ನೇತ್ರದಾನ, ರಕ್ತದಾನದಿಂದ ಸಾಮಾಜಿಕ ಕಳಕಳಿ ಜಾಗೃತಿ: ಶ್ರೀನಿವಾಸ ಸಪಲ್ಯ

blood camp

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಜಾತಿ, ಧರ್ಮ ಎಲ್ಲೆಮೀರಿ ನಿಂತು ಸೌಹಾರ್ದ ಭಾವನೆ ಮೂಡಿಸಿ ಎಲ್ಲರಲ್ಲೂ ಸಾಮಾಜಿಕ ಕಳಕಳಿ ಜಾಗೃತಿಗೊಳಿಸುವ ದಾನವೇ ರಕ್ತದಾನ. ರಕ್ತದಾನದಿಂದ ಮತ್ತೊಂದು ಜೀವಕ್ಕೆ ಜೀವದಾನ ದೊರೆಯುತ್ತದೆ ಎಂದು ಮುಂಬೈ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಮುಂಬೈ ನುಡಿದರು.

ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟದದಲ್ಲಿ ವಿಶ್ವ ಗಾಣಿಗರ ಚಾವಡಿ ಟ್ರಸ್ಟ್ ದಶಮಾನೋತ್ಸವ ಸಂಭ್ರಮ ಪ್ರಯುಕ್ತ ನಡೆದ ವಿದ್ಯಾನಿಧಿ ವಿತರಣೆ, ರಕ್ತದಾನ, ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಒಂದೇ ವೇದಿಕೆಯ ಮೂಲಕ ಹಲವು ಯೋಜನೆಗಳನ್ನು ಬಡವರ ಮನೆಗಳಿಗೆ ತಲುಪಿಸುವ ಕೆಲಸ ನಿಜಕ್ಕೂ ಸ್ವಾಗತಾರ್ಹ. ಯುವ ಸಮುದಾಯದ ಸೇವಾ ಮನೋಭಾವದಿಂದ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿ ಎಂದು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಪಲ್ಯ ಹೇಳಿದರು.

ನೇತ್ರದಾನ, ರಕ್ತದಾನದಿಂದ ಸಾಮಾಜಿಕ ಕಳಕಳಿ ಜಾಗೃತಿ: ಶ್ರೀನಿವಾಸ ಸಪಲ್ಯ

ದ.ಕ. ಜಿಲ್ಲಾ ಗಾಣಿಗರ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ಶಾಲಿನಿ ಅತ್ತಾವರ, ಸುಮಂಗಲಾ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಸಫಲ ಸೌಹಾರ್ದ ಸಹಕಾರಿ ನಿ.ನಿರ್ದೇಶಕ ಭಾಸ್ಕರ್ ಎಸ್. ಸಪಲಿಗ, ದಿ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕಿ ಉಷಾ ಕೆ. ಮಳಲಿ, ರತಿಕಾ ಶ್ರೀನಿವಾಸ್ ಸಪಲಿಗ, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಮೊಕ್ತೇಸರ ಕೇಶವ ಮಳಲಿ, ವಿಜಿಸಿ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ಪ್ರಮುಖರಾದ ಉಮೇಶ್, ರಾಮ್‌ದಾಸ್ ಬಂಟ್ವಾಳ, ಕೇಶವ ದೈಪಲ, ಮನೋಹರ ಕಂಜತ್ತೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತನಿಧಿ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಪ್ರವೀಣ್, ವಿದ್ಯಾ ಪಿ. ಪಾಣೆಮಂಗಳೂರು, ಪುಷ್ಪರಾಜ್ ಪಾಣೆಮಂಗಳೂರು, ಅನಂತವಿಜಯ್ ತುಂಬೆ, ಸಚಿನ್ ಮೆಲ್ಕಾರ್, ಶ್ರೀಕಾಂತ್ ನರಿಕೊಂಬು, ಸುಮಿತ್ರಾ ನೂಯಿ, ಸಂದೀಪ್ ಮೆಂಡನ್ ಎಡಪದವು, ದೇವರಾಜ್ ಎಡಪದವು, ಯುವರಾಜ್ ಬೋಳಂಗಡಿ, ಧನಂಜಯ ಬಂಗೇರ, ಪುರುಷೋತ್ತಮ ನರಿಕೊಂಬು, ಭವ್ಯ ಮಂಜೇಶ್ವರ, ವನಿತಾ ಕರಿಂಗಾನ, ಶರ್ಮಿಳಾ ಅಳಪೆ, ಗಾಯತ್ರಿ ಬಂಗೇರ, ರಕ್ಷಾ ಮಂಜೇಶ್ವರ, ವಿಜಯಲಕ್ಷ್ಮಿಬೆಳ್ತಂಗಡಿ, ಸುಜಾತಾ ಕಡೆಗೋಳಿ, ಕವಿತಾ ಅಡ್ಕ, ಸಚಿನ್ ವಗ್ಗ ಮತ್ತಿತರರು ಉಪಸ್ಥಿತರಿದ್ದರು.

ವಿಜಯಾ ಯೋಗೀಶ್ ಪೊಯ್ತಜೆ ನಿರೂಪಿಸಿದರು. ವಿಜಿಸಿ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಎಂ. ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ್ ಡಿ.ಶಂಭೂರು ವಂದಿಸಿದರು. ಅನಿತಾ ಶಂಭೂರು ಪ್ರಾರ್ಥಿಸಿದರು. ಗೇನದ ತುಡರ್ ವಿದ್ಯಾನಿಧಿ ಹಸ್ತಾಂತರಿಸಿದ ಶ್ರೀನಿವಾಸ ಸಪಲ್ಯ ದಂಪತಿಯನ್ನು ಸನ್ಮಾನಿಸಲಾಯಿತು.

ನೇತ್ರದಾನ ಘೋಷಣೆ: ಶಿಬಿರದಲ್ಲಿ ಮೂವರು ನೇತ್ರದಾನ ಘೋಷಿಸಿದರು. ಇದರಿಂದ ನೇತ್ರದಾನ ಘೋಷಿಸಿದ ವಿಜಿಸಿ ಸದಸ್ಯರ ಸಂಖ್ಯೆ 125ಕ್ಕೆ ಏರಿಕೆಯಾಯಿತು.

ನೇತ್ರದಾನ, ರಕ್ತದಾನದಿಂದ ಸಾಮಾಜಿಕ ಕಳಕಳಿ ಜಾಗೃತಿ: ಶ್ರೀನಿವಾಸ ಸಪಲ್ಯ

ಶಿಬಿರದಿಂದಲೇ ತುರ್ತು ರಕ್ತ ಪೂರೈಕೆ

ರಕ್ತದಾನ ಶಿಬಿರದ ಆರಂಭದಲ್ಲೇ ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆಗೆ ತುರ್ತಾಗಿ ರಕ್ತದ ಪೂರೈಕೆಗೆ ಬೇಡಿಕೆ ಬಂದಾಗ ಸುಮಾರು 25 ಯೂನಿಟ್ ರಕ್ತವನ್ನು ವಿಜಿಸಿ ಸದಸ್ಯರು ಆಸ್ಪತ್ರೆಗೆ ತೆರಳಿ ಹಸ್ತಾಂತರಿಸಿ ಮೆಚ್ಚುಗೆಗೆ ಪಾತ್ರರಾದರು.

ನೇತ್ರ ತಪಾಸಣೆ, ಚೆಕ್ ವಿತರಣೆ

ದಶಮಾನೋತ್ಸವ ಸಂಭ್ರಮ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕ ವಿತರಣೆ, ನೇತ್ರದಾನ ಘೋಷಣೆ, ಆರೋಗ್ಯ ಸಂಜೀವಿನಿ ಚೆಕ್ ವಿತರಣೆ, ಶ್ರೀನಿವಾಸ ಸಾಪಲ್ಯ ಅವರಿಂದ ಗೇನದ ತುಡರ್ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ನೆರವೇರಿತು. 200ಕ್ಕೂ ಅಧಿಕ ಫಲಾನುಭವಿಗಳು ವಿವಿಧ ಯೋಜನೆಗಳ ಸವಲತ್ತು ಪಡೆದರು. ಗೇನದ ತುಡರ್ ವಿದ್ಯಾನಿಧಿ ಹಸ್ತಾಂತರಿಸಿದ ಶ್ರೀನಿವಾಸ ಸಪಲ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ ಅಧ್ಯಕ್ಷ ರಘು ಸಪಲ್ಯ, ದ.ಕ. ಜಿಲ್ಲಾ ಗಾಣಿಗರ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ಶಾಲಿನಿ ಅತ್ತಾವರ, ಸುಮಂಗಲಾ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಸಫಲ ಸೌಹಾರ್ದ ಸಹಕಾರಿ ನಿ. ನಿರ್ದೇಶಕ ಭಾಸ್ಕರ್ ಎಸ್. ಸಪಲಿಗ, ವಿಜಿಸಿ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ ಮತ್ತಿತರರಿದ್ದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