

ಮುಂಬೈ: ಆಘಾತಕಾರಿ ಘಟನೆಯೊಂದಲ್ಲಿ ವ್ಯಕ್ತಿಯೋರ್ವ ತನ್ನ ಮಾಜಿ ಪ್ರಿಯತಮೆಯನ್ನು ನಡುರೆಸ್ತೆಯಲ್ಲಿ ಸ್ಪ್ಯಾನರ್ನೊಂದಿಗೆ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯು ಮಹಾರಾಷ್ಟ್ರದ ರಾಜಧಾನಿ ಮುಂಬೈನ ವಸೈಯ ಪೂರ್ವ ಚಿಂಚ್ಪಾಡಾದಲ್ಲಿ ನಡೆದಿದ್ದು, ಕೊಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತರನ್ನು ಆರತಿ ಯಾದವ್ ಎಂದು ಗುರುತಿಸಲಾಗಿದ್ದು, ಆರೋಪಿ ರೋಹಿತ್ ಯಾದವ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಜನರು ಸುಮ್ಮನೆ ನಿಂತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಆರೋಪಿ ರೋಹಿತ್ ದೂರದಿಂದ ಸ್ಪ್ಯಾನರ್ ಹಿಡಿದು ಓಡಿ ಬರುವುದನ್ನು ನೋಡಬಹುದಾಗಿದೆ. ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿರುವ ಸಂತ್ರಸ್ತೆ ಅರ್ಪಿತಾ ಮೇಲೆ ಏಕಾಏಕಿ ದಾಳಿ ಮಾಡುತ್ತಾನೆ. ಈ ವೇಳೆ ರಸ್ತೆಯಲ್ಲಿದ್ದ ಜನರು ಸಂತ್ರಸ್ತೆಯ ನೆರವಿಗೆ ಧಾವಿಸದೆ ಸುಮ್ಮನೆ ನಿಂತಿರುವುದನ್ನ ನೋಡಬಹುದಾಗಿದೆ. ಬಳಿಕ ಒಬ್ಬ ವ್ಯಕ್ತಿಯು ಬಿಡಿಸಲು ಮುಂದಾದಾಗ ಆತನಿಗೆ ಆರೋಪಿ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಹೀಗೇಕೆ ಮಾಡಿದೆ ಎಂದು ಆಕೆಯ ಶವದ ಬಳಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿ ರೋಹಿತ್ ಹಾಗೂ ಕೊಲೆಯಾದ ಅರ್ಪಿತಾ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವು ಹಿಂದೆ ಇಬ್ಬರು ಕಾರಣಾಂತರಗಳಿಂದ ಬೇರ್ಪಟ್ಟಿದ್ದರು. ಇತ್ತೀಚಿಗೆ ಅರ್ಪಿತಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ಕೋಪಗೊಂಡ ರೋಹಿತ್ ಸಿಟ್ಟಿನಿಂದ ಆಕೆಯ ಮೇಲೆ ಸ್ಪ್ಯಾನರ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹತ್ಯೆಗೆ ಬಳಸಲಾಗಿದ್ದ ಆಯುಧವನ್ನು ವಶಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.