ಕ್ರಿಕೆಟ್​ ಬೆಟ್ಟಿಂಗ್​ನಿಂದ ದಾಂಪತ್ಯದಲ್ಲಿ ಬಿರುಕು; ಪತಿಯಿಂದಲೇ ಪತ್ನಿಯ ಕೊಲೆ?

Madhu Tejaswi
Published on

ಹಾಸನ: ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿಯ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಅದರಲ್ಲೂ ಕ್ರಿಕೆಟ್ ಬೆಟ್ಟಿಂಗ್​ನಿಂದಾಗಿ ದಾಂಪತ್ಯದಲ್ಲಿ ಬಿರುಕು ಮೂಡಿ, ಅದೇ ಕಾರಣಕ್ಕೆ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂದು ಸಾವಿಗೀಡಾದ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.

ಹಾಸನ ತಾಲೂಕು ದೊಡ್ಡ ಮಂಡಿಗನಹಳ್ಳಿ ಗ್ರಾಮದ ತೇಜಸ್ವಿನಿ (28) ಸಾವಿಗೀಡಾದ ಮಹಿಳೆ. ಈಕೆಯ ಪತಿ ಮಧು ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ನಿನ್ನೆ ಮನೆಯಲ್ಲಿ ತೇಜಸ್ವಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಸಾವಿಗೆ ಪತಿಯೇ ಕಾರಣವೆಂದರು ಆರೋಪಿಸಿ, ಮಧು ಮನೆ ಮುಂದೆ ಶವವಿಟ್ಟು ಮಹಿಳೆ ಮನೆಯವರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧು, ಕ್ರಿಕೆಟ್ ಬೆಟ್ಟಿಂಗ್ ವ್ಯಸನಿಯಾಗಿದ್ದು, ಅದಕ್ಕಾಗಿಯೇ 20 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಪತಿಯನ್ನು ಪತ್ನಿ ಪ್ರಶ್ನೆ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಮಧು ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net