪ್ರತಿನಿಧಿಸುತ್ತದೆ” ಎಂದು ಹೇಳಿಕೊಂಡಿದ್ದಾರೆ.  ಈ ಸವಾಲು ಮೂಲತಃ 2016 ರಲ್ಲಿ ಪ್ರಾರಂಭವಾಯಿತು, ಮತ್ತು ನಂತರ ಹಲವು ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಪುನರುಜ್ಜೀವನಗೊಂಡಿದೆ.

    ಬೆಡಗಿಯರ 'ಚಾಲೆಂಜ್ ಎಕ್ಸೆಪ್ಟೆಡ್' : ಭಾರತದ ಮೇಲೆ ತಮಗಿರುವ ಪ್ರೀತಿ ವ್ಯಕ್ತಪಡಿಸಿದ ಸೋನಮ್

    60ರಲ್ಲಿ ಬದುಕು ಮುಗಿಸಿಕೊಂಡ ಕರೊನಾ ವಾರಿಯರ್: ಸೋಂಕಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ಅಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts