More

    ವಿಳಂಬ ಯೋಜನೆಯಲ್ಲಿ ರಸ್ತೆಯೇ ಮೊದಲು; ಎರಡನೇ ಸ್ಥಾನದಲ್ಲಿ ರೈಲ್ವೆ

    ಭೂ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಗರಿಷ್ಠ, ಅಂದರೆ 407 ಯೋಜನೆಗಳು ಅನುಷ್ಠಾನ ವಿಳಂಬವಾಗುತ್ತಿವೆ. ಭಾರತೀಯ ರೈಲ್ವೆ ಎರಡನೇ ಸ್ಥಾನದಲ್ಲಿದ್ದು ಅದರ 173ರ ಪೈಕಿ 114 ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಮೂಲಸೌಕರ್ಯ ಯೋಜನೆಗಳ ಕುರಿತ 2023ರ ವರದಿಯಲ್ಲಿ ಕೇಂದ್ರ ಸರ್ಕಾರವೇ ಈ ಮಾಹಿತಿಗಳನ್ನು ದಾಖಲಿಸಿದೆ.

    • ಭೂ ಸಾರಿಗೆ ಮತ್ತು ಹೆದ್ದಾರಿಗಳ ಒಟ್ಟು 717 ಯೋಜನೆಗಳಲ್ಲಿ 407 ಯೋಜನೆಗಳು ನನೆಗುದಿಗೆ.
    • ಈ ಯೋಜನೆಗಳ ಮೂಲ ವೆಚ್ಚ 3,97,255.47 ಕೋಟಿ ರೂಪಾಯಿ ಆಗಿದ್ದು, ಈಗ ಅದು 4,14,400.44 ಕೊಟಿ ರೂಪಾಯಿಗೆ ಏರಿದೆ. ವೆಚ್ಚ ಏರಿಕೆ ಪ್ರಮಾಣ ಶೇಕಡ 4.3.
    • ರೈಲ್ವೆ ಯೋಜನೆಗಳ ಪೈಕಿ ಮುನಿರಾಬಾದ್-ಮೆಹಬೂಬನಗರ್ ರೈಲು ಯೋಜನೆ ಅತಿ ಹೆಚ್ಚು ಕಾಲದಿಂದ ವಿಳಂಬಗೊಂಡಿರುವ ಯೋಜನೆಯಾಗಿದೆ. 276 ತಿಂಗಳಾದರೂ ಆ ಮಾರ್ಗ ಪೂರ್ಣಗೊಂಡಿಲ್ಲ.
    • ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ ಯೋಜನೆ 247 ತಿಂಗಳು ವಿಳಂಬಗೊಂಡಿದೆ.
    • ಬೇಲಾಪುರ-ಸೀವುಡ್-ಅರ್ಬನ್ ಎಲೆಕ್ಟ್ರಿಫೈಡ್ ದ್ವಿಪಥ ಯೋಜನೆಯ ವಿಳಂಬ ಅವಧಿ 228 ತಿಂಗಳು.
    • 173 ರೈಲು ಯೋಜನೆಗಳ ಅನುಷ್ಠಾನದ ಮೂಲ ಅಂದಾಜು ವೆಚ್ಚ 3,72,761.45 ಕೋಟಿ ರೂಪಾಯಿ. ವಿಳಂಬದಿಂದಾಗಿ ಅದು 6,26,632.52 ಕೋಟಿ ರೂ.ಗೆ ಏರಿದೆ. ಅಂದರೆ ಏರಿಕೆಯ ಪ್ರಮಾಣ ಶೇ. 68.1.
    • ಮೂಲಸೌಕರ್ಯ ಮತ್ತು ಯೋಜನೆ ನಿಗಾ ವಿಭಾಗವು 150 ಕೋಟಿ ರೂಪಾಯಿಗಿಂತ ಅಧಿಕ ಮೊತ್ತದ ಯೋಜನೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts