ಆ ಒಂದು ತಪ್ಪಿಗಾಗಿ ಎಬಿಡಿ ಜತೆ ಮಾತು ಬಿಟ್ಟಿದ್ದರಂತೆ ವಿರಾಟ್​: ಮತ್ತೆ ಒಂದಾಗಿದ್ದು ಹೇಗೆ? ಕಹಿ ಕ್ಷಣ ನೆನೆದ ಮಿ. 360! Virat Kohli ​

Virat Kohli

Virat Kohli : ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್​ ಒಳ್ಳೆಯ ಸ್ನೇಹಿತರು ಅನ್ನೋದು ಎಲ್ಲರಿಗೂ ತಿಳಿದೇ ಇದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದಲ್ಲಿ ಹಲವು ವರ್ಷಗಳವರೆಗೆ ವಿರಾಟ್​ ಕೊಹ್ಲಿ ಜತೆ ಎಬಿಡಿ ಆಡಿದರು. ಈ ವೇಳೆ ಇಬ್ಬರ ಸ್ನೇಹ ಗಟ್ಟಿಯಾಯಿತು. ಇಂದಿಗೂ ಆ ಬಾಂದವ್ಯ ಹಾಗೇ ಇದೆ. ಈ ಬಾರಿ ಆರ್​​ಸಿಬಿ ಐಪಿಎಲ್​ ಟ್ರೋಫಿ ಗೆದ್ದಾಗ ಇಬ್ಬರ ನಡುವಿನ ಸ್ನೇಹ ಎಂಥದ್ದು ಅನ್ನೋದು ಜಗತ್ತಿಗೆ ಮತ್ತೊಮ್ಮೆ ಗೊತ್ತಾಯ್ತು.

ಸ್ನೇಹಿತರೆಂದ ಮೇಲೆ ಕೆಲವೊಮ್ಮೆ ಇಬ್ಬರ ನಡುವೆ ವೈಮನಸ್ಸು ಮೂಡುವುದು ಸಹಜ. ಇದಕ್ಕೆ ವಿರಾಟ್​ ಕೊಹ್ಲಿ ಮತ್ತು ಎಬಿಡಿ ಕೂಡ ಹೊರತಾಗಿಲ್ಲ. ಹಿಂದೊಮ್ಮೆ ಕೊಹ್ಲಿ, ಕೆಲವು ತಿಂಗಳುಗಳ ಕಾಲ ಎಬಿಡಿ ಜತೆ ಮಾತು ಬಿಟ್ಟಿದ್ದರಂತೆ. ಈ ವಿಚಾರವನ್ನು ಸ್ವತಃ ಎಬಿಡಿ ಅವರೇ Cricket.com ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದರೆ, ಯಾವ ವಿಚಾರಕ್ಕೆ ಕೊಹ್ಲಿ ಮಾತನಾಡುವುದನ್ನು ಬಿಟ್ಟಿದ್ದರು ಅನ್ನೋದನ್ನ ಎಬಿಡಿ ಅವರ ಮಾತುಗಳಲ್ಲೇ ಕೇಳೋಣ.

ಕಳೆದ ವರ್ಷ ಫೆಬ್ರವರಿಯಲ್ಲಿ ಯೂಟ್ಯೂಬ್​ ಲೈವ್​ ಮಾಡುವಾಗ ಎಬಿಡಿ ಅವರು ಆಕಸ್ಮಿಕವಾಗಿ ಕೊಹ್ಲಿ ಅವರ ವೈಯಕ್ತಿಯ ಜೀವನದ ಬಗ್ಗೆ ಮಾತನಾಡಿದ್ದರು. ಕೊಹ್ಲಿ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಎಂದು ಆಕಸ್ಮಿಕವಾಗಿ ಎಬಿ ಡಿವಿಲಿಯರ್ಸ್​ ಹೇಳಿದ್ದರು. ಇದು ಕೊಹ್ಲಿ ಹಾಗೂ ಅನುಷ್ಕಾ ಅಭಿಮಾನಿಗಳಿಗೆ ಒಂದು ದೊಡ್ಡ ಸುದ್ದಿಯಾಯಿತು. ಏಕೆಂದರೆ, ಈ ವಿಚಾರವನ್ನು ವಿರೂಷ್ಕಾ ದಂಪತಿ ಗೌಪ್ಯವಾಗಿ ಇಟ್ಟಿದ್ದರು. ಎಬಿಡಿ ಹೇಳಿಕೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲೂ ಭಾರಿ ಸುದ್ದಿಯಾಯಿತು.

