ರಾಜಿ ಮಾಡಿಸಿದ್ದರೂ ಆತ್ಮಹತ್ಯೆ; ಪತಿಯ ಮನೆಯಲ್ಲಿ ಪತ್ನಿಯ ದುರಂತ ಅಂತ್ಯ..

Chaithra
Published on

ತುಮಕೂರು: ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಗೃಹಿಣಿಯೊಬ್ಬರು ರಾಜಿ ಮಾಡಿಸಿದ ಬಳಿಕವೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.

ಗುಬ್ಬಿ ತಾಲೂಕಿನ ಸಂಪಿಗೆ ಮೂಲದ ಚೈತ್ರಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಚಿಕ್ಕನಾಯಕನಹಳ್ಳಿಯ ದೀಲಿಪ್ ಎಂಬಾತನನ್ನು 9 ವರ್ಷಗಳ ಹಿಂದೆ ಚೈತ್ರಾ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಮಗಳಿದ್ದಾಳೆ.

ಗಂಡ-ಹೆಂಡತಿಯ ಮಧ್ಯೆ ಆಗಾಗ ಜಗಳವಾಗುತ್ತಿದ್ದು, ಈ ಬಗ್ಗೆ ದೀಲಿಪ್ ಕುಟುಂಬಸ್ಥರ ಜೊತೆ ಇತ್ತೀಚೆಗೆ ಮಾತನಾಡಿದ್ದ ಚೈತ್ರಾ ಕುಟುಂಬಸ್ಥರು ರಾಜಿ ಮಾಡಿಸಿದ್ದರು. ಅದಾಗ್ಯೂ ಎರಡು ದಿನಗಳ ಹಿಂದೆ ದಂಪತಿ ಮಧ್ಯೆ ಮತ್ತೆ ಜಗಳವಾಗಿದೆ. ಇದರಿಂದ ತೀವ್ರವಾಗಿ ನೊಂದ ಚೈತ್ರಾ, ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಗಂಡನ ಮನೆಯವರು ತಮ್ಮ ಮಗಳಿಗೆ ಮಾನಸಿಕ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಆರೋಪಿಸಿ, ಚೈತ್ರಾ ಪಾಲಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚೈತ್ರಾಳ ಪತಿ ದೀಲಿಪ್ ಹಾಗೂ ಅತ್ತೆ ಗಾಯತ್ರಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net