ಮಕ್ಕಳ ಸಾವಿಗೆ ಹೊಣೆ ಯಾರು?

klr murdeshwara
ಮುರುಡೇಶ್ವರ ಘಟನಾ ಸ್ಥಳಕ್ಕೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌ ಬುಧವಾರ ಭೇಟಿ ನೀಡಿದ್ದರು.
Published on

ಕೋಲಾರ: ಮುರುಡೇಶ್ವರ ಪ್ರಮುಖ ಪ್ರವಾಸಿ ಸ್ಥಳವಾಗಿದ್ದು, ಪದೇಪದೆ ದುರಂತಗಳು ಸಂಭವಿಸುತ್ತಿದ್ದರೂ ಪ್ರವಾಸೋದ್ಯಮ ಇಲಾಖೆಯಾಗಲಿ, ಸರ್ಕಾರವಾಗಲಿ ಎಚ್ಚರವಹಿಸದೆ ಇರುವುದು ಬೇಸರದ ಸಂಗತಿ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕಿಡಿಕಾರಿದರು.

ವಿದ್ಯಾರ್ಥಿಗಳು ಮೃತಪಟ್ಟಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಮಕ್ಕಳು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಹೃದಯಘಾತಕ್ಕಿಂತ ಹೆಚ್ಚು ನೋವಾಯಿತು. ಒಂದು ಪ್ರವಾಸಿ ಸ್ಥಳದಲ್ಲಿ ಘಟನೆಗಳು ಸಂಭವಿಸಿದಾಗ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದರು.

ಬೆಳಗಾವಿಯಲ್ಲಿ ಸದನ ಮುಗಿಸಿಕೊಂಡು ಬೆಂಗಳೂರಿಗೆ ಆಗಮಿಸುತ್ತಿದ್ದೇ, ಆ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಮಧ್ಯೆ 3-4 ಕರೆ ಬಂದಿತ್ತು, ಏನಿರಬಹುದು ಎಂದು ಕರೆ ಮಾಡಿದಾಗ ವಿಚಾರ ಗೊತ್ತಾಯಿತು. ಆ ಕೂಡಲೇ ದಕ್ಷಿಣ ಕನ್ನಡ ಜಿಲ್ಲಾ ಸಚಿವ ಮಾಕಳಂ, ಜಿಲ್ಲಾಡಳಿತ, ಪೊಲೀಸರದೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಡುವಂತೆ ತಿಳಿಸಿದಾಗ ಸಹಕರಿಸಿದರು ಎಂದರು.

ನಾಲ್ವರ ಮೃತದೇಹವನ್ನು ಕರೆತರುವ ವ್ಯವಸ್ಥೆ ಮಾಡಲಾಗಿದೆ. ಪಾಲಕರು ಶಿಕ್ಷಕರನ್ನು ನಂಬಿ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿದ್ದಾರೆ. ಈಗ ಸಂಭವಿಸಿರುವ ದುರಂತಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದರು.

ಸರ್ಕಾರ ಈ ವಿಚಾರವಾಗಿ ಗಂಭೀರವಾಗಿ ಪರಿಗಣಿಸಬೇಕು, ನಮ್ಮ ಮನೆಗೆ ಬಂದಿರುವ ಸಾವು, ನಾಳೆ ನಿಮ್ಮ ಮನೆಗೂ ಬಂದೇ ಬರುತ್ತದೆ. ಅದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net