More

    ಕೊನೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ KKRಗೆ ಜಯ ತಂದುಕೊಟ್ಟ ರಿಂಕು ಸಿಂಗ್​ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ….​

    ನವದೆಹಲಿ: ನಿನ್ನೆ (ಏ.9) ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಕೋಲ್ಕತ್ತ ನೈಟ್​ ರೈಡರ್ಸ್​ (ಕೆಕೆಆರ್​) ರೋಚಕ ಗೆಲುವು ದಾಖಲಿಸಿತು. ಯಶ್​ ದಯಾಳ್​ ಎಸೆದ ಕೊನೆಯ ಓವರ್​ನಲ್ಲಿ ಸತತ ಐದು ಸಿಕ್ಸರ್​ ಬಾರಿಸುವ ಮೂಲಕ ಕೆಕೆಆರ್​ ಗೆಲುವಿನಲ್ಲಿ ರಿಂಕು ಸಿಂಗ್​ ಪ್ರಮುಖ ಪಾತ್ರ ವಹಿಸಿದರು.

    ರಶೀದ್​ ಖಾನ್​ ಹ್ಯಾಟ್ರಿಕ್​ ವಿಕೆಟ್​
    ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಟೈಟಾನ್ಸ್​ ತಂಡ ನಿಗದಿತ 20 ಓವರ್​ಗಲ್ಲಿ 4 ವಿಕೆಟ್​ ನಷ್ಟಕ್ಕೆ 204 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. 205 ರನ್​ಗಳ ಗುರಿ ಬೆನ್ನತ್ತಿದ ಕೆಕೆಆರ್​, 155 ರನ್​​ಗೆ ಪ್ರಮುಖ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 17ನೇ ಓವರ್​ನಲ್ಲಿ ರಶೀದ್​ ಖಾನ್​ ಹ್ಯಾಟ್ರಿಕ್​​ ವಿಕೆಟ್​ ಪಡೆಯುವ ಮೂಲಕ ಕೆಕೆಆರ್​ ತಂಡವನ್ನು ಸೋಲಿನ ದವಡೆಗೆ ನೂಕಿದ್ದರು.

    ಇದನ್ನೂ ಓದಿ: ಪಾನ್ ಮಸಾಲಾ, ತಂಬಾಕಿಗೆ ಜಿಎಸ್​ಟಿ ಸೆಸ್ ನಿಗದಿ; ಏ.1ರಿಂದಲೇ ಜಾರಿ | ತೆರಿಗೆ ಕಳ್ಳತನಕ್ಕೆ ಕಡಿವಾಣ

    ಅಬ್ಬರಿಸಿದ ರಿಂಕು
    ಕೆಕೆಆರ್​ ಗೆಲುವಿಗೆ ಕೊನೆಯ ಓವರ್​ನಲ್ಲಿ 29 ರನ್​ ಬೇಕಾಗಿತ್ತು. ಈ ಸಮಯದಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ ರಿಂಕು ಸಿಂಗ್​ ಬ್ಯಾಕ್​ ಟು ಬ್ಯಾಕ್​ 5 ಸಿಕ್ಸರ್​ ಸಿಡಿಸಿ ಕೆಕೆಆರ್​ ತಂಡಕ್ಕೆ ಜಯ ತಂದುಕೊಟ್ಟರು. ಕೇವಲ 21 ಎಸೆತದಲ್ಲಿ 48 ರನ್​ ಗಳಿಸಿ ರಿಂಕು ಅಜೇಯರಾಗಿ ಉಳಿದರು.

    ರಿಂಕು​ ಅವರ ಅಬ್ಬರದ ಬ್ಯಾಟಿಂಗ್​ ನೋಡಿದ ಮಂದಿ ಯಾರಪ್ಪ ಇದು ಎಲೆಮರೆ ಕಾಯಿ ಪ್ರತಿಭೆ ಎನ್ನುತ್ತಿದ್ದಾರೆ. ಅವರ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡುತ್ತಿದ್ದು, ರಿಂಕ್​ ಈಗ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಅಂದಹಾಗೆ ಈ ರಿಂಕು ಸಿಂಗ್​ ಯಾರು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

    ಯಾರು ಈ ರಿಂಕು ಸಿಂಗ್​?
    ರಿಂಕು ಅವರು ಉತ್ತರ ಪ್ರದೇಶದ ಆಲಿಗಢದಲ್ಲಿ ಜನಿಸಿದರು. ಈ ಬಾರಿಯ ಐಪಿಎಲ್​ಗೆ ಅವರನ್ನು 55 ಲಕ್ಷ ರೂ.ಗೆ ಕೆಕೆಆರ್​ ತಮ್ಮಲ್ಲೇ ಉಳಿಸಿಕೊಂಡಿತು. 2018ರಲ್ಲಿ 80 ಲಕ್ಷ ರೂ.ಗೆ ರಿಂಕು ಅವರನ್ನು ಕೆಕೆಆರ್​ ಪ್ರಪ್ರಥಮವಾಗಿ ಹರಾಜಿನಲ್ಲಿ ಖರೀದಿ ಮಾಡಿತು. ಆದರೆ, ತನ್ನ ಚೊಚ್ಚಲ ಸೀಸನ್​ನಲ್ಲಿ ರಿಂಕು ಅವರು ಉತ್ತಮ ಪ್ರದರ್ಶನವನ್ನು ತೋರದಿದ್ದರೂ ಅವರ ಸಾಮರ್ಥ್ಯವನ್ನು ಪರಿಗಣಿಸಲಾಯಿತು ಮತ್ತು ಅವರನ್ನು 2019ನೇ ಸಾಲಿನ ಐಪಿಎಲ್​ ಟೂರ್ನಿಗೂ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ರಿಂಕು ಅವರು ತಮ್ಮ ಬ್ಯಾಟಿಂಗ್‌ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಕೆಆರ್​ ಅಕಾಡೆಮಿಯಲ್ಲಿ ಕೆಕೆಆರ್​ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸಲಹೆ ಪಡೆದುಕೊಂಡಿದ್ದಾರೆ. ಅದರ ಫಲಿತಾಂಶಗಳು ಉತ್ತರ ಪ್ರದೇಶಕ್ಕಾಗಿ ಅವರ 2018-19 ರಣಜಿ ಟ್ರೋಫಿ ಆಡಿದಾಗ ಗೋಚರಿಸಿದವು. ರಣಜಿಯಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡಿದರು. ನಾಲ್ಕು ಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ (10 ಇನ್ನಿಂಗ್ಸ್‌ಗಳಲ್ಲಿ 953 ರನ್) ಆಟಗಾರ ಎನಿಸಿಕೊಂಡರು.

    ಇದನ್ನೂ ಓದಿ: ವಿಳಂಬ ಯೋಜನೆಯಲ್ಲಿ ರಸ್ತೆಯೇ ಮೊದಲು; ಎರಡನೇ ಸ್ಥಾನದಲ್ಲಿ ರೈಲ್ವೆ

    2017ರಲ್ಲಿ ರಿಂಕು ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ (ಈಗ ಪಂಜಾಬ್ ಕಿಂಗ್ಸ್) ಭಾಗವಾಗಿದ್ದರು. ಅನುಮತಿ ಪಡೆಯದೆ ಅಬುಧಾಬಿಯಲ್ಲಿ ರಂಜಾನ್ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಿಸಿಸಿಐ ಮೂರು ತಿಂಗಳು ರಿಂಕು ಅವರನ್ನು ಅಮಾನತುಗೊಳಿಸಿತ್ತು.

    ಇಲ್ಲಿಯವರೆಗೆ ರಿಂಕು ಅವರು 40 ಪ್ರಥಮ ದರ್ಜೆ, 50 ಲಿಸ್ಟ್-ಎ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಂಟು ಶತಕಗಳು ಮತ್ತು 41 ಅರ್ಧಶತಕಗಳೊಂದಿಗೆ 6,016 ರನ್ ಗಳಿಸಿದ್ದಾರೆ. (ಏಜೆನ್ಸೀಸ್​)

    IPL 2023; ವೆಂಕಟೇಶ್​ ಅಯ್ಯರ್​-ರಿಂಕು ಸಿಂಗ್​ ಸ್ಪೋಟಕ ಬ್ಯಾಟಿಂಗ್​; KKRಗೆ 3 ವಿಕೆಟ್​ ಜಯ

    VIDEO| ದಯವಿಟ್ಟು CSK ಕ್ಯಾಪ್ಟನ್​ ಆಗಿ ಮುಂದುವರೆಯಿರಿ; ಧೋನಿಗೆ ವಿಶೇಷ ಮನವಿ ಮಾಡಿದ ಪೈಲಟ್​

    ನೀವು IPLನಲ್ಲಿ ಆಡಬೇಡಿ; ಡೇವಿಡ್​ ವಾರ್ನರ್​ಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts