More

    VIDEO|ಧೋನಿ ಹಾಡಿನ ಟೀಸರ್ ಬಿಡುಗಡೆ ಮಾಡಿದ ಬ್ರಾವೊ

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ನಾಯಕರಾಗಿ ಹಲವು ವಿದೇಶಿ ಕ್ರಿಕೆಟಿಗರ ಪ್ರೀತಿ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇಯ್ನ ಬ್ರಾವೊ ಅದರಲ್ಲೊಬ್ಬರು. ಧೋನಿ ನಾಯಕತ್ವ, ಬ್ಯಾಟಿಂಗ್, ವ್ಯಕ್ತಿತ್ವಕ್ಕೆ ಮಾರು ಹೋಗಿರುವ ಅವರು ಧೋನಿ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. ಸ್ವತಃ ಗಾಯಕರೂ ಆಗಿ ಈಗಾಗಲೇ ಹಲವು ಆಲ್ಬಂ ಬಿಡುಗಡೆ ಮಾಡಿರುವ ಬ್ರಾವೊ, ಧೋನಿ ಬಗೆಗಿನ ಹಾಡನ್ನೂ ತಾವೇ ಹಾಡಿದ್ದಾರೆ.

    ಇದನ್ನೂ ಓದಿ: ಭಾರತದ ಮೊದಲ ಸಿಕ್ಸರ್ ಸಿಡಿಸಿದ್ದು ಯಾರು ಗೊತ್ತೇ?

    ಧೋನಿ ಬಗ್ಗೆ ಹಾಡಿರುವ ಹಾಡಿನ ಟೀಸರ್ ಅನ್ನು ಅವರು ಇದೀಗ ಬಿಡುಗಡೆ ಮಾಡಿದ್ದಾರೆ. ‘ಎಂಎಸ್ ಧೋನಿ ನಂಬರ್ 7’ ಎಂದು ಹಾಡು ಆರಂಭಗೊಳ್ಳುತ್ತದೆ. ‘2007ರ ಟಿ20 ಚಾಂಪಿಯನ್, 2011ರ ವಿಶ್ವ ಚಾಂಪಿಯನ್, ದೇಶಕ್ಕಾಗಿ ಎಲ್ಲ ಟ್ರೋಫಿ ಗೆದ್ದ ಮೊದಲ ನಾಯಕ. ಎಲ್ಲರೂ ಬನ್ನಿ ಹೆಲಿಕಾಪ್ಟರ್ ಸೆಲಬ್ರೆಷನ್ ಮಾಡೋಣ… ’ ಎಂದು ಹಾಡು ಮುಂದುವರಿಯುತ್ತದೆ.

    ಇದನ್ನೂ ಓದಿ: ಜ್ವಾಲಾ ಗುಟ್ಟಾ ಮನೆಯ ವಿದ್ಯುತ್ ಬಿಲ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ!

    ನಿಮ್ಮದೇ ಶೈಲಿಯ ಹೆಲಿಕಾಪ್ಟರ್ ಡಾನ್ಸ್ ಮಾಡಿ ಅದರ ವಿಡಿಯೋ ಕಳುಹಿಸಿ ಎಂದು ಬ್ರಾವೊ, ಧೋನಿ ಅಭಿಮಾನಿಗಳಿಗೆ ಸವಾಲನ್ನೂ ಎಸೆದಿದ್ದಾರೆ. ಈ ಪೂರ್ಣ ಹಾಡು ಧೋನಿ 39ನೇ ಜನ್ಮದಿನವಾದ ಜುಲೈ 7ರಂದು ಬಿಡುಗಡೆಯಾಗಲಿದೆ ಎಂದೂ ಬ್ರಾವೊ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts