

ವಿಜಯವಾಣಿ ಸುದ್ದಿಜಾಲ ಹಾಲಾಡಿ
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲೊಂದಾದ ಲಯನ್ಸ್ ಕ್ಲಬ್ 1917 ರಲ್ಲಿ ಆರಂಭಗೊಂಡಿದ್ದು, 13ಲಕ್ಷದ 89 ಸಾವಿರ ಸದಸ್ಯರನ್ನು ಹೊಂದಿದ್ದು 209 ದೇಶಗಳಲ್ಲಿ ವಿಸ್ತರಿಸಿದ್ದು ವಿವಿಧ ಸವಾಜಮುಖಿ ಸೇವಾ ಕಾರ್ಯಗಳು ನಡೆಯುತ್ತಿವೆ. ಸಾವಾಜಿಕ ಸೇವಾ ಕಾರ್ಯಗಳಲ್ಲಿ ಅಸಕ್ತಿ ಹೊಂದಿರುವವರಿಗೆ ಇಲ್ಲಿ ಉತ್ತಮ ಅವಕಾಶಗಳಿವೆ ಎಂದು ಲಯನ್ಸ್ ಇಂಟರ್ ನ್ಯಾಷನಲ್ ಪೂರ್ವ ಜಿಲ್ಲಾ ಗವರ್ನರ್ ಪಿಎಂಜೆಎಫ್, ಪಿಡಿಜಿ ಕೆ. ಸುರೇಶ್ ಪ್ರಭು ಹೇಳಿದರು.
ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಹಾಲಾಡಿ ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಬಿ.ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿಯಾಗಿ ಜಯಪ್ರಕಾಶ ಶೆಟ್ಟಿ, ಕೋಶಾಧಿಕಾರಿಯಾಗಿ ಗೌತಮ ಶೆಟ್ಟಿ ಅಧಿಕಾರ ವಹಿಸಿಕೊಂಡರು.
ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಪಡೆದ ವಿದ್ಯಾರ್ಥಿ ಶ್ರೀರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಡಿಸ್ಟಿಕ್ ಅಡ್ಮಿನಿಸ್ಟೇಟರ್ ಅರುಣ್‌ಕುವಾರ್ ಹೆಗ್ಡೆ, ಎಕ್ಸೆಟೇಶನ್ ಚೇರ್‌ಪರ್ಸನ್ ಉದಯ ಕುವಾರ್ ಶೆಟ್ಟಿ, ಜಿಲ್ಲಾ ಸಂಪುಟ ಕೋಶಾಧಿಕಾರಿ ಶಶಿಧರ ಶೆಟ್ಟಿ, ರೀಜನ್ ಸೆಕ್ರೆಟರಿ ಏಕನಾಥ ಬೋಳಾರ್, ಪ್ರಾಂತೀಯ ಅಧ್ಯಕ್ಷ ರಜತ್ ಹೆಗ್ಡೆ, ಜೋನ್ ಚೇರ್ ಪರ್ಸನ್ ರವಾ ಬೋಳಾರ್, ನಿಕಟ ಪೂವಾಧ್ಯಕ್ಷ ಜಯಪ್ರಕಾಶ ಶೆಟ್ಟಿ, ಕಾರ್ಯದರ್ಶಿ ಗೌತಮ್ ಶೆಟ್ಟಿ. ಎಮ್, ಕೋಶಾಧಿಕಾರಿ ದಿನಕರ ಎಚ್. ಉಪಸ್ಥಿತರಿದ್ದರು.
ನಿಕಟ ಪೂವಾಧ್ಯಕ್ಷ ಜಯಪ್ರಕಾಶ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ಗೌತಮ ಶೆಟ್ಟಿ ವಂದಿಸಿದರು. ಉದಯ ಶೆಟ್ಟಿ ಹಾಲಾಡಿ ಪರಿಚಯಿಸಿದರು. ಸೂರ್ಯಪ್ರಕಾಶ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು.