ನೆಲ್ಯಾಡಿ: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಹಡಿಲು ಎಂಬಲ್ಲಿ ರಾಮಣ್ಣ ಗೌಡ, ಲಕ್ಷ್ಮಣ ಗೌಡ, ಸೇಸಪ್ಪ ಗೌಡ, ಮುದಳೆ ರವಿ ಗೌಡ ಎಂಬುವರ ತೋಟಕ್ಕೆ ಶನಿವಾರ ರಾತ್ರಿ ಆನೆ ನುಗ್ಗಿದ್ದು, ಅಡಕೆ ಗಿಡಗಳು ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿದೆ.
ಹದಿಲು ಮತ್ತು ಹೊಸವಕ್ಕಲು ಪ್ರದೇಶದ ತೋಟಗಳಿಗೆ ನುಗ್ಗಿದ ಆನೆ ಅಪಾರ ಪ್ರಮಾಣದ ಅಡಕೆ ಹಾಗೂ ಬಾಳೆ ಕೃಷಿಯನ್ನು ನಾಶಗೊಳಿಸಿದೆ. ಭಾನುವಾರ ಹಗಲು ಹೊತ್ತಿನಲ್ಲಿ ನೆಲೆ ಸಮೀಪದ ಬಣ್ಣದಲ್ಲಿಯೂ ಆನೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ.