More

    FACT-CHECK| ಮಗುವಿನ ನಿರೀಕ್ಷೆಯಲ್ಲಿರುವರೇ ಕೊಹ್ಲಿ-ಅನುಷ್ಕಾ ದಂಪತಿ?

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ 3 ತಿಂಗಳಿನಿಂದ ಮುಂಬೈನ ಮನೆಯಲ್ಲಿ ಲಾಕ್ ಆಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿನ ತಮ್ಮ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ-ವಿಡಿಯೋಗಳನ್ನು ಹಂಚುತ್ತಿರುವ ಈ ಸ್ಟಾರ್ ಸೆಲೆಬ್ರಿಟಿ ದಂಪತಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ ಎಂದು ಇತ್ತೀಚೆಗೆ ಸುದ್ದಿ ಹರಡಿತ್ತು. ಕೊಹ್ಲಿ-ಅನುಷ್ಕಾ ದಂಪತಿ ಲಾಕ್‌ಡೌನ್ ಸಮಯದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂಬ ಸುದ್ದಿಗೆ ಪೂರಕವಾಗಿ ಅನುಷ್ಕಾ ಶರ್ಮ ಬೇಬಿ ಬಂಪ್ ಪ್ರದರ್ಶಿಸುತ್ತಿರುವ ಮತ್ತು ಹಿಂಬದಿಯಿಂದ ವಿರಾಟ್ ಕೊಹ್ಲಿ ತಬ್ಬಿಕೊಂಡಿರುವ ಚಿತ್ರ ವೈರಲ್ ಆಗಿತ್ತು.

    ಇದನ್ನೂ ಓದಿ: ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಇಯಾನ್ ಬಾಥಂಗೆ ಡಿಸೆಂಬರ್‌ನಲ್ಲೇ ಕರೊನಾ ಬಂದಿತ್ತು!

    ಈ ಸುದ್ದಿ ಮತ್ತು ಚಿತ್ರದ ನಿಜಾಂಶದ ಬಗ್ಗೆ ಬೆನ್ನತ್ತಿ ಹೋದಾಗ ಇದೊಂದು ಫೇಕ್ ನ್ಯೂಸ್ ಎಂಬುದು ಸ್ಪಷ್ಟವಾಗಿದೆ. ಬಾಲಿವುಡ್ ತಾರೆಯರಾದ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾಗ ಪ್ರಕಟಿಸಿದ್ದ ಚಿತ್ರವನ್ನೇ ತಿರುಚಿ ಕೊಹ್ಲಿ-ಅನುಷ್ಕಾ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವಂತೆ ಬಿಂಬಿಸಲಾಗಿದೆ. ಇದರಿಂದ ಅನುಷ್ಕಾ ಶರ್ಮ ಗರ್ಭಿಣಿಯಾಗಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.

    FACT-CHECK| ಮಗುವಿನ ನಿರೀಕ್ಷೆಯಲ್ಲಿರುವರೇ ಕೊಹ್ಲಿ-ಅನುಷ್ಕಾ ದಂಪತಿ?

    ಕೊಹ್ಲಿ ಮತ್ತು ಅನುಷ್ಕಾ 2017ರ ಡಿಸೆಂಬರ್‌ನಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಅಭಿಮಾನಿಗಳು ಅವರಿಂದ ಗುಡ್‌ನ್ಯೂಸ್ ಪಡೆಯಲು ಇನ್ನಷ್ಟು ಸಮಯ ಕಾಯಬೇಕೆಂಬುದು ಖಚಿತವಾಗಿದೆ.

    ಜ್ವಾಲಾ ಗುಟ್ಟಾ ಮನೆಯ ವಿದ್ಯುತ್ ಬಿಲ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts