ಚಿತ್ರವೊಂದಕ್ಕೆ 8 ಕೋಟಿ ರೂ.ಸಂಭಾವನೆ ಪಡೆಯುವ ಕಮಲ್‌ ಪುತ್ರಿ ಆಸ್ತಿ ಮೌಲ್ಯವೆಷ್ಟು ಗೊತ್ತಾ?

kamal
Published on

ಮುಂಬೈ: ದಕ್ಷಿಣ ಭಾರತದ ಹೆಸರಾಂತ ನಟ ಕಮಲ್ ಹಾಸನ್ ಅವರ ಹಿರಿಯ ಪುತ್ರಿ ಶ್ರುತಿ ಹಾಸನ್ ಸಹ ದಕ್ಷಿಣದ ಭಾಷೆಗಳಲ್ಲಿ ಹೆಸರು ಮಾಡಿರುವ ನಟಿ. ಅವರ ಆಸ್ತಿ ಕುರಿತು ವಿವರವಾದ ಮಾಹಿತಿ ಹೊರಬಿದ್ದಿದೆ.

ಕಮಲ್ ಹಾಸನ್ ಅವರ ಹೇ ರಾಮ್ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರುತಿ ಹಾಸನ್

ತಮಿಳು ಚಿತ್ರ ಯಾಮುಡುದಲ್ಲಿ ಮೊದಲು ನಾಯಕಿಯಾಗಿ ನಟಿಸಿದರು . ಈ ಸಿನಿಮಾದಲ್ಲಿ ನಟ ಸೂರ್ಯ ಎದುರು ನಟಿಸಿದ್ದರು. ಅದಾದ ನಂತರ ಕಾಲಿವುಡ್ ನ ಟಾಪ್ ಸ್ಟಾರ್ ಗಳಾದ ಧನುಷ್, ವಿಜಯ್, ಅಜಿತ್ ಅವರ ಜೊತೆ ನಟಿಸಿ ಕಡಿಮೆ ಸಮಯದಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದರು.

2017ರವರೆಗೆ ತಮಿಳಿನಲ್ಲಿ ಫಾರ್ಮ್‌ನಲ್ಲಿದ್ದ ಶ್ರುತಿ ನಂತದರ ದಿನಗಳಲ್ಲಿ ನಾಪತ್ತೆಯಾಗಿದ್ದರು. ಕಾಲಿವುಡ್ ನಲ್ಲಿ ಸಿನಿಮಾ ಅವಕಾಶಗಳು ಸಿಗದ ಕಾರಣ ಟಾಲಿವುಡ್ ಗೆ ಹೋದ ಶ್ರುತಿ ಹಾಸನ್, ಬಾಲಕೃಷ್ಣ, ಚಿರಂಜೀವಿ ಅವರಂತಹ ಹಿರಿಯ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಶ್ರುತಿ ಹಾಸನ್ ಅವರ ಇತ್ತೀಚಿನ ಚಿತ್ರ ಸಲಾರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ್ದರು..

ಕಾಲಿವುಡ್‌ನಲ್ಲಿ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿರುವ ನಟರಲ್ಲಿ ಕಮಲ್ ಹಾಸನ್ ಒಬ್ಬರು, ಇವರು ನಟಿ ಗೌತಮಿ ಅವರೊಂದಿಗೆ ವಾಸಿಸುತ್ತಿದ್ದರು.. ಸದ್ಯ ತಂದೆಯ ಹಾದಿಯಲ್ಲೇ ಸಾಗುತ್ತಿರುವ ಶ್ರುತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಜೊತೆ ವಾಸಿಸುತ್ತಿದ್ದಾರೆ.

ಹೀಗಿರುವಾಗ ಅವರ ಆಸ್ತಿ ಮೌಲ್ಯದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಅದರಂತೆ ನಟಿ ಶ್ರುತಿ ಹಾಸನ್ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಐಷಾರಾಮಿ ಮನೆ ಹೊಂದಿದ್ದು, ಚಿತ್ರವೊಂದಕ್ಕೆ ನಾಯಕಿಯಾಗಿ ನಟಿಸಲು 6ರಿಂದ 8 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅದೂ ಅಲ್ಲದೆ ಜಾಹಿರಾತುಗಳಲ್ಲಿ ನಟಿಸಲು ಶ್ರುತಿ 50 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ನಟಿ ಶ್ರುತಿ ಹಾಸನ್ ಒಟ್ಟು 65 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಲ್ಯಾಂಡ್ ರೋವರ್, ರೇಂಜ್ ರೋವರ್, ಆಡಿ, ಟೊಯೊಟಾ ಫಾರ್ಚುನರ್ ಮುಂತಾದ ಐಷಾರಾಮಿ ಕಾರುಗಳನ್ನು ಸಹ ಶೃತಿ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net