ಪತಿಯ ನಿಧನದ ಎರಡೇ ಗಂಟೆಗಳಲ್ಲಿ ಸಾವಿಗೀಡಾದ ಪತ್ನಿ!

Husband
Published on

ನೆಲಮಂಗಲ: ಪ್ರೀತಿಪಾತ್ರರಲ್ಲಿ ಯಾರಾದರೂ ಸಾವಿಗೀಡಾದಾಗ ಜೊತೆಗಿರುವವರೂ ಅವರ ಬೆನ್ನಿಗೇ ಇಹಲೋಕ ತೊರೆದ ಅನೇಕ ಪ್ರಕರಣಗಳು ನಡೆದಿದ್ದು, ಇದೀಗ ಆ ಪಟ್ಟಿಗೆ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಓಬಯ್ಯನಪಾಳ್ಯ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ರಾಮಚಂದ್ರಪ್ಪ (65), ನೀಲಮ್ಮ (45) ಮೃತಪಟ್ಟವರು. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ರಾಮಚಂದ್ರಪ್ಪ ಮುಂಜಾನೆ ಮೃತಪಟ್ಟಿದ್ದರು.

ಪತಿಯ ಸಾವಿನ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾದ ಪತ್ನಿ ನೀಲಮ್ಮ, ಅದಾಗಿ ಎರಡು ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ರಾಮಚಂದ್ರಪ್ಪ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕುದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net