ಅಮೀರ್​ ಜತೆ ಡೇಟಿಂಗ್​ನಲ್ಲಿರುವ ಬೆಂಗಳೂರಿನ ಗೌರಿ ಸ್ಪ್ರಾಟ್ ಯಾರು?; ಇದೀಗ ಏನು ಮಾಡ್ತಿದ್ದಾರೆ ಗೊತ್ತೆ! | Gauri Spratt

blank

ಬೆಂಗಳೂರು ಮೂಲದ ಮಹಿಳೆ ಗೌರಿ ಸ್ಪ್ರಾಟ್(Gauri Spratt) ಜತೆ ಕಳೆದ 18 ತಿಂಗಳಿಂದ ಡೇಟಿಂಗ್​ನಲ್ಲಿರುವುದಾಗಿ ಬಾಲಿವುಡ್​ ಮಿ.ಪರ್ಫೆಕ್ಟ್​ ಅಮೀರ್​ಖಾನ್​ ಮುಂಬೈನಲ್ಲಿ ಗುರುವಾರ(ಮಾ.13) ರಂದು ಖಚಿತಪಡಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅವರು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಮೂರನೇ ಮದುವೆಯಾಗಲು ಅಮೀರ್​ ರೆಡಿಯಾಗಿದ್ದಾರೆ ಎಂದು ಇದೀಗ ವರದಿಯಾಗಿದೆ.

ಅಮೀರ್​ ಜತೆ ಡೇಟಿಂಗ್​ನಲ್ಲಿರುವ ಬೆಂಗಳೂರಿನ ಗೌರಿ ಸ್ಪ್ರಾಟ್ ಯಾರು?; ಇದೀಗ ಏನು ಮಾಡ್ತಿದ್ದಾರೆ ಗೊತ್ತೆ! | Gauri Spratt

ಯಾರು ಈ ಗೌರಿ ಸ್ಪ್ರಾಟ್..?

ಗೌರಿ ಬೆಂಗಳೂರಿನವರು. ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಪುತ್ರಿಯೇ ಈ ಗೌರಿ. ತಮ್ಮ ಜೀವನದುದ್ದಕ್ಕೂ ನಗರದಲ್ಲಿ ವಾಸಿಸುತ್ತಿರುವ ಗೌರಿ ಆಕೆಯ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಪ್ರಸ್ತುತ ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ಅನ್ನು ನಡೆಸುತ್ತಿದ್ದಾರೆ. ಗೌರಿಗೆ ಆರು ವರ್ಷದ ಮಗುವಿದ್ದು, 25 ವರ್ಷಗಳಿಂದ ಅಮೀರ್ ಪರಿಚಯವಿದೆ. ಆದರೆ ಅಮೀರ್​ಗೆ ಪರಿಚಯವಿದ್ದರೂ ಕಳೆದ ಎರಡು ವರ್ಷಗಳಿಂದ ತುಂಬಾ ಅತ್ಮೀಯತೆ ಬೆಳಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಸಿದೆ.

ಅಮೀರ್​ ಜತೆ ಡೇಟಿಂಗ್​ನಲ್ಲಿರುವ ಬೆಂಗಳೂರಿನ ಗೌರಿ ಸ್ಪ್ರಾಟ್ ಯಾರು?; ಇದೀಗ ಏನು ಮಾಡ್ತಿದ್ದಾರೆ ಗೊತ್ತೆ! | Gauri Spratt

ಗೌರಿ ಬಗ್ಗೆ ಅಮೀರ್​ ಹೇಳಿದ್ದೇನು..?

ಕಳೆದ ಒಂದು ವರ್ಷದಿಂದ ಅವರೊಂದಿಗೆ(ಗೌರಿ) ಡೇಟಿಂಗ್ ಮಾಡುತ್ತಿದ್ದೇನೆ. ಆದರೆ, 25 ವರ್ಷಗಳಿಗೂ ಹೆಚ್ಚು ಕಾಲ ಅವಳನ್ನು ತಿಳಿದಿದ್ದೇನೆ.ಆರು ವರ್ಷದ ಮಗನ ತಾಯಿಯಾಗಿರುವ ಗೌರಿನೊಂದಿಗೆ ತಾನು ಒಟ್ಟಿಗೆ ವಾಸಿಸುತ್ತಿದ್ದೇನೆ. ಅವರು ತಮ್ಮ ಕುಟುಂಬ ಸದಸ್ಯರನ್ನು ಸಹ ಭೇಟಿಯಾಗಿದ್ದಾರೆ ಮತ್ತು ಅವರ ಸಂಬಂಧದ ಬಗ್ಗೆ ಅವರು ಸಂತೋಷವಾಗಿದ್ದಾರೆ ಎಂದು ಅಮೀರ್​ ಹೇಳಿದ್ದಾರೆ.

ಅಮೀರ್​ ಜತೆ ಡೇಟಿಂಗ್​ನಲ್ಲಿರುವ ಬೆಂಗಳೂರಿನ ಗೌರಿ ಸ್ಪ್ರಾಟ್ ಯಾರು?; ಇದೀಗ ಏನು ಮಾಡ್ತಿದ್ದಾರೆ ಗೊತ್ತೆ! | Gauri Spratt

ಅಮೀರ್ ಖಾನ್ ಅವರ ಪತ್ನಿಯರ ಬಗ್ಗೆ ವಿಚಾರಕ್ಕೆ ಬರುವುದಾದರೆ, ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ರೀನಾ ಮತ್ತು ಆಮಿರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ 2002 ರಲ್ಲಿ ಬೇರ್ಪಟ್ಟರು. ಅದಾದ ನಂತರ ಆಮಿರ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಹಲವು ವರ್ಷಗಳ ದಾಂಪತ್ಯದ ನಂತರ ಕಿರಣ್ ಮತ್ತು ಆಮಿರ್ 2021 ರಲ್ಲಿ ಬೇರ್ಪಟ್ಟರು. ಆಮಿರ್ ಮತ್ತು ಕಿರಣ್ ದಂಪತಿಗೆ ಒಬ್ಬ ಮಗನೂ ಇದ್ದಾನೆ.(ಏಜೆನ್ಸಿಸ್)

6 ವರ್ಷದ ಮಗುವಿರುವ ತಾಯಿ ಜತೆ ಡೇಟಿಂಗ್​ ಫಿಕ್ಸ್! ಅಮೀರ್​ ಖಾನ್​ ಅಚ್ಚರಿ ಹೇಳಿಕೆ | Dating

ಹಣ ಕೊಟ್ಟು ಸಿನಿಮಾ ವಿಮರ್ಶೆ ಬರೆಸೋದು ಹೆಚ್ಚಾಗಿದೆ; ಬಾಲಿವುಡ್​ ಸಿನಿಮಾಗಳ ಪೇಡ್​ ರಿವ್ಯೂವ್ಸ್​ ಕರಾಳತೆ ಬಿಚ್ಚಿಟ್ಟ ವಿಮರ್ಶಕ! Paid Reviews

 

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…