More

  ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

  ಮಂಡ್ಯ: ಲೋಕಸಭೆ ಚುನಾವಣೆ ಬಳಿಕ ಈ ಚುನಾವಣೆಯಲ್ಲಿ ಮತ್ತೆ ಸುಮಲತಾ ಅಂಬರೀಷ್ ಹಾಗೂ ಎಚ್​.ಡಿ.ಕುಮಾರಸ್ವಾಮಿ ಮಧ್ಯೆ ವಾಗ್ದಾಳಿ ಆರಂಭವಾಗಿದ್ದು, ‘ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?’ ಎಂದು ಸುಮಲತಾ ಅವರನ್ನು ಉದ್ದೇಶಿಸಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

  ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹಮ್ಮಿಕೊಳ್ಳಲಾದ ಜೆಡಿಎಸ್‌ ಸಮಾವೇಶದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಮಂಡ್ಯದಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪುಟ್ಟರಾಜು ಹೇಳಿದ್ದಾರೆ. ಮಂಡ್ಯ ಜನರ ಬಗ್ಗೆ ನನಗೆ ವಿಶ್ವಾಸ ಇದೆ. ಆದರೆ ಜಿಲ್ಲೆಯಲ್ಲಿರುವ ಕುತಂತ್ರಗಳು ಅಷ್ಟು ಸುಲಭವಾಗಿ ಚುನಾವಣೆ ನಡೆಸಲು ಬಿಡುವುದಿಲ್ಲ. ಈಗಾಗಲೇ ಮಂಡ್ಯದಲ್ಲಿ ಅರ್ಜಿ ಹಾಕಲು ಮಹಾನ್ ಘಟಾನುಘಟಿ ನಾಯಕಿ ಸಿದ್ದವಾಗಿದ್ದಾರೆ. ಮಂಡ್ಯದಲ್ಲಿ ಸ್ವಾಭಿಮಾನ ಉಳಿದವರು ಅವರು. ಇತ್ತೀಚೆಗೆ ಬಿಜೆಪಿ ಸೇರಿದವರು ಅರ್ಜಿ ಹಾಕಲು ತಯಾರಾಗಿದ್ದಾರೆ ಎಂದು ಸುಮಲತಾ ಅವರನ್ನು ಎಚ್​ಡಿಕೆ ಮಾತಲ್ಲೇ ಕುಟುಕಿದ್ದಾರೆ.

  ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

  ಮಂಡ್ಯ ಜಿಲ್ಲೆಯ ಜನತೆಗೆ ಕೈ ಮುಗಿದು ಮನವಿ ಮಾಡುವೆ, ಅನುಕಂಪಕ್ಕೆ‌ ನಿಮ್ಮ ಹೃದಯ ಕರಗುತ್ತದೆ. ಭಾವನಾತ್ಮಕ ವಿಷಯಗಳು ಬಂದಾಗ ಹಣಕ್ಕೆ ಮಾರು‌ ಹೋಗಲ್ಲ. ಮಂಡ್ಯ ಜನರ ಮೇಲೆ ನನಗೆ ಅಪಾರ ಗೌರವ ಇದೆ. ಕಾರ್ಯಕರ್ತರು ಮಂಡ್ಯದಲ್ಲಿ ಸ್ಪರ್ಧೆ ಮಾಡಲು ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ ನಾನು ಸ್ಪರ್ಧೆ ಮಾಡಿದ್ರೆ ನನ್ನನ್ನು ಮುಗಿಸಲಿಕ್ಕೆ ತಯಾರಾಗಿದ್ದೇನೆ ಎಂದು ಸುಮಲತಾ ಸವಾಲು ಹಾಕಿದ್ದಾರೆ. ನಾನು ಸವಾಲು ಹಾಕುವಷ್ಟು ದೊಡ್ಡ ಮನುಷ್ಯ ಅಲ್ಲ. ಅವರೆಲ್ಲ ಬೆಳೆದುಬಿಟ್ಟಿದ್ದಾರೆ, ನಾನು ಸಣ್ಣ ಪಕ್ಷದ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಅವರ ಮಟ್ಟಕ್ಕೆ ನಾನು ಬೆಳೆದಿಲ್ಲ. ಅವರ ಮೇಲೆ ನಾನು ಸವಾಲು ಹಾಕಲು ಸಾಧ್ಯಾನ? ಎಂದು ಕುಮಾರಸ್ವಾಮಿ ಹೇಳಿದ್ದಾರೆ.

