More

    ತೂಕ ಕಳೆದುಕೊಳ್ಳಲು ಬಯಸುತ್ತಿದ್ದೀರಾ? ಒಮ್ಮೆ ಜಪಾನ್​ ವಾಟರ್​ ಥೆರಪಿ ಪ್ರಯತ್ನಿಸಿ ನೋಡಿ…

    ತೂಕ ಕಳೆದುಕೊಳ್ಳಲು ಇರುವ ಅನೇಕ ಮಾರ್ಗಗಳಲ್ಲಿ ಜಪಾನ್​ ವಾಟರ್​ ಥೆರಪಿ ಕೂಡ ಒಂದು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈ ಆಧುನಿಕ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೊಜ್ಜು ಹೆಚ್ಚಾಗಿ ಕಾಡುತ್ತಿದೆ. ಇದೇ ಬೊಜ್ಜು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕೆಲವರು ವಿವಿಧ ರೀತಿಯ ಪೌಡರ್ ಮತ್ತು ತೂಕ ಇಳಿಸುವ ಪಾನೀಯಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಈ ನಿಟ್ಟಿನಲ್ಲಿ ಜಪಾನ್​ ವಾಟರ್ ಥೆರಪಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಜಪಾನಿನ ಜನರು ತಮ್ಮ ತೂಕವನ್ನು ನಿಯಂತ್ರಿಸಲು ಪ್ರಾಚೀನ ಕಾಲದಿಂದಲೂ ಈ ವಿಧಾನವನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಅದಕ್ಕಾಗಿಯೇ ಇದನ್ನು ಜಪಾನೀಸ್ ವಾಟರ್ ಥೆರಪಿ ಎಂದು ಕರೆಯಲಾಗುತ್ತದೆ. ಇದನ್ನು ಹೇಗೆ ಅನುಸರಿಸಬೇಕು ಎಂದು ನಾವೀಗ ತಿಳಿಯೋಣ.

    ಕರುಳನ್ನು ಸ್ವಚ್ಛಗೊಳಿಸುತ್ತದೆ
    ಕರುಳಿನ ಕಳಪೆ ಸ್ಥಿತಿಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ವಾಟರ್ ಥೆರಪಿ ವಿಶೇಷವಾಗಿ ಕರುಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿ ಇಡುತ್ತದೆ. ಇದರಿಂದ ಸಂಪೂರ್ಣ ಜೀರ್ಣಕ್ರಿಯೆಯು ಶಕ್ತಿಯುತವಾಗುತ್ತದೆ. ಜೈವಿಕ ಕಾರ್ಯವು ಸುಧಾರಿಸಿದಂತೆ ದೇಹದ ಆರೋಗ್ಯವು ಸಹ ಸುಧಾರಿಸುತ್ತದೆ. ಇದರಿಂದ ತೂಕವನ್ನು ಕಳೆದುಕೊಳ್ಳುವ ಅವಕಾಶವೂ ಇದೆ.

    ಇದನ್ನೂ ಓದಿ: ಆಪರೇಷನ್​ ಅಜಯ್​: ಯುದ್ಧ ಪೀಡಿತ ಇಸ್ರೇಲ್​ನಿಂದ ತವರಿಗೆ ಮರಳಿದ 212 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಬಿರುಸು

    ಅನುಸರಿಸುವ ವಿಧಾನ
    ಈ ವಿಧಾನವನ್ನು ಅನುಸರಿಸಿ ತೂಕವನ್ನು ಕಳೆದುಕೊಳ್ಳಲು ಬಯಸುವವರು ನೀರನ್ನು ಮಾತ್ರ ಕುಡಿಯಬೇಕು. ಬೆಳಗ್ಗೆ ಎದ್ದಾಗ ನಾಲ್ಕೈದು ಲೋಟ ನೀರು ಕುಡಿಯಿರಿ. ನಂತರ ಉಪಾಹಾರ ಸೇವಿಸಲು ಕನಿಷ್ಠ ಅರ್ಧ ಗಂಟೆ ಸಮಯ ಇರಲಿ. ನನ್ನಿಂದ ಸಾಧ್ಯವಾಗುತ್ತೆ ಎನ್ನುವವರು ತಿಂಗಳಿಗೆ ಒಮ್ಮೆಯಾದರೂ 24 ಗಂಟೆಗಳಿಂದ 36 ಗಂಟೆಗಳವರೆಗೆ ಕೇವಲ ನೀರಿನ್ನೇ ಸೇವಿಸಬಹುದು. ಆದರೆ ಇದು ಕಡ್ಡಾಯ ಎಂಬ ನಿಯಮವಿಲ್ಲ. ನೀರನ್ನೇ ಸೇವಿಸಲು ಸಾಧ್ಯವಾಗದೇ ಇರುವರು ಬೆಳಗ್ಗೆ ನೀರು ಕುಡಿಯಬೇಕು ಮತ್ತು ಮಧ್ಯಾಹ್ನ ಕ್ಯಾಲೋರಿಕ್ ಆಹಾರವನ್ನು ಸೇವಿಸಬೇಕು. ಮುಖ್ಯವಾಗಿ ಕಡಿಮೆ ತಿನ್ನಬೇಕು. ಅಲ್ಲದೆ, ಒಮ್ಮೆ ತಿಂದ ನಂತರ ಮತ್ತೆ ತಿನ್ನಲು ಕನಿಷ್ಠ ಎರಡು ಗಂಟೆಯ ಅಂತರವಿರಬೇಕು.

    ಪರಿಣಾಮವೇನು?
    ಈ ರೀತಿ ಮಾಡುವುದರಿಂದ ದೇಹ ಮತ್ತು ಕರುಳಿನಲ್ಲಿ ಸಂಗ್ರಹವಾದ ಎಲ್ಲ ವಿಷಕಾರಿ ವಸ್ತುಗಳು ಹೊರಗೆ ಹೋಗುತ್ತವೆ. ಇದನ್ನು ತಿಂಗಳಿಗೆ ಒಮ್ಮೆಯಾದರೂ ಮಾಡಬೇಕು. ಈ ಥೆರಪಿ ಆರಂಭಿಸಿದವರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾಧ್ಯವಾದಷ್ಟು ಬೆಚ್ಚಗಿನ ನೀರನ್ನು ಕುಡಿಯಬೇಕು. ಒಂದಂತೂ ಗಮನದಲ್ಲಿರಲಿ ಅದೇನೆಂದರೆ, ಯಾವುದೇ ಆಹಾರ ಕ್ರಮವೂ ಎಲ್ಲ ದೇಹಗಳಿಗೆ ಒಂದೇ ರೀತಿಯ ಫಲಿತಾಂಶಗಳನ್ನು ನೀಡುವುದಿಲ್ಲ. (ಏಜೆನ್ಸೀಸ್​)

    ಹ್ಯಾಟ್ರಿಕ್​ ಗೆಲುವಿನ ಹಂಬಲದಲ್ಲಿ ಕಿವೀಸ್​; ಇಂದು ಬಾಂಗ್ಲಾ ಎದುರು ಕ್ಯಾಪ್ಟನ್​ ಕೇನ್​ ಬಲ

    ದೇವಭೂಮಿಯಲ್ಲಿ ಅಭಿವೃದ್ಧಿ ಮಂತ್ರ, ಆದಿಕೈಲಾಸದಲ್ಲಿ ಧ್ಯಾನ: 4,200 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

    ಆರ್​ಡಿಪಿಆರ್​ಗೆ ಶಾಲಾಡಳಿತ: ಶಿಕ್ಷಣ ಇಲಾಖೆಯ 26 ಜವಾಬ್ದಾರಿ ಪಂಚಾಯತ್ ರಾಜ್ ಇಲಾಖೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts