ಐಪಿಎಲ್​ನಲ್ಲಿ ಅರ್ಧಶತಕ ಗಳಿಸಿದ ಮೊದಲ RCB ಬ್ಯಾಟ್ಸ್​ಮನ್​​ ಯಾರು ಗೊತ್ತೇ? ಇಲ್ಲಿದೆ ನೋಡಿ ಉತ್ತರ

ವಿಜಯವಾಣಿ - 2024-11-14T140239.894
Published on

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ 17ನೇ ಆವೃತ್ತಿಯಲ್ಲಿ ನಾಯಕ ಫಾಫ್​ ಡುಪ್ಲೆಸಿಸ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ಹಾಗೂ ಚಾಂಪಿಯನ್ಸ್ ಎಂಬ ಪಟ್ಟ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಪಡೆಯನ್ನು ಪ್ಲೇಆಫ್​ ಸುತ್ತಿನ ಪಂದ್ಯದಲ್ಲಿ ಮಣಿಸಿದ್ದೇ ರೋಚಕ. ಆ ದೃಶ್ಯ ಇಂದಿಗೂ ಆರ್​ಸಿಬಿ (RCB) ಫ್ಯಾನ್ಸ್​ಗಳ ಕಣ್ಣಿನಲ್ಲಿ ಕಟ್ಟಿದಂತಿದೆ. 2024ರಲ್ಲಿ ಟ್ರೋಫಿ ಗೆಲ್ಲಲಿಲ್ಲ ಎನ್ನುವುದಕ್ಕಿಂತ ಸಿಎಸ್​ಕೆಯನ್ನು ಹೀನಾಯವಾಗಿ ಸೋಲಿಸಿದ್ದೇ ನಮಗೆ ಖುಷಿ ಎನ್ನುತ್ತಾರೆ ಆರ್​ಸಿಬಿಯ ನಿಯತ್ತಿನ ಅಭಿಮಾನಿಗಳು​. ಅಸಲಿಗೆ ಐಪಿಎಲ್​ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಮೊದಲ ಚಾಲೆಂಜರ್ಸ್​ ಪಡೆಯ ಬ್ಯಾಟರ್​ ಯಾರು ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ.

ಒಂದು ಬಾರಿಯೂ ಕಪ್ ಗೆದ್ದಿಲ್ಲ

ಹಿಂದಿನಕ್ಕಿಂತಲೂ ಹೆಚ್ಚೆಚ್ಚು ಫ್ಯಾನ್ಸ್​ಗಳನ್ನು ಸಂಪಾದಿಸಿಕೊಳ್ಳುವಲ್ಲಿ ಆರ್​ಸಿಬಿ ಎಲ್ಲಾ ತಂಡವನ್ನು ಮೀರಿಸಿ, ಒಂದೆರೆಡು ಹೆಜ್ಜೆ ಮುಂದೆ ಹೋಗಿದೆ ಎಂದರೆ ಖಂಡಿತ ತಪ್ಪಾಗಲಾರದು. ಯಾವ ತಂಡಕ್ಕೂ ಇರದ ಲಾಯಲ್​ ಫ್ಯಾನ್ಸ್, ಹಾಗೇ ಎಷ್ಟೇ ಸೋತರೂ ಅದನ್ನು ಪ್ರೀತಿಯಿಂದಲೇ ಸ್ವೀಕರಿಸುವಂತ ಮನೋಭಾವ ಇರುವುದು ಕೇವಲ ಬೆಂಗಳೂರು ಪಡೆಯ​ ಅಭಿಮಾನಿಗಳಿಗೆ ಮಾತ್ರ. ಇದುವರೆಗೂ ಆರ್​ಸಿಬಿ ಒಂದು ಬಾರಿ ಕಪ್ ಗೆದ್ದಿಲ್ಲ ಎಂಬ ಬೇಸರವಿದ್ದರೂ ಕೂಡ ಅದನ್ನು ಚಾಲೆಂಜ್ ಆಗಿ ಪರಿಗಣಿಸುವ ಅಭಿಮಾನಿಗಳು…’ಈ ಸಲ ಕಪ್ ನಮ್ದೇ….’ ಎಂದು ಸ್ಟೇಡಿಯಂನಲ್ಲಿ ನಿಂತು ತಮ್ಮ ತಂಡವನ್ನು ಹುರಿದುಂಬಿಸುತ್ತಾರೆ.

ರಾಹುಲ್ ದ್ರಾವಿಡ್​, ಎಬಿ.ಡಿ ಇವರಾರೂ ಅಲ್ಲ

ಇಷ್ಟು ಬೆಂಬಲ, ಪ್ರೀತಿ ಕೊಡುವ ಟೀಮ್​ನ ಯಾವ ಆಟಗಾರ ಮೊದಲ ಐಪಿಎಲ್​ ಅರ್ಧ ಶತಕ ಸಿಡಿಸಿದರು ಎಂಬ ಮಾಹಿತಿ ಇಂದಿಗೂ ಅನೇಕರಿಗೆ ತಿಳಿದಿಲ್ಲ. 2008ರಲ್ಲಿ ಪ್ರಾರಂಭವಾದ ಐಪಿಎಲ್ ಆವೃತ್ತಿಯಲ್ಲಿ ಮೊದಲು ಆಫ್ ಸೆಂಚುರಿ ದಾಖಲಿಸಿದ್ದು, ವಿರಾಟ್, ರಾಹುಲ್ ದ್ರಾವಿಡ್​, ಎಬಿ.ಡಿ ಇವರಾರೂ ಅಲ್ಲ! ಬದಲಿಗೆ ಐಪಿಎಲ್ ಇತಿಹಾಸದಲ್ಲಿ ಆರ್​​ಸಿಬಿ ಪರವಾಗಿ ಮೊದಲ ಅರ್ಧಶತಕ ಗಳಿಸಿದ್ದು, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಮತ್ತು ಟೆಸ್ಟ್ ಸ್ಪೆಷಲಿಸ್ಟ್ ವಾಸಿಂ ಜಾಫರ್!

ವಿಶಿಷ್ಟ ದಾಖಲೆ

31 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಜಾಫರ್, 2008ರ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಈ ವಿಶಿಷ್ಟ ದಾಖಲೆಯನ್ನು ಹೊಂದಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net