  ಇದನ್ನೂ ಓದಿ: ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

  ನಾನು ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಕೆಲವು ಕಾರ್ಯಕರ್ತರು ಆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ಆಕೆ ಯಾಕೆ ಈ ಸವಾಲು ಹಾಕಿದ್ದಾರೆ ಗೊತ್ತಿಲ್ಲ? ಕುಮಾರಸ್ವಾಮಿ ನಿಂತರೆ ನಾನು ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದೀರಲ್ಲ, ನಾನು ನಿಮಗೆ-ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ? ಎಂದು ಸುಮಲತಾ ಅವರನ್ನು ಉದ್ದೇಶಿಸಿ ಎಚ್​​ಡಿಕೆ ಪ್ರಶ್ನೆ ಮಾಡಿದ್ದಾರೆ.

  ಇದನ್ನೂ ಓದಿ: ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

  ನಾನು ಸಿಎಂ ಆಗುವುದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನ್ನ ಮೇಲಿದೆ. ರಾಜ್ಯದ ಹಳ್ಳಿಹಳ್ಳಿಗಳನ್ನು ಸುತ್ತಿ ಬಂದಿದ್ದೇನೆ. ಬೆಳಗಾವಿ, ಬಳ್ಳಾರಿಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ ಅಂತಿದ್ದರು. ಇವತ್ತು ಅಂತಹ ಜಿಲ್ಲೆಯಲ್ಲೂ 2-3 ಸ್ಥಾನ ಗೆಲ್ಲುವ ಶಕ್ತಿ ಬಂದಿದೆ. ಇದೊಂದು ಬಾರಿ ನೀವು ನನಗೆ ಅವಕಾಶ ಮಾಡಿಕೊಡಿ. ಕಳೆದ ಬಾರಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲಿಸಿದ್ರಿ. ಕಾಂಗ್ರೆಸ್‌ ಜೊತೆ ಆಡಳಿತ ನಡೆಸಿದೆ. ಆಗ ನನ್ನ ರೈತರ ಸಾಲಮನ್ನಾ ಮಾಡೋಕೆ ಬಿಡಲಿಲ್ಲ. ಅವರ ವಿರೋಧದ ನಡುವೆಯೂ ನಾನು ಮನ್ನಾ ಮಾಡಿದೆ. ಅವರು ನನಗೆ ಸಹಕಾರ ಕೊಡದ ಕಾರಣಕ್ಕೆ ಅಧಿಕಾರ ಬಿಟ್ಟೆ. ಇವತ್ತು ಒಬ್ಬರು ನನಗೂ ಒಂದು ಅವಕಾಶ ಕೊಡಿ ಅಂತಿದ್ದಾರೆ. ಕುಮಾರಸ್ವಾಮಿ, ದೇವೇಗೌಡರಿಗೆ ಅವಕಾಶ ಕೊಟ್ಟಿದ್ದೀರಿ. ನನಗೂ ಒಂದು ಅವಕಾಶ ಕೊಡಿ ಕೇಳ್ತಿದ್ದಾರೆ. ಅವರು ಅಧಿಕಾರ ಕೇಳ್ತಿರೋದು ಸಾವಿರಾರು ಕೋಟಿಯ ಲೂಲು ಮಾಲ್ ಕಟ್ಟೋಕ? ಅಥವಾ ಬಡವರ ಪರ ಅಧಿಕಾರ ಕೊಡೋಕಾ? ಇವರು ಯಾವತ್ತಾದ್ರೂ ಬಡವರ ಕೆಲಸ ಮಾಡಿದ್ದಾರಾ? ಆಡಳಿತ ಕೊಟ್ಟಿದ್ದಾರಾ? ಎಂದು ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷ ವಾಗ್ದಾಳಿ ನಡೆಸಿದರು.

  ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts