ಪುತ್ಥಳಿ ನಿರ್ಮಾಣಕ್ಕೆ ವಿಳಂಬ ಯಾಕೆ?

gan (2)
Published on

ಕುಂದಾಪುರ: ಈ ಹಿಂದಿನ ಸಭೆಗಳಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿದ್ದರೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ವಾಣಕ್ಕೆ ವಿಳಂಬ ಯಾಕೆ ಆಗುತ್ತಿದೆ ಹಾಗೂ ವಿರೋಧ ವ್ಯಕ್ತವಾಗುತ್ತಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ಕುಂದಾಪುರ ಪುರಸಭೆ ಸದಸ್ಯರು ಮುಖ್ಯಾಧಿಕಾರಿಯನ್ನು ಪ್ರಶ್ನೆ ಮಾಡಿದರು. ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆ ಸಾವಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಲೆಕ್ಕಾಧಿಕಾರಿ ಸಭೆಗೆ ಹಾಜರಾಗಿಲ್ಲ, ಅವರು ತಪ್ಪು ವಾಹಿತಿ ನೀಡುತ್ತಾರೆ. ಸದಸ್ಯರ ಹಕ್ಕುಚ್ಯುತಿ ಆಗುತ್ತಿದೆ. ಲೆಕ್ಕಪತ್ರ ಸರಿ ಇಲ್ಲ ಎಂದು ಉಲ್ಲೇಖಿಸಿದ ನಿರ್ಣಯವನ್ನೇ ಬರೆಯಲಿಲ್ಲ ಎಂದು ಸದಸ್ಯರಾದ ಗಿರೀಶ್, ಶ್ರೀಧರ ಶೇರೆಗಾರ್, ಚಂದ್ರಶೇಖರ ಖಾರ್ವಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮುಂದಿನ ಸಭೆಗೆ ಕರೆಸಲಾಗುವುದು ಎಂದರು.

ಯುಜಿಡಿ ಯೋಜನೆ ಅಪೂರ್ಣ

ಯುಜಿಡಿ ಯೋಜನೆ 46 ಕೋಟಿ ರೂ.ಗಳಲ್ಲಿ ಸಿದ್ಧವಾದರೂ ಪೂರ್ಣವಾಗದ ಕಾರಣ ಈಗ ಯೋಜನಾ ವೆಚ್ಚ 100 ಕೋಟಿ ರೂ.ಗೇರುತ್ತಿದೆ. ಹಾಗಿದ್ದರೂ ಪಂಚಗಂಗಾವಳಿ ಹೊಳೆಗೆ ನಗರದ ತ್ಯಾಜ್ಯ ನೀರು ಬಿಡುವುದನ್ನು ಸರಿಪಡಿಸಿಲ್ಲ. ಖಾರ್ವಿಕೇರಿ, ಮದ್ದುಗುಡ್ಡೆ ಜನ ಇನ್ನು ಕಾಯುವುದರಲ್ಲಿ ಅರ್ಥ ಇಲ್ಲ. ಎರಡು ಬಾರಿ ಸದಸ್ಯನಾದ ನನಗೂ ಯುಜಿಡಿ ಯೋಜನೆ ಸದ್ಯದಲ್ಲಿ ಪೂರ್ಣವಾಗುವ ಭರವಸೆ ಇಲ್ಲ. ಹೀಗಾಗಿ ಪುರಸಭೆ ವಿರುದ್ಧ ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಅಧ್ಯಕ್ಷರು ರಸ್ತೆ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದರೂ ಆಗಲಿಲ್ಲ. ಹಾಗಿದ್ದರೂ ಎಸ್‌ಟಿಪಿಗೆ ಹೋಗುವಲ್ಲಿ ಬದಲಿ ರಸ್ತೆ ಇದೆ. ನಗರದ ತ್ಯಾಜ್ಯ ನೀರಿನಲ್ಲಿ ಇರುವ ಮೀನನ್ನೇ ಹಿಡಿದು ತಂದು ತಿನ್ನಲಾಗುತ್ತಿದೆ. ಇದನ್ನು ಹೇಗೆ ಸಹಿಸಿಕೊಳ್ಳುವುದು ಎಂದು ಗಿರೀಶ್ ಕೇಳಿದರು. ಯುಜಿಡಿ ಸಮಸ್ಯೆ ನಿವಾರಣೆಗೆ ಅನೇಕ ಪ್ರಯತ್ನ ವಾಡಲಾಗಿದೆ. ಸರ್ಕಾರದಿಂದ ಹೆಚ್ಚುವರಿ ಅನುದಾನ ಮಂಜೂರಾಗದೆ ತೊಡಕಾಗಿದೆ ಎಂದು ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು. ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ್ ಜೆ. ಉಪಸ್ಥಿತರಿದ್ದರು.

ಬೀದಿದೀಪ ಅಳವಡಿಸಿ

ನಗರದ ಭಂಡಾರ್ಕಾರ್ಸ್ ರಸ್ತೆಯಲ್ಲೇ ಅಂಗಡಿಗಳು ತಲೆಯೆತ್ತಿದ್ದು, ಕಟ್ಟಡಗಳ ಮುಂಭಾಗ ರಸ್ತೆಯನ್ನೇ ಆವರಿಸಿದೆ. ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲುವುದರಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಗಿರೀಶ್ ಹೇಳಿದರು. ಕೋಡಿ ಚರಂಡಿ ಕಾಮಗಾರಿ ನಿರ್ಣಯವಾದರೂ ಕಾಮಗಾರಿ ಆಗಲಿಲ್ಲ ಎಂದು ಅಶ್ಪಕ್ ಕೋಡಿ ಹೇಳಿದರು. ಕೋಡಿಯಲ್ಲಿ ಬೀದಿದೀಪಕ್ಕೆ ಕಂಬ ನೀಡಲಾಗಿದೆ, ದೀಪ ಮಾತ್ರ ಇನ್ನೂ ಹಾಕಿಲ್ಲ ಎಂದು ಕೇಳಿದಾಗ, ಎರಡಕ್ಕೂ ಬೇರೆ ಬೇರೆ ಗುತ್ತಿಗೆದಾರರು ಎಂದು ಹೇಳಲಾಯಿತು. ನನ್ನ ವಾರ್ಡ್‌ಗೆ 4 ವರ್ಷದಿಂದ ವಿದ್ಯುತ್ ಕಂಬ ನೀಡಿಲ್ಲ, ರಿಕ್ಷಾ ನಿಲ್ದಾಣ ಬಳಿ ಬೀದಿದೀಪ ಅಳವಡಿಸಿ ಎಂದು ಪ್ರಭಾವತಿ ಶೆಟ್ಟಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net