More

    ಸ್ವರಾ​ಗೆ ಮಾತೇ ಮುಳುವಾಯಿತಾ? ನಿಲುವೇ ಶತ್ರುವಾಯಿತಾ?

    ಮುಂಬೈ: ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದು ದಶಕದ ಮೇಲಾಗಿದೆ. ಈ ಒಂದು ದಶಕದಲ್ಲಿ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಒಂದಿಷ್ಟು ಹಿಟ್​ ಚಿತ್ರಗಳ ಭಾಗವಾದರೂ, ಸ್ವರಾಗೆ ಬಾಲಿವುಡ್​ನಲ್ಲಿ ಅವಕಾಶಗಳು ಅಷ್ಟಕ್ಕಷ್ಟೇ. ಅದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಯನ್ನು ಆಕೆಯ ಮುಂದಿಟ್ಟರೆ, ‘ನನ್ನ ನಿಲುವು ಮತ್ತು ಮಾತುಗಳು’ ಎಂಬ ಉತ್ತರ ಅವರಿಂದ ಬರುತ್ತದೆ.

    ಇದನ್ನೂ ಓದಿ: ಸಾಮರಸ್ಯ, ಸಹಬಾಳ್ವೆ ಮತ್ತು ವಾಟ್ಸಪ್​ ಸಂದೇಶ … ಇದು ‘ಕುದ್ರು’

    ಸ್ವರಾ ಭಾಸ್ಕರ್​ ಮೂಲತಃ ಎಡಪಂಥೀಯ ಚಿಂತನೆಯುಳ್ಳವರು. ಆಗಾಗ ವ್ಯವಸ್ಥೆಯ ವಿರುದ್ಧ ಮಾತಾಡುತ್ತಿರುತ್ತಾರೆ. ರಾಜಕೀಯದ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಿಂದಲೇ ತಮಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎನ್ನುತ್ತಾರೆ ಸ್ವರಾ.

    ಈ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬೇರೆಯವರಿಗೆ ಹೋಲಿಸಿದರೆ ನಾನೊಬ್ಬ ಒಳ್ಳೆಯ ನಟಿ. ನನ್ನ ಟ್ರಾಕ್​ ರೆಕಾರ್ಡ್​ ಬಹಳ ಚೆನ್ನಾಗಿದೆ. ಆರೇಳು ಬ್ಲಾಕ್​ಬಸ್ಟರ್​ ಚಿತ್ರಗಳ ಭಾಗವಿದ್ದೇನೆ. ಒಂದಿಷ್ಟು ವೆಬ್​ಸರಣಿಗಳಲ್ಲೂ ನಟಿಸಿದ್ದೇನೆ. ನನ್ನ ಅಭಿನಯದ ಬಗ್ಗೆ ಯಾವತ್ತೂ ಕೆಟ್ಟ ವಿಮರ್ಶೆಗಳು ಬಂದಿಲ್ಲ. ಆದರೂ ನನಗೆ ಇಲ್ಲಿ ಹೆಚ್ಚು ಕೆಲಸ ಸಿಗುತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ ಅವರು.

    ‘ನನಗೆ ನಟನೆ ಎಂದರೆ ಬಹಳ ಇಷ್ಟ. ಆದರೆ, ನನ್ನ ನಿಲುವು ಮತ್ತು ಮಾತುಗಳಿಂದಾಗಿ ಅದಕ್ಕೇ ಪೆಟ್ಟು ಬೀಳುತ್ತಿದೆ. ನನ್ನ ನಿಲುವುಗಳಿಂದಾಗಿ ನಾನು ಬಹಳ ದೊಡ್ಡ ಬೆಲೆ ತೆರುತ್ತಿದ್ದೇನೆ ಎಂಬ ವಿಷಯ ನನಗೆ ಬಹಳ ಸ್ಪಷ್ಟವಾಗಿ ಗೊತ್ತಿದೆ. ಆದರೂ ಬೇರೆ ದಾರಿ ಇಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸಚಿವ ಸುಧಾಕರ್ ಬಿಡುಗಡೆ ಮಾಡಿದರು ‘ತನುಜಾ’ ಚಿತ್ರದ ಟ್ರೈಲರ್​ …

    ಸ್ವರಾ ಸದ್ಯಕ್ಕೆ ‘ಜಹಾ ಚಾರ್​ ಯಾರ್​’, ‘ಶೀರ್​ ಕುರ್ಮಾ’ ಮತ್ತು ‘ಮಿಸಸ್​ ಫಲಾನಿ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿದೆ.

    ಹರಿಪ್ರಿಯಾ-ವಸಿಷ್ಠ ಪ್ರೀತಿಗೆ ಕನ್ನಡಿ ಹಿಡಿದಿದ್ದು ಕ್ರಿಸ್ಟಲ್​ ಅಂತೆ … ಯಾರು ಈ ಕ್ರಿಸ್ಟಲ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts