

ಪಡುಬಿದ್ರಿ: ಮುದರಂಗಡಿ ಗ್ರಾಮದ ಸಾಂತೂರು ಪರಿಸರದಲ್ಲಿ ಶುಕ್ರವಾರ ಸಂಜೆ ಕಾಡುಕೋಣ ಕಂಡುಬಂದಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಹಲವು ದಿನಗಳಿಂದ ಪಿಲಾರು, ಸಾಂತೂರು ಪರಿಸರದಲ್ಲಿ ಕಾಡುಕೋಣಗಳ ಹಿಂಡು ಪದೇಪದೆ ಕಾಣಿಸಿಕೊಂಡು ಕೃಷಿಕರ ನಿದ್ದೆಗೆಡಿಸುತ್ತಿದ್ದು, ಕತ್ತಲಾದಂತೆ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚರಿಸಲು ಭಯಪಡುವಂತಾಗಿದೆ.