ಭೂ ವಂಚಿತರ ಕಣ್ಣೀರು ಒರೆಸೋರ್ಯಾರು?

blank

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಅರಣ್ಯ ಜಮೀನು ಒತ್ತುವರಿ ತೆರವು ವಿಚಾರದಲ್ಲಿ ರೈತರು ಹಾಗೂ ಇಲಾಖೆಯ ನಡುವಿನ ಸಂರ್ಷ ಮುಂದುವರಿದಿದ್ದು, ಒತ್ತುವರಿ ತೆರವಿನಿಂದ ಜಮೀನು ಕಳೆದುಕೊಳ್ಳುತ್ತಿರುವವರು ದಿಕ್ಕು ತೋಚದೆ ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ಗಮನಕ್ಕೆ ತಂದ್ದರೂ ಗೋಳು ಕೇಳುವವರೇ ಇಲ್ಲದಂತಾಗಿದ್ದು, ಸರ್ಕಾರ ಮಧ್ಯ ಪ್ರವೇಶ ಮಾಡಿ ನ್ಯಾಯ ದೊರಕಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಅರಣ್ಯ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇಲಾಖೆಯಿಂದ 2023ರಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯಲ್ಲಿ 2,800 ಹಾಗೂ ಕೋಲಾರ ತಾಲೂಕು ವ್ಯಾಪ್ತಿಯ ನರಸಾಪುರ, ಹರಟಿ ಅರಣ್ಯ ಭಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
ರಾತ್ರೋರಾತ್ರಿ ಒತ್ತುವರಿ ತೆರವು ನಡೆಸುತ್ತಿರುವ ಅಧಿಕಾರಿಗಳು ಟೊಮ್ಯಾಟೊ, ಕೋಸು, ಕ್ಯಾಪ್ಸಿಕಂ, ನರ್ಸರಿ, ಕೋಳಿ ಾಮ್​ರ್, ಮಾವು ಮರಗಳು ಹೀಗೆ ಏನೇ ಇದ್ದರೂ ಹಾನಿ ಮಾಡಿ ಭೂಮಿ ವಶಕ್ಕೆ ಪಡೆಯುತ್ತಿರುವುದರಿಂದ ಸಾಕಷ್ಟು ಕುಟುಂಬಗಳ ಬದುಕು ಬೀದಿಗೆ ಬಂದಿದೆ.
ಅರಣ್ಯ ಜಮೀನನ್ನು ಈಗಾಗಲೇ ಸರ್ವೇ ಮಾಡಿ ಒತ್ತುವರಿ ಗುರುತಿಸಲಾಗಿದ್ದು, ಗಡಿಯಲ್ಲಿ ಆರ್​ಎ್​ ಎಂದು ಬರೆದಿರುವ ಕಲ್ಲು ನೆಡಲಾಗಿದೆ. ತೆರವು ಕಾರ್ಯಾಚರಣೆ ಪ್ರಾರಂಭಿಸುವ ಮುನ್ನವೇ ಒತ್ತುವರಿದಾರರಿಗೆ ನೋಟಿಸ್​ ನೀಡಲಾಗಿದ್ದು, ಆಕ್ಷೇಪಣೆಯಿದ್ದಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ಕಾಲಾವಕಾಶ ನೀಡಲಾಗಿತ್ತು. ಆದರೆ ಕೆಲವೇ ಮಂದಿ ದಾಖಲೆ ಸಲ್ಲಿಸಿದ್ದು, ಅವೂ ಸಮರ್ಪಕವಾಗಿಲ್ಲ. ದರಖಾಸ್ತು ಸಮಿತಿಯಿಂದ ಭೂಮಿ ಮಂಜೂರು ಆಗಿರುವುದಕ್ಕೆ ದಾಖಲೆಗಳಿಗೆ, ಸ್ವಾಧಿನದಲ್ಲಿದ್ದ ಜಮೀನು ಸಂಬಂಧಿಸಿದ ಪಹಣಿ, ಸಾಗುವಳಿ ಚೀಟಿ, ಪಟ್ಟ ಹೀಗೆ ಹಲವು ದಾಖಲೆಗಳಿವೆ. ಆದರೆ, ಕಂದಾಯ ಮತ್ತು ಅರಣ್ಯ ಇಲಾಖೆ ಬಳಿ ಇರುವ ದಾಖಲೆಗಳು ತಾಳೆಯಾಗುತ್ತಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ. ಇದು ಒಂದು ರೀತಿ ಕಂದಾಯ ಇಲಾಖೆಯ ಅಧಿಕಾರಿಗಳ ಅಸಮಾಧಾನಕ್ಕೂ ಕಾರಣವಾದಂತಾಗಿದೆ.

