

ಗುವಾಹಟಿ: ಧರ್ಮ ನಿರಪೇಕ್ಷ ದೇಶದಲ್ಲಿ ಸರ್ಕಾರಿ ಹಣದಿಂದ ಧಾರ್ಮಿಕ ಶಿಕ್ಷಣ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ಅಸ್ಸಾಂ ಸರ್ಕಾರ, ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮದರಸಾಗಳನ್ನು ಮುಚ್ಚಲು ನಿರ್ಧರಿಸಿದೆ.
‘‘ಮದರಸಾ ಶಿಕ್ಷಣ ಮಂಡಳಿಯನ್ನು 2018ರಲ್ಲಿ ಬರ್ಖಾಸ್ತುಗೊಳಿಸಲಾಗಿದೆ. ಅದಕ್ಕನುಸಾರವಾಗಿ ಎಲ್ಲ ಮದರಸಾಗಳನ್ನು ಮುಚ್ಚಲಾಗುವುದು. ಈ ಸಂಬಂಧ ಮುಂದಿನ ತಿಂಗಳು ಅಧಿಸೂಚನೆ ಹೊರಡಿಸಲಾಗುವುದು’’ ಎಂದು ಶಿಕ್ಷಣ ಸಚಿವ ಹಿಮಂತ ವಿಶ್ವ ಶರ್ಮಾ ಶುಕ್ರವಾರ ತಿಳಿಸಿದ್ದಾರೆ. ಸರ್ಕಾರ ನಡೆಸುವ ಸಂಸ್ಕೃತ ಶಾಲೆಗಳನ್ನೂ ಮುಚ್ಚಲಾಗುತ್ತದೆಂದು ಫೆಬ್ರವರಿಯಲ್ಲಿ ಶರ್ಮಾ ಪ್ರಕಟಿಸಿದ್ದರು. ಅಸ್ಸಾಂನಲ್ಲಿ 614 ಸರ್ಕಾರಿ ಮದರಸಾಗಳಿವೆ. ಸುಮಾರು 900 ಖಾಸಗಿ ಮದರಸಾಗಳಿವೆ. 100 ಸರ್ಕಾರಿ ಸಂಸ್ಕೃತ ಶಾಲೆಗಳಿವೆ. ಮದರಸಾಗಳಿಗೆ ಸರ್ಕಾರ ಪ್ರತಿ ವರ್ಷ 3ರಿಂದ 4 ಕೋಟಿ ರೂ. ಹಾಗೂ ಸಂಸ್ಕೃತ ಶಾಲೆಗಳಿಗೆ ಒಂದು ಕೋಟಿ ರೂ. ಅನುದಾನ ನೀಡುತ್ತಿತ್ತು.