ಡೊನಾಲ್ಡ್​ ಟ್ರಂಪ್​ ಕದನ ವಿರಾಮ ಹೇಳಿಕೆಗೆ ಪ್ರಧಾನಿ ಮೋದಿ ಮೌನ ಏಕೆ? ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ! Mallikarjun Kharge

PM Modi and Mallikarjuna Kharge
Published on

Mallikarjun Kharge: ಪಾಕ್​​-ಭಾರತ ಕದನ ವಿರಾಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪದೇಪದೆ ಹೇಳಿಕೆ ನೀಡುತ್ತಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ವಹಿಸಿದ್ದಾರೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ (ಜುಲೈ 29) ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದರು. ಕದನ ವಿರಾಮ ಘೋಷಣೆಯನ್ನು ನಮ್ಮ ವಿದೇಶಾಂಗ ಸಚಿವರು, ನಮ್ಮ ಪ್ರಧಾನಿ ಅಥವಾ ನಮ್ಮ ರಕ್ಷಣಾ ಸಚಿವರು ಮಾಡಿಲ್ಲ. ಬದಲಿಗೆ ವಾಷಿಂಗ್ಟನ್‌ನಲ್ಲಿ ಕೂತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದಾರೆ ಎಂದು ಟೀಕಿಸಿದರು.

ಕದನ ವಿರಾಮಕ್ಕೆ ಮಧ್ಯವರ್ತಿ ಎಂದು ಟ್ರಂಪ್ 29 ಬಾರಿ ಒಪ್ಪಿಕೊಂಡ ನಂತರವೂ, ಭಾರತ ಅದನ್ನು ಒಪ್ಪಿಕೊಳ್ಳಲು ಏಕೆ ಸಿದ್ಧವಾಗಿಲ್ಲ? ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ, ನಾನು ನನ್ನ ಭಾಷಣ ಮುಗಿಸುವ ಹೊತ್ತಿಗೆ, ಟ್ರಂಪ್ ಕದನ ವಿರಾಮದ ಬಗ್ಗೆ 30ನೇ ಬಾರಿಗೆ ಹೇಳಬಹುದು ಎಂದು ಇದೇ ಸಂದರ್ಭದಲ್ಲಿ ಖರ್ಗೆ ವ್ಯಂಗ್ಯವಾಡಿದ್ದಾರೆ.

ಆಪರೇಷನ್ ಸಿಂಧೂರ ಸಮಯದಲ್ಲಿ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಪ್ರಧಾನಿಯವರ ಫ್ರೆಂಡ್​ ಹಲವು ಬಾರಿ ಹೇಳಿಕೊಂಡಾಗ ಪ್ರಧಾನಿ ಮೋದಿ ಏಕೆ ಮೌನವಾಗಿದ್ದರು ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನು ನಡೆಸಿದರು.

ಖರ್ಗೆ ಪ್ರಶ್ನಿಸುತ್ತಿದ್ದಂತೆ, ಮಧ್ಯಪ್ರವೇಶಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯಾವುದೇ ಮೂರನೇ ವ್ಯಕ್ತಿಯ ಒತ್ತಡದಿಂದ ಆಪರೇಷನ್ ಸಿಂಧೂರ ಅನ್ನು ಎಂದಿಗೂ ನಿಲ್ಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net