ಹೆಂಡತಿ ಮೀನು ಹಿಡಿಯೋಕೆ ಬರಲಿಲ್ಲ; ಅದಕ್ಕೆ ಅವಳ ಕಥೆಯನ್ನೇ ಮುಗಿಸಿಬಿಟ್ಟೆ!

ದೆಅದ
Published on

ಭೋಪಾಲ್​: ಸದಾ ಜಗಳವಾಡುತ್ತಿದ್ದ ಪತಿರಾಯ ಅವತ್ತೊಂದಿನ ಮೀನು ಹಿಡಿಯೋಕೆ ಬಾ ಎಂದು ಹೆಂಡತಿಯನ್ನು ಕರೆದಿದ್ದಾನೆ. ಜಗಳದ ಮುನಿಸಿನಲ್ಲಿದ್ದ ಪತ್ನಿ ಮೀನು ಹಿಡಿಯೋಕೆ ಬರಲು ಒಪ್ಪದಿದ್ದಾಗ ಆತ ಮಾಡಿದ್ದು ಎಂದೆಂದಿಗೂ ಸರಿಪಡಿಸಲಾಗದ ತಪ್ಪು.

ಮಧ್ಯಪ್ರದೇಶದ ಚಿಂದ್ವಾರಾದ ಜಿಲ್ಲೆಯ ಡೆಲಖಾರಿ ಗ್ರಾಮದ ದಂಪತಿಯ ಕಥೆಯಿದು. ಗಂಡ ಬಾಲಿ ಕಹಾರ್​ ಮತ್ತು ಹೆಂಡತಿ ಗೊಮತಿ ಬಾಯಿ ಯಾವಾಗಲೂ ಜಗಳವಾಡುತ್ತಿದ್ದರು. ಗುರುವಾರವೂ ಅದೇ ರೀತಿ ಜಗಳವಾಗಿದೆ. ಜಗಳ ತಣ್ಣಗಾದ ನಂತರ ಹೆಂಡತಿಗೆ ಮೀನು ಹಿಡಿಯಲು ಬಾ ಎಂದು ಗಂಡ ಕರೆದಿದ್ದಾನೆ. ಆದರೆ ಆಕೆ ಒಪ್ಪಿಲ್ಲ.

ಹೆಂಡತಿ ತನ್ನೊಡನೆ ಬರಲಿಲ್ಲವೆಂದು ಗಂಡನಿಗೆ ಸಿಟ್ಟು ಹೆಚ್ಚಿದೆ. ಮನೆಯಲ್ಲಿದ್ದ ಪೆಟ್ರೋಲನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ನೋಡುವಷ್ಟರಲ್ಲಿ ಮಹಿಳೆಯ ದೇಹ ಬಹುತೇಕ ಸುಟ್ಟಿದೆ. ತಕ್ಷಣವೇ ಆಕೆಯನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ ಆದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆಂಡತಿಯನ್ನು ಸಜೀವವಾಗಿ ದಹನ ಮಾಡಿದ ಪತಿರಾಯ ಇದೀಗ ಜೈಲು ಪಾಲಾಗಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net