ಎಬಿಡಿ ಹೇಳಿಕೆಯಿಂದ ಇಷ್ಟೆಲ್ಲ ಆಗಿದ್ದಕ್ಕೆ ವಿರಾಟ್​ ಕೊಹ್ಲಿ ಕೋಪಗೊಂಡಿದ್ದರಂತೆ. ಅಲ್ಲದೇ ಅನೇಕ ತಿಂಗಳುಗಳವರೆಗೆ ಮಾತು ಬಿಟ್ಟಿದ್ದರಂತೆ. ಕೊಹ್ಲಿ ಕೋಪ ಅನೇಕ ತಿಂಗಳುಗಳವರೆಗೆ ನನ್ನನ್ನು ಕಾಡುತ್ತಿತ್ತು ಎಂದು ಎಬಿಡಿ, Cricket.com ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆರು ತಿಂಗಳ ಹಿಂದೆ, 2024–25ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ ಕೊಹ್ಲಿ ನನ್ನನ್ನು ಸಂಪರ್ಕಿಸಿದರು ಎಂದು ದಕ್ಷಿಣ ಆಫ್ರಿಕಾದ ದಂತಕಥೆ ಎಬಿಡಿ ಬಹಿರಂಗಪಡಿಸಿದರು. ಕಳೆದ ಆರು ತಿಂಗಳಿಂದ ಕೊಹ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ವಿಚಾರವಾಗಿ ನಾನು ದೇವರಿಗೆ ಥ್ಯಾಂಕ್ಸ್​ ಹೇಳಬೇಕು. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಾಗ ಆ ವಿಚಾರವನ್ನು ಬಹಿರಂಗವಾಗಿ ಹೇಳಿದಾಗ ನಮ್ಮ ನಡುವಿನ ಸಂಪರ್ಕ ಮೊಟಕುಗೊಂಡಿತ್ತು. ಆದರೆ, ನನ್ನೊಂದಿಗೆ ಮತ್ತೆ ಮಾತನಾಡಲು ಆರಂಭಿಸಿದಾಗ ತುಂಬಾ ನಿರಾಳವಾಯಿತು ಎಂದು ಎಬಿಡಿ ಹೇಳಿದರು.

ಇದನ್ನೂ ಓದಿ: ವಿಮಾನ ಪತನವಾದಾಗಿನಿಂದ ನಿರ್ದೇಶಕ ನಾಪತ್ತೆ: ಪತ್ನಿಗೆ ಕೊನೇ ಕಾಲ್​ ಮಾಡಿ ಹೇಳಿದ್ದೇನು? ಆತನಿಗೆ ಏನಾಯ್ತು? Ahmedabad Plane Crash

ಬಾರ್ಡರ್​ ಗವಾಸ್ಕರ್​ ಟ್ರೋಫಿ ಸಮಯದಲ್ಲಿ ಕೊಹ್ಲಿ, ನನ್ನೊಂದಿಗೆ ಮಾತನಾಡುತ್ತಿದ್ದರು. ಕೊಹ್ಲಿ ಸ್ವಲ್ಪ ತೊಂದರೆ ಅನುಭವಿಸಿದ್ದು ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನನ್ನ ಜೀವನದ ಕೆಲವು ಕ್ಷಣಗಳನ್ನು ನಾನು ಹೇಗೆ ದಾಟಿ ಬಂದೆ ಎಂದು ನನ್ನಿಂದ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲು ಕೊಹ್ಲಿ ಬಯಸಿದ್ದರು. ಕೊಹ್ಲಿಯ ವಯಸ್ಸು, ಅವರು ಆಡಿರುವ ಒಟ್ಟು ಪಂದ್ಯಗಳು, ಎಲ್ಲ ಸಮಯದಲ್ಲೂ ತಂಡದಲ್ಲಿರುವುದರ ಚಲನಶೀಲತೆ, ಅಲ್ಲಿನ ರಾಜಕೀಯ ಎಲ್ಲವನ್ನು ಪರಿಗಣಿಸಿ ಕೊಹ್ಲಿ, ಯಾವ ರೀತಿಯ ಹಂತವನ್ನು ಎದುರಿಸುತ್ತಿದ್ದಾರೆಂದು ನನಗೆ ಚೆನ್ನಾಗಿ ತಿಳಿದಿತ್ತು. ನಿನ್ನ ಮೇಲೆ ತುಂಬಾ ಒತ್ತಡವಿದೆ ಎಂದು ಹೇಳಿದೆ. ನಾನು ನನ್ನ ಭಾವನೆಗಳನ್ನು, ನನ್ನ ಅನಿಸಿಕೆಗಳನ್ನು ಹಾಗೂ ನನಗೆ ಅನಿಸಿದ್ದೆಲ್ಲವನ್ನು ಕೊಹ್ಲಿಗೆ ಹೇಳಿದೆ. ಪರದೆಯ ಮೇಲೆ ಇನ್ನೂ ಕೊಹ್ಲಿಯನ್ನು ನೋಡುತ್ತಿರುವುದನ್ನು ಹೃದಯದಿಂದ ಹಂಚಿಕೊಂಡೆ. ಆತ ಇನ್ನೂ ಕ್ರಿಕೆಟ್ ಆಡುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡದಿರುವ ನಿರ್ಧಾರವು ಆತನ ಹೃದಯದಿಂದ ಬಂದಿರಬಹುದು ಎಂದು ಎಬಿಡಿ ಹೇಳಿದರು.

ವಿರಾಟ್ ಕೊಹ್ಲಿಗೆ ಪೂರ್ಣ ಹೃದಯದಿಂದ ಬೆಂಬಲ ನೀಡುವುದಾಗಿ ಹೇಳಿದ ಡಿವಿಲಿಯರ್ಸ್, ಕೊಹ್ಲಿ ಅವರಲ್ಲಿ ಇನ್ನೂ ಹೆಚ್ಚಿನ ಏಕದಿನ ಕ್ರಿಕೆಟ್ ಉಳಿದಿದೆ ಎಂದು ಆಶಿಸಿದರು. ನಾನು ಅವರನ್ನು 100% ಬೆಂಬಲಿಸುತ್ತೇನೆ. ಅವರು ಅದ್ಭುತ ವೃತ್ತಿಜೀವನವನ್ನು ಹೊಂದಿದ್ದಾರೆ ಮತ್ತು ಕೊನೆಯ ಎಸೆತದವರೆಗೂ ಅವರು ತಮ್ಮ ಕ್ರಿಕೆಟ್ ಅನ್ನು ಆನಂದಿಸಬೇಕೆಂದು ನಾನು ಬಯಸುತ್ತೇನೆ. ಅದೇ ಅವರ ಮುಂದಿನ ದಾರಿಯಾಗಿದ್ದರೆ, ನಿಜಕ್ಕೂ ಅದು ಅದ್ಭುತ. ನಾನು ಕೂಡ ಅವರ ಹಿಂದೆ ಇದ್ದೇನೆ. ಆಶಾದಾಯಕವಾಗಿ, ಅವರಿಗೆ ಇನ್ನೂ ಹೆಚ್ಚಿನ ಬಿಳಿ-ಚೆಂಡಿನ ಕ್ರಿಕೆಟ್ ಉಳಿದಿದೆ ಎಂದು ಡಿವಿಲಿಯರ್ಸ್​ ಮಾತು ಮುಗಿಸಿದರು. (ಏಜೆನ್ಸೀಸ್​)

ಇನ್ಮುಂದೆ ಈ ರೀತಿ ಕ್ಯಾಚ್​ ಹಿಡಿದರೆ ಔಟ್​ ಇಲ್ಲ: ಜಾರಿಯಾಯ್ತು ಹೊಸ ನಿಯಮ, ಬನ್ನಿ ಹಾಪ್​ ಕ್ಯಾಚ್ ಬ್ಯಾನ್! Bunny Hop Catch ​​

ಟೀಕೆ, ಟಿಪ್ಪಣಿಗೆ ವಿನ್ನಿಂಗ್ ಕ್ಯಾಪ್ಟನ್ ಗುಡ್​ಬೈ​! ಲಕ್ಸುರಿ ಜೀವನ, ದುಬಾರಿ ಕಾರುಗಳ ಒಡೆಯ ಟೆಂಬಾ ಬವುಮಾ | Temba Bavuma

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…