ಆ ಒಂದು ಕಂಡೀಷನ್​ಗೆ ಒಪ್ಪಿದ್ರೆ ಮಾಡ್ತೀನಿ! ಕೃತಿ ಶೆಟ್ಟಿ ಲಿಪ್​ಲಾಕ್​ ದೃಶ್ಯದ ರಹಸ್ಯ ಬಯಲು

Nani Krithi Shetty
Published on

ಹೈದರಾಬಾದ್​: ನ್ಯಾಚುರಲ್ ಸ್ಟಾರ್ ನಾನಿ ಸದ್ಯ ಟಾಲಿವುಡ್​ನಲ್ಲಿ ಯಶಸ್ವಿ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ. ಅದರಲ್ಲೂ ಇಂಡಸ್ಟ್ರಿಯಲ್ಲಿ ಹಿಟ್, ಫ್ಲಾಪ್ ಎನ್ನದೆ ಸತತವಾಗಿ ಸಿನಿಮಾ ಮಾಡುವ ಮೂಲಕ ಬಿಜಿ ಹೀರೋ ಎನಿಸಿಕೊಂಡಿದ್ದಾರೆ. ಸಿನಿಮಾ ಕತೆಗಳನ್ನು ಆಯ್ಕೆ ಮಾಡುವಾಗ ನಾನಿ ಯಾವಾಗಲೂ ವಿಭಿನ್ನವಾಗಿ ಯೋಚಿಸುತ್ತಾರೆ. ಹೀಗಾಗಿಯೇ ಅವರು ಅನೇಕ ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ನಾನಿ ಅಭಿನಯದ ದಸರಾ ಮತ್ತು ಹಾಯ್ ನಾನ್ನ ಚಿತ್ರಗಳು ದೊಡ್ಡ ಹಿಟ್ ಆದವು. ನಾನಿ ನಟಿಸುವ ಸಿನಿಮಾದಲ್ಲಿ ಕತೆ ಮಾತ್ರ ವಿಭಿನ್ನವಾಗಿರುವುದಿಲ್ಲ, ಅವರ ನಟನೆ ಮತ್ತು ಲುಕ್​ ಕೂಡ ಹೊಸದಾಗಿ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾನಿಗೆ ಅಪಾರ ಅಭಿಮಾನಿ ಬಳಗವಿದೆ.

ನಾನಿ ಸಿನಿಮಾ ಅಂದರೆ ಸಾಕು ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ನಾನಿ ಜತೆ ನಟಿಸಲು ಸ್ಟಾರ್​ ನಟಿಯರು ಕೂಡ ಬಯಸುತ್ತಾರೆ. ನಾನಿ ಜತೆ ನಟಿಸಿದ ನಾಯಕಿಯೊಬ್ಬರ ಬಗ್ಗೆ ಇತ್ತೀಚೆಗಷ್ಟೇ ಇಂಟರೆಸ್ಟಿಂಗ್ ಸಂಗತಿ ಬಯಲಾಗಿದೆ. ಸಿನಿಮಾದಲ್ಲಿ ಆ ಸೀನ್ ಮಾಡುವಾಗ ಆ ನಟಿ ನಿರ್ದೇಶಕರಿಗೆ ಒಂದು ಕಂಡೀಷನ್ ಹಾಕಿದ್ದರಂತೆ. ಆ ಹೀರೋಯಿನ್​ ಬೇರೆ ಯಾರೂ ಅಲ್ಲ, ಬ್ಯೂಟಿ ಕ್ವೀನ್​ ಕೃತಿ ಶೆಟ್ಟಿ.

ನಾನಿ ಅಭಿನಯದ ಶ್ಯಾಮ್ ಸಿಂಘರಾಯ್ ಚಿತ್ರದಲ್ಲಿ ಕೃತಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಅವರು ನಾನಿ ಜತೆ ಲಿಪ್​ಲಾಕ್​ ಸೀನ್​ ಮಾಡಿದ್ದಾರೆ. ಆ ದೃಶ್ಯಕ್ಕಾಗಿ ಕೃತಿ, ನಿರ್ದೇಶಕರು ಮತ್ತು ಕ್ಯಾಮರಾಮನ್‌ಗೆ ಕಂಡೀಷನ್ ಹಾಕಿದ್ದರಂತೆ. ಕಂಡೀಷನ್​ಗೆ ಒಪ್ಪಿದರೆ ಮಾತ್ರ ನಟಿಸುತ್ತೇನೆ ಎಂದಿದ್ದರಂತೆ.

ಆ ಕಂಡೀಷನ್ ಏನೆಂದರೆ ಲಿಪ್​ಲಾಕ್ ಸೀನ್ ಮಾಡುವಾಗ ತನ್ನ ಸುತ್ತ ಕೆಲವೇ ಜನ ಇದ್ದರೆ ಮಾತ್ರ ಸೀನ್ ಮಾಡುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದರಂತೆ. ನಿರ್ದೇಶಕರು ಸಹ ಕೃತಿಯ ಆರಾಮಕ್ಕಾಗಿ ಯಾರನ್ನೂ ಬಿಡಲಿಲ್ಲವಂತೆ. ಈ ವಿಷಯ ಹೇಗೆ ಹೊರಬಿದ್ದಿದೆಯೋ ಗೊತ್ತಿಲ್ಲ, ಸದ್ಯ ಎಲ್ಲೆಡೆ ಇದೀಗ ವೈರಲ್ ಆಗುತ್ತಿದೆ.

ಸದ್ಯ ಸರಿಪೋದ ಶನಿವಾರ ಎಂಬ ಸಿನಿಮಾದಲ್ಲಿ ನಾನಿ ಬಿಜಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್​ ನಾಯಕಿಯಾಗಿ ನಟಿಸಿದ್ದಾರೆ. ವಿವೇಕ್​ ಆಥ್ರೆಯ ನಿರ್ದೇಶಿಸಿದ್ದು, ದಾಸರಿ ಕಲ್ಯಾಣ್​ ಮತ್ತು ಡಿವಿವಿ ದನಯ್ಯ ಅವರು ಬಂಡವಾಳ ಹೂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net