

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಉಪಟಳ ಮುಂದುವರಿದಿದ್ದು ಮಂಗಳವಾರ ರಾತ್ರಿ ಮಾವಂಜಿ, ಪಡ್ಪು ಭಾಗದಲ್ಲಿ ಆನೆಗಳು ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ಧ್ವಂಸಗೈದಿವೆ.
ಪಡ್ಪು ಧನಂಜಯ, ದಿನಕರ ಹಾಗೂ ಸಂತೋಷ ಗೌಡ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೆಂಗು, ಬಾಳೆ ಹಾಗೂ ಅಡಕೆ ಮರಗಳನ್ನು ಪುಡಿಗೈದಿವೆ. ಕಾಡಾನೆಗಳ ಉಪಟಳ ತಡೆಯಲು ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕೆಂಬ ರೈತರ ಬೇಡಿಕೆಗೆ ಇಲ್ಲಿಯವರೆಗೆ ಸ್ಪಂದನೆ ದೊರೆತಿಲ್ಲ ಎಂಬುದು ಈ ಭಾಗದ ರೈತರ ಅಳಲು.