* ಈಡೇರದ ಜನಪ್ರತಿನಿಧಿಗಳ ಭರವಸೆ
ಈಗಾಗಲೇ ಜಮೀನು ಕಳೆದುಕೊಂಡಿರುವವರು ಜಿಲ್ಲೆಗೆ ಆಗಮಿಸುವ ಸಚಿವರಿಗೆ ಮನವಿ ಸಲ್ಲಿಸಿ ಅಳಲು ತೋಡಿಕೊಂಡಿದ್ದಾರೆ. ಆ ಸಮಯದಲ್ಲಿ ಅವರು ನೀಡಿದ ಭರವಸೆಗಳಾವವೂ ಈಡೇರಿಲ್ಲ. ಮುಖ್ಯಮಂತ್ರಿ, ಅರಣ್ಯ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಸಹ ಸ್ಪಂದನೆ ಸಿಕ್ಕಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

* ತಪ್ಪಿದ ಅನಾಹುತ
ಕಳೆದ ಭಾನುವಾರ ಕೇತಗಾನಹಳ್ಳಿಗೆ ಭೇಟಿ ನೀಡಿದ್ದ ಅರಣ್ಯಾಧಿಕಾರಿಗಳು ಟ್ರಾಕ್ಟರ್​ಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಕೆಲವರು ಅಡ್ಡಿಪಡಿಸಿದರು. ಆಗ ಮೂವರನ್ನು ಅರಣ್ಯಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು. ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಶ್ರೀನಿವಾಸಪುರ-ಮುಳಬಾಗಿಲು ಮುಖ್ಯರಸ್ತೆ ತಡೆ ನಡೆಸಿ, ಪ್ರತಿಭಟಿಸಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನೆ ನಡೆಸದಂತೆ ಮನವೊಲಿಸಿದರು. ಭೂಮಿ ಕಳೆದುಕೊಂಡು ತೀವ್ರ ಬೇಸರದಲ್ಲಿರುವ ಕೆಲವರು ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ಆತ್ಮಹತ್ಮೆ ಮಾಡಿಕೊಳ್ಳಲು ಯತ್ನಿಸಿದರು. ಸ್ಥಳದಲ್ಲಿದ್ದವರು ಪೆಟ್ರೋಲ್​ ಸುರಿದುಕೊಳ್ಳುವುದನ್ನು ತಪ್ಪಿಸಿ, ಮೈ ಮೇಲೆ ನೀರು ಸುರಿದು ಅನಾಹುತ ತಡೆದರು.

ಕೋಟ್​…
ರೈತರ ಜಮೀನನ್ನು ಅರಣ್ಯ ಇಲಾಖೆ ಪಡೆದುಕೊಳ್ಳಲು ಬಿಡುವುದಿಲ್ಲ. ನಮ್ಮದು ರೈತರ ಪರ ಇರುವ ಸರ್ಕಾರ. ಈ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
> ಬೈರತಿ ಸುರೇಶ್​, ಉಸ್ತುವಾರಿ ಸಚಿವ, ಕೋಲಾರ

ಕೋಟ್​…
ಸುಮಾರು ದಶಗಳಿಂದ ಅನುಭೋಗದಲ್ಲಿದ್ದ ರೈತರ ಜಮೀನುಗಳನ್ನು ಅರಣ್ಯಾಧಿಕಾರಿಗಳು ಸ್ವಾಧಿನಪಡಿಸಿಕೊಳ್ಳುತ್ತಿದ್ದಾರೆ. ಜತೆಗೆ ಬೆಳೆ ನಾಶಗೊಳಿಸಿ, ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮಧ್ಯ ಪ್ರವೇಶ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
> ಕೆ.ವೈ.ಗಣೇಶ್​ಗೌಡ, ಕೋಟಿಗಾನಹಳ್ಳಿ

ತೆರಿಗೆ ಪಾವತಿಗೆ ನಗರಸಭೆಯಲ್ಲಿ ಅವ್ಯವಸ್ಥೆ

Share This Article

ಯಾವುದೇ ಕೆಲಸಕ್ಕೆ ಹೊರಗೆ ಹೋಗುವಾಗ ಸೀನುವುದು ಒಳ್ಳೆಯದಲ್ಲ! ಇದು ಯಾವುದರ ಸೂಚನೆ ಎಂದು ನಿಮಗೆ ತಿಳಿದಿದೆಯೇ? Sneezing

Sneezing  : ನಾವು ಯಾವುದೇ ಪ್ರಮುಖ ಕೆಲಸದ ಮೇಲೆ ಹೊರಗೆ ಹೋದಾಗ, ಕೆಲವು ಅನಿರೀಕ್ಷಿತ ಘಟನೆಗಳು…

ನೀವು ಪ್ರತಿದಿನ ಬಿಸಿನೀರಿನಿಂದ ಸ್ನಾನ ಮಾಡುತ್ತೀರಾ? ಇದನ್ನು ತಿಳಿದುಕೊಳ್ಳಲೇಬೇಕು.. Bathing

Bathing : ಪ್ರತಿನಿತ್ಯ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ನಾವು ವಾತಾವರಣಕ್ಕೆ ಹೊಂದಿಕೆಯಾಗಿ ಬಿಸಿ, ತಣ್ಣಿರನ್ನು…