

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದಂತೆ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24-25ರಂದು ಪೂರ್ಣಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು 19 ಆಟಗಾರರನ್ನು ಖರೀದಿ ಮಾಡಿದೆ. 2025ರಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಹೊಸ ಅಧ್ಯಾಯ ಬರೆಯುವ ಮುನ್ಸೂಚನೆಯನ್ನು ನೀಡಿರುವ ಆರ್ಸಿಬಿ ಫ್ರಾಂಚೈಸಿಯು ಅಬಿಮಾನಿಗಳ ಬಹುವರ್ಷಗಳ ಕನಸ್ಸನ್ನು ಸಾಕಾರಗೊಳಿಸುವ ಮುನ್ಸೂಚನೆಯನ್ನು ನೀಡಿದೆ.
ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ (Faf Du Plessis) ಈ ಬಾರಿ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದು, ಈಗ ಆರ್ಸಿಬಿಯನ್ನು (RCB) ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ. ನಾಯಕತ್ವದ ವಿಚಾರಕ್ಕೆ ಬರುವುದಾದರೆ ವಿರಾಟ್ ಕೊಹ್ಲಿ (Virat Kohli) ಅವರ ಹೆಸರು ಮುಂಚೂಣಿಯಲ್ಲಿದ್ದು, ವಿರಾಟ್ರನ್ನೇ ನಾಯಕನನ್ನಾಗಿ ನೇಮಿಸುವಂತೆ ಅಭಿಮಾನಿಗಳು ಫ್ರಾಂಚೈಸಿಗೆ ಬೇಡಿಕೆಯನ್ನು ಇರಿಸಿದ್ದಾರೆ.
ಒಂದು ವೇಳೆ ವಿರಾಟ್ ಕೊಹ್ಲಿ (Virat Kohli) ನಾಯಕತ್ವ ವಹಿಸಿಕೊಳ್ಳಲು ಹಿಂದೇಟು ಹಾಕಿದರೆ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಲು ಶುರು ಮಾಡಿದ್ದು, ಅದಕ್ಕೆ ಪರ್ಯಾಯವಾಗಿ ಹೆಸರೊಂದು ಕೇಳಿ ಬಂದಿದೆ. ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಹೆಸರುವಾಸಿಯಾಗಿರುವ ರಜತ್ ಪಾಟಿದಾರ್ (Rajat Patidar) ಅವರನ್ನು ಆರ್ಸಿಬಿ ನಾಯಕನನ್ನಾಗಿ ನೇಮಿಸುತ್ತದೆ ಎಂದು ವರದಿಯಾಗಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಆರ್ಸಿಬಿ ತಂಡದಲ್ಲಿ ಪ್ರಸ್ತುತ 22 ಆಟಗಾರರಿದ್ದು, ನಾಯಕತ್ವದ ಅನುಭವ ಹೊಂದಿರುವವರು ವಿರಾಟ್ ಕೊಹ್ಲಿ (Virat Kohli) ಮಾತ್ರ. ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿ ಕ್ಯಾಪ್ಟನ್ಸಿ ಸ್ಥಾನಕ್ಕೆ ವಿರಾಟ್ಗೆ ಮಣೆ ಹಾಕುವುಸು ಪಕ್ಕಾ ಆಗಿದೆ. ವಿರಾಟ್ಗೆ (Virat Kohli) ನಾಯಕನ ಪಟ್ಟ ನೀಡಲು ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿ (RCB) ನಾಯಕನ ಸ್ಥಾನ ತುಂಬಬಲ್ಲ ಯಾವುದೇ ಆಟಗಾರನನ್ನು ಟಾರ್ಗೆಟ್ ಮಾಡದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಈಗಾಗಲೇ ಫ್ರಾಂಚೈಸಿ ಕೂಡ ವಿರಾಟ್ರನನ್ನು (Virat Kohli) ನಾಯಕನನ್ನಾಗಿ ಘೋಷಿಸುವುದು ಪಕ್ಕಾ ಆಗಿದ್ದು, ಈ ವಿಚಾರ ಅಧಿಕೃತವಾಗಬೇಕಿದೆ. 2025ರಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವುದು ಖಚಿತವಾಗಿದ್ದು, ಈ ಬಾರಿ ವಿರಾಟ್ ಕೊಹ್ಲಿ (Virat Kohli) ಸಾರಥ್ಯದಲ್ಲಿ ಆರ್ಸಿಬಿ ಪಡೆ ಕಣಕ್ಕಿಳಿಯಲಿದೆ. ಈ ಮೂಲಕ 17 ವರ್ಷಗಳ ಕಪ್ ಗೆಲ್ಲಬೇಕೆಂಬ ಕನಸನ್ನು ನನಸು ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.