

ಮೌಂಟ್ ಮೌಂಗನುಯಿ: ನಾಯಕ ಕೇನ್ ವಿಲಿಯಮ್ಸನ್ (112*) ಸಿಡಿಸಿದ ದಾಖಲೆಯ 30ನೇ ಶತಕ ಮತ್ತು ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (118*) ಸಿಡಿಸಿದ ಚೊಚ್ಚಲ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕಿವೀಸ್ ದಿನದಂತ್ಯಕ್ಕೆ 2 ವಿಕೆಟ್ಗೆ 258 ರನ್ ಪೇರಿಸಿದೆ. ತವರಿನ ಟಿ20 ಲೀಗ್ ಹಿನ್ನೆಲೆಯಲ್ಲಿ ದ್ವೀತಿಯ ದರ್ಜೆ ತಂಡವನ್ನು ಕಣಕ್ಕಿಳಿಸಿರುವ ದಕ್ಷಿಣ ಆಫ್ರಿಕಾ, ಮೊದಲ 2 ವಿಕೆಟ್ಗಳನ್ನು 39 ರನ್ಗಳಿಗೆ ಕಬಳಿಸಿ ಆತಿಥೇಯರಿಗೆ ಆರಂಭಿಕ ಆಘಾತ ನೀಡಿತು. ನಂತರ ಕೇನ್-ರಚಿನ್ ಮುರಿಯದ 3ನೇ ವಿಕೆಟ್ಗೆ 219 ರನ್ ಸೇರಿಸಿದರು.