More

    ತಂಗಿ ಮದುವೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಸಾಯಿಪಲ್ಲವಿ ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ?

    ತಿರುವನಂತಪುರಂ: ನ್ಯಾಚುರಲ್ ಬ್ಯೂಟಿ, ಅಭಿಮಾನಿಗಳ ಆಲ್‌ಟೈಮ್‌ ಫೇವರೆಟ್‌ ಆಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ತನ್ನ ತಂಗಿಯ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ಲೇಡಿ ಪವರ್ ಸ್ಟಾರ್ ಮದುವೆಯಿಂದ ದೂರ ಉಳಿಯಲು ಕಾರಣವೇನು? ಎಂಬುದು ಚರ್ಚೆಗೆ ಗ್ರಾಸ ಒದಗಿಸಿದೆ. ಈ ಹಿಂದೆ ತನ್ನ ಮದುವೆಯ ಬಗ್ಗೆ ಆಕೆ ಹೇಳಿದ್ದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ..

    ಇದನ್ನೂ ಓದಿ: ಚಿತ್ರವೊಂದಕ್ಕೆ 8 ಕೋಟಿ ರೂ.ಸಂಭಾವನೆ ಪಡೆಯುವ ಕಮಲ್‌ ಪುತ್ರಿ ಆಸ್ತಿ ಮೌಲ್ಯವೆಷ್ಟು ಗೊತ್ತಾ?

    ಇತ್ತೀಚೆಗೆ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ಮದುವೆ ಭಾರಿ ಸದ್ದು ಮಾಡಿದ್ದು, ಯಾವುದರಲ್ಲೂ ಕಡಿಮೆ ಇರದ ನ್ಯಾಚುರಲ್ ಬ್ಯೂಟಿ ಮದುವೆ ಮುಂದೂಡುತ್ತಿರುವುದೇಕೆ ಎಂಬ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ.

    ಸಹೋದರಿ ಪೂಜಾ ಕಣ್ಣನ್ ನಿಶ್ಚಿತಾರ್ಥ ಭಾರಿ ಸದ್ದು ಮಾಡಿರುವುದು ಈಗ ಸಾಯಿ ಪಲ್ಲವಿ ಮದುವೆ ಯಾವಾಗ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ. ತಂಗಿಯ ನಿಶ್ಚಿತಾರ್ಥವನ್ನು ಸಹ ಸಾಯಿ ಪಲ್ಲವಿ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ.. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.

    ಸಾಯಿ ಪಲ್ಲವಿ ನಿಜವಾಗಿಯೂ 23 ನೇ ವಯಸ್ಸಿನಲ್ಲಿ ಮದುವೆಯಾಗಿ 30 ವರ್ಷಕ್ಕೆ ಇಬ್ಬರು ಮಕ್ಕಳ ತಾಯಿಯಾಗಲು ಬಯಸಿದ್ದರಂತೆ. ಈ ವಿಷಯವನ್ನು ಅವರೇ ಹೇಳಿದ್ದಾರೆ. ಆದರೆ ಇದೀಗ ತಮ್ಮ ಮದುವೆಯನ್ನು ಮುಂದೂಡಿ ತಂಗಿಯ ಮದುವೆ ಮಾಡಲು ಸಿದ್ಧರಾಗಿದ್ದಾರೆ. ಇದಕ್ಕೆ ಕಾರಣ ಏನು ಎಂಬುದಕ್ಕೆ ಇಲ್ಲಿದೆ ಉತ್ತರ.

    ತೆಲುಗು ಪ್ರೇಕ್ಷಕರಿಗೆ ಪರಿಚಯವಾದಾಗ ಸಾಯಿ ಪಲ್ಲವಿ ಹಲವು ವಾಹಿನಿಗಳಿಗೆ ಸಂದರ್ಶನ ನೀಡಿದ್ದರು. ಆ ಸಮಯದಲ್ಲಿ, ಅವರು ತಮ್ಮ ಮದುವೆಯ ಪ್ರಸ್ತಾಪಕ್ಕೆ ನಿರ್ಭಯವಾಗಿ ಪ್ರತಿಕ್ರಿಯಿಸಿದ್ದರು. ಇದೀಗ ಆ ಕಾಮೆಂಟ್‌ಗಳು ವೈರಲ್ ಆಗಿವೆ.

    “ನಾನು 18 ವರ್ಷದವಳಿದ್ದಾಗ 23 ವರ್ಷಕ್ಕೆ ಮದುವೆಯಾಗಬೇಕು, 30 ವರ್ಷಕ್ಕಿಂತ ಮುಂಚೆಯೇ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದುಕೊಂಡಿದ್ದೆ.. ಎಂಬಿಬಿಎಸ್ ಮಾಡುವ ಆರಂಭದಲ್ಲಿ ನಾನು ಹಾಗೆ ಯೋಚಿಸಿದೆ. ಆದರೆ ನಂತರ ನಾನು ಆ ನಿರ್ಧಾರಗಳನ್ನು ಬದಲಾಯಿಸಿದೆ. ನಮ್ಮ ಮನೆಯ ಕೆಲವು ಪ್ರಮುಖ ಜವಾಬ್ದಾರಿಗಳನ್ನು ನಾನು ತೆಗೆದುಕೊಳ್ಳಬೇಕಾಗಿರುವುದರಿಂದ ನಾನು ಮದುವೆಯನ್ನು ಮುಂದೂಡಿದೆ. ಆದರೆ ನಟಿಯಾಗಿ ಒಳ್ಳೆ ಹೆಸರು ಬಂದಿದ್ದರಿಂದ ಮದುವೆಗೆ ಇನ್ನು ಕಾಲಾವಕಾಶ ಇದೆ. ಮತ್ತೊಂದೆಡೆ ನಾನು ಮದುವೆಯಾಗಲಿರುವ ಪುರುಷ ಮುಗ್ದನಾಗಿರಬೇಕು, ಹೆಣ್ಣನ್ನು ಗೌರವಿಸುವಂತವನಾಗಿರಬೇಕು” ಎಂದು ಹೇಳಿದ್ದರು.

    VIDEO | ಮಂಡ್ಯ ಧ್ವಜ ವಿವಾದ: ಬೆಂಗಳೂರಿನಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts