ಅಜಯ್ ಕಂಡರೆ ಸುದೀಪ್ಗೆ ಯಾಕೆ ಸಿಟ್ಟು? ಇಲ್ಲಿದೆ ಕಾರಣ

Ajay - Sudeep - Final
Published on

ಬೆಂಗಳೂರು: ಸುದೀಪ್​ಗೆ ಬಾಲಿವುಡ್​ ನಟ ಅಜಯ್​ ದೇವಗನ್ ಕಂಡರೆ ಕೋಪವಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಎಲ್ಲರ ಜತೆಗೆ ಪ್ರೀತಿಯಿಂದ ಸುದೀಪ್​ಗೆ, ಅಜಯ್​ ಕಂಡರೆ ಯಾಕೆ ಸಿಟ್ಟು ಎಂಬ ಪ್ರಶ್ನೆ ಸಹಜವೇ. ಅದಕ್ಕೆ ಉತ್ತರವನ್ನೂ ಅವರೇ ನೀಡಿದ್ದಾರೆ.

ಇತ್ತೀಚೆಗೆ, ಬಾಲಿವುಡ್​ ಹಂಗಾಮದವರು ಜನಪ್ರಿಯ ನಟ-ನಟಿಯರ ಮೊದಲ ಕ್ರಶ್​ ಯಾರು ಎಂದು ಸಮೀಕ್ಷೆ ನಡೆಸಿದ್ದಾರೆ. ಈ ಪೈಕಿ ಸುದೀಪ್​ ಅವರನ್ನು ಸಹ ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್​ ತಮ್ಮ ಮೊದಲ ಕ್ರಶ್​ ಯಾರು ಎಂದು ಹೇಳಿಕೊಂಡಿದ್ದಾರೆ. ಅವರ ಕ್ರಶ್​ ಯಾರು ಗೊತ್ತಾ? ಬಾಲಿವುಡ್​ ನಟಿ ಕಾಜೋಲ್​.

ಸುದೀಪ್​ಗೆ ಮುಂಚಿನಿಂದಲೂ ಕಾಜೋಲ್​ ಕಂಡರೆ ಬಹಳ ಇಷ್ಟವಂತೆ. ಕಾಜೋಲ್​ ಅವರ ದೊಡ್ಡ ಅಭಿಮಾನಿಯಾಗಿರುವ ಸುದೀಪ್​, ಯಾವ ಮ್ಯಾಗಜೀನ್​ನಲ್ಲಿ ಕಾಜೋಲ್​ ಅವರ ಫೋಟೋ ಬಂದರೂ, ಅದನ್ನು ಕಟ್​ ಮಾಡಿ ಎತ್ತಿಟ್ಟುಕೊಳ್ಳುತ್ತಿದ್ದರಂತೆ. ಪುಸ್ತಕದಲ್ಲ ಎಲ್ಲ ಪುಟಗಳಲ್ಲೂ ಕಾಜೋಲ್​ ಅವರ ಪೋಸ್ಟರ್​ಗಳನ್ನು ಅಂಟಿಸಿಕೊಳ್ಳುತ್ತಿದ್ದರಂತೆ.

ಆದರೆ, ಅದೊಂದು ದಿನ ಕಾಜೋಲ್​, ಅಜಯ್​ ದೇವಗನ್​ ಅವರನ್ನು ಮದುವೆಯಾಗಿದ್ದಾರೆ. ಅಂದಿನಿಂದ ಅಜಯ್​ ಬಗ್ಗೆ ತಮಗೆ ಸಿಟ್ಟು ಎಂದು ಸುದೀಪ್​ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಕಾಜೋಲ್​ ಬಗೆಗಿನ ಪ್ರೀತಿ, ಗೌರವ ಮತ್ತು ಅಭಿಮಾನವನ್ನು ಯಾವತ್ತಾದರೂ ಅವರ ಬಳಿ ಹೇಳಿಕೊಂಡಿದ್ದೀರಾ ಎಂಬ ಪ್ರಶ್ನೆಗೆ, ಅಷ್ಟರಲ್ಲಿ ಅವರಿಗೆ ಮದುವೆಯಾಗಿಬಿಟ್ಟಿತ್ತು ಎಂದು ಸುದೀಪ್​ ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net