ಪೂವಡ್ಕದಲ್ಲಿ ಕಾಡುಕೋಣಗಳ ಸಂಚಾರ

New Project (44)
Published on

ಕಾಸರಗೋಡು: ಮುಳ್ಳೇರಿಯ ಸನಿಹದ ಪೂವಡ್ಕ ಪ್ರದೇಶದಲ್ಲಿ ಕಾಡುಕೋಣಗಳ ಗುಂಪು ಕಾಣಿಸಿಕೊಂಡಿದ್ದು, ಈ ಪ್ರದೇಶದ ಜನರ ನಿದ್ದೆಗೆಡಿಸಿದೆ. ಕಾಡಿನಿಂದ ನಾಡಿಗಿಳಿದು ರಸ್ತೆಯಲ್ಲೇ ಅಡ್ಡಾಡುತ್ತಿರುವ ಕಾಡುಕೋಣಗಳು ಜನಸಂಚಾರ ಲೆಕ್ಕಿಸದೆ ಓಡಾಟ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವು ದಿನಗಳಿಂದ ಚೆರ್ಕಳ- ಜಾಲ್ಸೂರು ಅಂತಾರಾಜ್ಯ ಹೆದ್ದಾರಿಯ ಪೂವಡ್ಕ ಆಸುಪಾಸು ಕಾಡುಕೋಣಗಳು ಗುಂಪಾಗಿ ಸಂಚರಿಸುತ್ತಾ ಜನರಲ್ಲಿ ಭೀತಿ ಸೃಷ್ಟಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net