More

    ದೇವಭೂಮಿಯಲ್ಲಿ ಅಭಿವೃದ್ಧಿ ಮಂತ್ರ, ಆದಿಕೈಲಾಸದಲ್ಲಿ ಧ್ಯಾನ: 4,200 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

    ನವದೆಹಲಿ: ಉತ್ತರಾಖಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸುಮಾರು 4,200 ಕೋಟಿ ರೂಪಾಯಿಗಳ ಬಹುಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದ್ದು, ಕೆಲ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

    ರಾಜ್ಯದಲ್ಲಿ ಒಟ್ಟು 23 ಯೋಜನೆಗಳು ಒಳಗೊಂಡಿದ್ದು, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ವಿದ್ಯುತ್, ಕುಡಿಯುವ ನೀರು, ಕ್ರೀಡೆ, ಪ್ರವಾಸೋದ್ಯಮ, ವಿಪತ್ತು ತಗ್ಗಿಸುವಿಕೆ ಮತ್ತು ತೋಟಗಾರಿಕೆ ಕ್ಷೇತ್ರಗಳಿಗೆ ಉತ್ತೇಜನ ನೀಡಲಿವೆ. ಪಿತೋರಗಢದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಿದ ಯೋಜನೆಗಳಲ್ಲಿ 21,398 ಪಾಲಿ-ಹೌಸ್​ಗಳು, ಹೆಚ್ಚಿನ ಸಾಂದ್ರತೆಯ ಸೇಬು ತೋಟಗಳ ಕೃಷಿ, ರಸ್ತೆಗಳ ಡಬಲ್ ಲೇನಿಂಗ್ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಳಿಜಾರು ನಿರ್ವಹಣೆ ಮತ್ತು 32 ಸೇತುವೆಗಳ ನಿರ್ಮಾಣ ಒಳಗೊಂಡಿವೆ. ಇವುಗಳಲ್ಲಿ ವಿಪತ್ತು ನಿರ್ವಹಣಾ ಕಾರ್ಯವಿಧಾನ ಬಲಪಡಿಸುವುದು, ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಸೌಲಭ್ಯಗಳ ವಿಸ್ತರಣೆ ಮತ್ತು ಚಾರ್​ಧಾಮ್ ಮಾದರಿಯಲ್ಲಿ ಮಾನಸಖಂಡ ಪ್ರದೇಶದಲ್ಲಿ ದೇವಾಲಯಗಳ ಅಭಿವೃದ್ಧಿಯೂ ಸೇರಿದೆ.

    ಇದನ್ನೂ ಓದಿ: ಅಂತ್ಯಸಂಸ್ಕಾರ ಸಹಾಯನಿಧಿಗೂ ಕೊಕ್ಕೆ; ಸಕಾಲಕ್ಕೆ ನೆರವು ಸಿಗದೆ ಬಡವರ ಪರದಾಟ

    ಯುವಕರಿಗೆ ಹೊಸ ಸಾಧ್ಯತೆ ಸೃಷ್ಟಿ
    ಭಾರತದ ವಿಸ್ತಾರಗೊಳ್ಳುತ್ತಿರುವ ಆರ್ಥಿಕತೆಯು ಯುವಕರಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ ಮತ್ತು ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶ ರವಾನಿಸಿದ ಅವರು ಮಾತನಾಡಿದರು.

    ಪೂಜೆ, ಶಿಖರದ ದರ್ಶನ
    ಗುರುವಾರ ಬೆಳಗ್ಗೆ ಉತ್ತರಾಖಂಡಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಶಿವನ ವಾಸಸ್ಥಾನ ಎಂದೇ ನಂಬಲಾದ ಆದಿ ಕೈಲಾಸ ಶಿಖರದ ದರ್ಶನ ಮತ್ತು ಜೋಲಿಂಗ್​ಕಾಂಗ್​ನ ಪಾರ್ವತಿ ಕುಂಡದಲ್ಲಿ ಪೂಜೆ ನೆರವೇರಿಸಿದರು. ಜೋಲಿಂಗ್​ಕಾಂಗ್​ನ ಐಟಿಬಿಪಿ ಹೆಲಿಪ್ಯಾಡ್​ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಧಾನಿಯನ್ನು ಸ್ವಾಗತಿಸಿದರು. ಸಾಂಪ್ರದಾಯಿಕ ಬುಡಕಟ್ಟು ಜನಾಂಗದ ಉಡುಪು ಧರಿಸಿದ ಮೋದಿ ಅವರು, ಜೋಲಿಂಗ್​ಕಾಂಗ್​ನ ಪಾರ್ವತಿ ಕುಂಡದ ದಡದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ಆರತಿ ಮಾಡಿ ಶಂಖನಾದ ಮೊಳಗಿಸಿದರು. ಸ್ಥಳೀಯ ಪುರೋಹಿತರಾದ ವೀರೇಂದ್ರ ಕುಟಿಯಾಲ್ ಮತ್ತು ಗೋಪಾಲ್ ಸಿಂಗ್ ಧಾರ್ವಿುಕ ಮಾರ್ಗದರ್ಶನ ನೀಡಿದರು. ಮೋದಿಯವರು ಕೆಲಕಾಲ ಆದಿ ಕೈಲಾಸ ಶಿಖರದ ಮುಂದೆ ಧ್ಯಾನದಲ್ಲಿ ಕುಳಿತರು. ಗಡಿ ಗ್ರಾಮ ಗುಂಜಿಗೆ ತೆರಳಿ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಅಲ್ಮೋರಾ ಜಿಲ್ಲೆಯಲ್ಲಿ ಶಿವನಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯವಾದ ಜಾಗೇಶ್ವರ ಧಾಮಕ್ಕೆ ತೆರಳಿದರು. ಜ್ಯೋತಿರ್ಲಿಂಗದ ಸುತ್ತ ಪೂಜೆ, ಪರಿಕ್ರಮ ಮತ್ತು ಧ್ಯಾನದ ನಂತರ ಕುಮಾವೋನಿ ಪಾಕಪದ್ಧತಿಗಳ ರುಚಿ ಸವಿದರು.

    ಹ್ಯಾಟ್ರಿಕ್​ ಗೆಲುವಿನ ಹಂಬಲದಲ್ಲಿ ಕಿವೀಸ್​; ಇಂದು ಬಾಂಗ್ಲಾ ಎದುರು ಕ್ಯಾಪ್ಟನ್​ ಕೇನ್​ ಬಲ

    ಸಾಮೂಹಿಕ ನಾಯಕತ್ವ ಫಲ ಕೊಡುವುದೇ?; ಯಡಿಯೂರಪ್ಪ ಹಾದಿಯಲ್ಲಿ ರಾಜೆ, ಚೌಹಾಣ್, ರಮಣ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts