

ಮುಂಬೈ: ಬಾಲಿವುಡ್ ಕಿಂಗ್ ಶಾರೂಖ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಶಾರೂಖ್ ಹಿಟ್ ಸಿನಿಮಾಗಳ ಲಿಸ್ಟ್ನಲ್ಲಿ ಸ್ವದೇಶ್ ಕೂಡ ಸೇರಿದೆ. ಅಸಲಿಗೆ ಈ ಸಿನಿಮಾ ಶಾರೂಖ್ಖಾನ್ ಅವರಿಗಾಗಿ ನಿರ್ಮಿಸಿದ್ದಲ್ಲಾ. ಅಶುತೋಷ್ ಗೋವಾರಿಕರ್ ಅವರು ಸ್ವದೇಶ್ ಸಿನಿಮಾವನ್ನು ಬೇರೊಬ್ಬ ನಟನಿಗಾಗಿ ಹೆಣೆದಿದ್ದರು. ಆದರೆ ಆ ನಟ ಈ ಸಿನಿಮಾ ಆಫರ್ ತಿರಸ್ಕರಿಸಿದ ಬಳಿಕ ಶಾರೂಖ್ ಖಾನ್ ಸ್ವದೇಶ್ ಚಿತ್ರದ ನಾಯಕನಾಗಿ ಆಯ್ಕೆಯಾದರು. ಅನೇಕ ಬಾರಿ ಬೇರೆಯವರಿಗಾಗಿ ಚಿತ್ರಗಳನ್ನು ನಿರ್ಮಿಸಲಾಗುತ್ತದೆ ಆದರೆ ಒಂದಲ್ಲಾ ಒಂದು ಕಾರಣಕ್ಕೆ ಆ ಸಿನಿಮಾ ಅವರ ಕೈತಪ್ಪೊ ಮತ್ತೊಬ್ಬರು ಸಿನಿಮಾದ ಪಾತ್ರಕ್ಕೆ ಜೀವ ತುಂಬುತ್ತಾರೆ.
ಶಾರೂಖ್ ಖಾನ್, ಗಾಯತ್ರಿ ಜೋಶಿ ಮತ್ತು ಕಿಶೋರಿ ಬಲ್ಲಾಳ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೆರಿಕದ ನಾಸಾದಲ್ಲಿ ಕೆಲಸ ಮಾಡುವ ಎನ್ಆರ್ಐ ಮೋಹನ್ ಭಾರ್ಗವ, ತನ್ನನ್ನ ಬೆಳೆಸಿದವರನ್ನು ಹುಡುಕಲು ತನ್ನ ದೇಶಕ್ಕೆ ಮರಳುತ್ತಾನೆ. ಇದೇ ಸಿನಿಮಾದ ಕಥಾಹಂದರ. 2004ರಲ್ಲಿ ಬಿಡುಗಡೆಯಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸಕ್ಸಸ್ ಕಾಣಲಿಲ್ಲವಾದರೂ, ಇಂದಿಗೂ ಕಥೆಯನ್ನು ಮಾತ್ರ ಎಲ್ಲರೂ ಮೆಚ್ಚುತ್ತಾರೆ
ಸ್ವದೇಶ್ ಚಿತ್ರದಲ್ಲಿನ ನಟನೆಗಾಗಿ ಶಾರೂಖ್ ಖಾನ್ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸಿನಿಮಾದ ಮೋಹನ್ ಭಾರ್ಗವ ಪಾತ್ರಕ್ಕೆ ಅಶುತೋಷ್ ಅವರ ಮೊದಲ ಆಯ್ಕೆ ಶಾರೂಖ್ ಆಗಿರಲಿಲ್ಲ. ಮೊದಲಿಗೆ ನಿರ್ದೇಶಕ ಈ ಪಾತ್ರಕ್ಕೆ ಇಚ್ಛಿಸಿದ್ದು ನಟ ಹೃತಿಕ್ ರೋಷನ್ ಅವರನ್ನು, ಆದರೆ ಹೃತಿಕ್ ರೋಷನ್ ಸ್ಕ್ರಿಪ್ಟ್ ಓದಿದ ಬಳಿಕ ಸಿನಿಮಾ ಮಾಡಲು ಒಪ್ಪಲಿಲ್ಲ.
ಇನ್ನೂ ಈ ವಿಚಾರವಾಗಿ ಹೃತಿಕ್ ರೋಷನ್ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದು, ಸ್ವದೇಶ್ ಸಿನಿಮಾ ಮಾಡಲು ತಿರಸ್ಕರಿಸಿದ್ದೇಕೆ ಎಂಬುದಕ್ಕೆ ಕಾರಣ ಹೇಳಿದ್ದಾರೆ. ಅಶುತೋಷ್ ಅವರ ಸ್ವದೇಸ್ ಸಿನಿಮಾದ ಸ್ಕ್ರಿಪ್ಟ್ ಓದಿದ್ದೆ. ನಿರ್ದೇಶಕರ ದೃಷ್ಟಿಕೋನದಿಂದ ನೋಡಲು ನನಗೆ ಸಾಧ್ಯವಾಗಲಿಲ್ಲ. ಅಲ್ಲದೆ ಆ ಪಾತ್ರ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ. ಅಶುತೋಷ್ ಅವರನ್ನು ತಮ್ಮ ನೆಚ್ಚಿನ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು ಎಂದು ಕೂಡ ತಿಳಿಸಿದರು.
ಸ್ವದೇಶ್ ನಿರಾಕರಿಸಿದ ಬಳಿಕ ನಾಲ್ಕು ವರ್ಷಗಳನ ನಂತರ ಐತಿಹಾಸಿಕ ಸಿನಿಮಾ ಜೋಧಾ ಅಕ್ಬರ್ನಲ್ಲಿ ಅಶುತೋಷ್ ಮತ್ತು ಹೃತಿಕ್ ಜೋಡಿ ಮತ್ತೆ ಒಂದಾಯ್ತು.(ಏಜೆನ್ಸೀಸ್)