ಕರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ಸ್ಥಗಿತಕ್ಕೆ ಡಬ್ಲುೃಎಚ್‌ಒ ಆದೇಶ

hydroxychloroquine 8 ARP 20
Published on

ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಈವರೆಗೆ ಬಳಸಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಬ್ರೇಕ್ ಹಾಕಿದೆ.

ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳಲ್ಲಿ ಎಚ್‌ಸಿಕ್ಯೂ ಸೇರಿದಂತೆ ನಾಲ್ಕು ಮಾತ್ರೆಗಳನ್ನು ಕರೊನಾ ನಿಯಂತ್ರಣಕ್ಕೆ ಸರ್ವ ಸಹಮತದಿಂದ ಬಳಸಲಾಗುತ್ತಿದೆ. ಈ ಪೈಕಿ ಎಚ್‌ಸಿಕ್ಯೂ ಬಳಕೆಗೆ ಮಾತ್ರ ಈಗ ಡಬ್ಲೂಎಚ್‌ಒ ನಿಯಂತ್ರಣ ಹೇರಿದೆ.

ದಿ ಲ್ಯಾನ್ಸೆಟ್ ಮ್ಯಾಗಜಿನ್ ಕಳೆದ ಶುಕ್ರವಾರ ಅಧ್ಯಯನ ವರದಿಯೊಂದನ್ನು ಪ್ರಕಟಿಸಿ, ಮಲೇರಿಯಾಕ್ಕೆ ಬಳಸುವ ಎಚ್‌ಸಿಕ್ಯೂ ಮಾತ್ರೆಯನ್ನು ಕರೊನಾಕ್ಕೆ ಬಳಸಿದರೆ ಮರಣ ಪ್ರಮಾಣ ಹೆಚ್ಚುತ್ತದೆ ಎಂದು ಎಚ್ಚರಿಸಿತ್ತು.

ಈ ನಿರ್ಧಾರದ ತಾತ್ಕಾಲಿಕವಾಗಿದ್ದು, ಎಚ್‌ಸಿಕ್ಯೂ ಪರಿಣಾಮಗಳ ಕುರಿತು ದಾಖಲಾಗಿರುವ ಈವರೆಗಿನ ಡೇಟಾ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net