More

    ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಇಯಾನ್ ಬಾಥಂಗೆ ಡಿಸೆಂಬರ್‌ನಲ್ಲೇ ಕರೊನಾ ಬಂದಿತ್ತು!

    ಲಂಡನ್: ಚೀನಾದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲೇ ಕರೊನಾ ವೈರಸ್ ಹುಟ್ಟಿಕೊಂಡಿದ್ದರೂ, ವಿಶ್ವದೆಲ್ಲೆಡೆ ಅದರ ಹಾವಳಿ ಶುರುವಾಗಿದ್ದು ಕಳೆದ ಮಾರ್ಚ್‌ನಲ್ಲಿ. ಆದರೆ ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಇಯಾನ್ ಬಾಥಂಗೆ ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲೇ ಕರೊನಾ ಸೋಂಕು ಬಂದಿತ್ತಂತೆ! ಆದರೆ ಅವರು ಅದನ್ನು ಫ್ಲು ಎಂದೇ ತಿಳಿದುಕೊಂಡಿದ್ದರಂತೆ!

    ಇದನ್ನೂ ಓದಿ: VIDEO|ಧೋನಿ ಹಾಡಿನ ಟೀಸರ್ ಬಿಡುಗಡೆ ಮಾಡಿದ ಬ್ರಾವೊ

    ‘ಆರು ತಿಂಗಳ ಹಿಂದೆ ಯಾರಿಗೂ ಕೊರನಾ ಸೋಂಕಿನ ಬಗ್ಗೆ ತಿಳಿದಿರಲಿಲ್ಲ ಮತ್ತು ಅದರ ಬಗ್ಗೆ ಕೇಳಿರಲಿಲ್ಲ. ಆದರೆ ನನಗೆ ಆಗಲೇ ಕರೊನಾ ಸೋಂಕು ಬಂದಿತ್ತು. ಡಿಸೆಂಬರ್ ಅಂತ್ಯದಲ್ಲಿ ಮತ್ತು ಜನವರಿ ಆರಂಭದಲ್ಲಿ ನನಗೆ ಕರೊನಾ ಅಂಟಿಕೊಂಡಿತ್ತು. ಆದರೆ ನಾನು ಅದನ್ನು ಅತಿ ಕೆಟ್ಟ ಫ್ಲು ಸೋಂಕು ಇರಬಹುದೆಂದು ತಿಳಿದುಕೊಂಡಿದ್ದೆ’ ಎಂದು 64 ವರ್ಷದ ಬಾಥಂ ‘ಗುಡ್ ಮಾರ್ನಿಂಗ್ ಬ್ರಿಟನ್’ ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಕರೊನಾ ಸೋಂಕು ತಮಗೆ ಹೇಗೆ ಅಂಟಿಕೊಂಡಿತ್ತು ಎಂಬುದನ್ನು ಅವರು ವಿವರಿಸಿಲ್ಲ.

    ಇದನ್ನೂ ಓದಿ: ದೇಶೀಯ ಕ್ರಿಕೆಟಿಗರಿಗೆ ಇನ್ನೂ ಸಿಕ್ಕಿಲ್ಲ ವೇತನ! ತಾಂತ್ರಿಕ ಬಿಕ್ಕಟ್ಟಿನಿಂದಾಗಿ ಸಮಸ್ಯೆ; ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ನಿರ್ಲಕ್ಷ್ಯ

    ‘ಕರೊನಾ ಸೋಂಕು ಇನ್ನು ಎಷ್ಟು ಸಮಯ ನಮ್ಮನ್ನು ಬಾಧಿಸಲಿದೆ ಎಂದು ಯಾರಿಗೂ ಗೊತ್ತಿಲ್ಲ. ನಾವೆಲ್ಲರೂ ಅಂಧಕಾರದಲ್ಲಿದ್ದೇವೆ. ಜನರು ತಾಳ್ಮೆಯಿಂದ ಇದ್ದರೆ ಇದನ್ನು ಎದುರಿಸಿ ನಿಲ್ಲಬಹುದು. ಇನ್ನು ಕೆಲ ವಾರಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು’ ಎಂದು ಬಾಥಂ ಹೇಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿರುವ ಬಾಥಂ, 102 ಟೆಸ್ಟ್‌ಗಳಲ್ಲಿ 5,200 ರನ್ ಮತ್ತು 383 ವಿಕೆಟ್ ಗಳಿಸಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 2,113 ರನ್ ಮತ್ತು 145 ವಿಕೆಟ್ ಗಳಿಸಿದ್ದಾರೆ.

    ಜ್ವಾಲಾ ಗುಟ್ಟಾ ಮನೆಯ ವಿದ್ಯುತ್ ಬಿಲ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts