ಅವಳ ಸಾವಿಗೆ ನಾನೇ ಕಾರಣ... ಪತ್ನಿ ನೆನಪಿನಲ್ಲೇ ಕೊರಗಿ ಮಣ್ಣಾದ ಪತಿ! ಮುಗಿಲು ಮುಟ್ಟಿತು ಕುಟುಂಬಸ್ಥರ ಆಕ್ರಂದನ | Wife Death

ವಿಜಯವಾಣಿ - 2025-05-26T222100.176
Published on

Wife Death: ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಪತ್ನಿಯ ಅಗಲಿಕೆಯನ್ನು ಸಹಿಸಲಾಗದ ಪತಿ, ಪತ್ನಿಯ ನೆನಪಿನಲ್ಲೇ ಕೊರಗಿ ಪ್ರಾಣಬಿಟ್ಟ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ವರದಿಯಾಗಿದೆ.

ಪತ್ನಿಯ ಅಕಾಲಿಕ ಸಾವಿನಿಂದ ಹೊರಬರದ ಪತಿ, ಆಸಿಡ್ ಸೇವಿಸಿ ಮೃತಪಟ್ಟ ಘಟನೆ ಕಾಮರೆಡ್ಡಿ ಜಿಲ್ಲೆಯ ಬಿಚ್ಕುಂದದಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಸುನೀಲ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಪೆದ್ದತಡ್ಗೂರ್ ಗ್ರಾಮದ ನಿವಾಸಿ ಜ್ಯೋತಿ ಎಂಬುವರನ್ನು ಮದುವೆಯಾಗಿದ್ದ ಸುನೀಲ್​, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಅಪಘಾತದಲ್ಲಿ ಸಾವಿಗೀಡಾದ ಜ್ಯೋತಿ, ಆರು ತಿಂಗಳ ಗರ್ಭಿಣಿಯಾಗಿದ್ದರು.

ಶುಕ್ರವಾರ (ಮೇ.24) ದಂಪತಿಗಳು ಒಟ್ಟಿಗೆ ಬೈಕ್​ನಲ್ಲಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಬಿಚ್ಕುಂದ ಹೊರವಲಯದಲ್ಲಿರುವ ಮೈಸಮ್ಮ ದೇವಸ್ಥಾನದ ಬಳಿ ಅಪಘಾತಕ್ಕೆ ತುತ್ತಾದರು. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಜ್ಯೋತಿ (22) ಸಾವನ್ನಪ್ಪಿದರು. ಪತ್ನಿಯ ಸಾವಿಗೆ ತಾನೇ ಕಾರಣ ಎಂದು ಕುಪಿತಗೊಂಡ ಸುನೀಲ್​, ತೀವ್ರ ಮನನೊಂದು ಮನೆಯಲ್ಲಿದ್ದ ಆ್ಯಸಿಡ್​ ಸೇವಿಸಿದ್ದಾರೆ. ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಿದ್ದೇ ಆದರೂ ಸುನೀಲ್ ಜೀವ ಉಳಿಯಲಿಲ್ಲ. ಸುನೀಲ್ ಮತ್ತು ಜ್ಯೋತಿಯನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net