6 ವರ್ಷದ ಮಗುವಿರುವ ತಾಯಿ ಜತೆ ಡೇಟಿಂಗ್​ ಫಿಕ್ಸ್! ಅಮೀರ್​ ಖಾನ್​ ಅಚ್ಚರಿ ಹೇಳಿಕೆ | Dating

dk - 2025-03-13T191935.093
Published on

Dating:ತಮ್ಮ ಸ್ನೇಹಿತೆ ಗೌರಿ ಜತೆ ಡೇಟಿಂಗ್ ಮಾಡುವುದನ್ನು ಬಾಲಿವುಡ್​ ನಟ ಅಮೀರ್ ಖಾನ್ ಗುರುವಾರ ಖಚಿತಪಡಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಅವರೊಂದಿಗೆ(ಗೌರಿ) ಡೇಟಿಂಗ್ ಮಾಡುತ್ತಿದ್ದೇನೆ.ಆದರೆ, 25 ವರ್ಷಗಳಿಗೂ ಹೆಚ್ಚು ಕಾಲ ಅವಳನ್ನು ತಿಳಿದಿದ್ದೇನೆ ಎಂದು ಅಮೀರ್​ ಹೇಳಿದರು. ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಪ್ರಸ್ತುತ ಅವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಆರು ವರ್ಷದ ಮಗನ ತಾಯಿಯಾಗಿರುವ ಗೌರಿನೊಂದಿಗೆ ತಾನು ಒಟ್ಟಿಗೆ ವಾಸಿಸುತ್ತಿದ್ದೇನೆ. ಶುಕ್ರವಾರ 60ನೇ ವರ್ಷಕ್ಕೆ ಕಾಲಿಡುತ್ತಿರುವ ನಟ, ಅವರು ತಮ್ಮ ಕುಟುಂಬ ಸದಸ್ಯರನ್ನು ಸಹ ಭೇಟಿಯಾಗಿದ್ದಾರೆ ಮತ್ತು ಅವರ ಸಂಬಂಧದ ಬಗ್ಗೆ ಅವರು ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.

ಅಮೀರ್ ಖಾನ್ ಅವರ ಪತ್ನಿಯರ ಬಗ್ಗೆ ವಿಚಾರಕ್ಕೆ ಬರುವುದಾದರೆ, ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ರೀನಾ ಮತ್ತು ಆಮಿರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ 2002 ರಲ್ಲಿ ಬೇರ್ಪಟ್ಟರು. ಅದಾದ ನಂತರ ಆಮಿರ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಹಲವು ವರ್ಷಗಳ ದಾಂಪತ್ಯದ ನಂತರ ಕಿರಣ್ ಮತ್ತು ಆಮಿರ್ 2021 ರಲ್ಲಿ ಬೇರ್ಪಟ್ಟರು. ಆಮಿರ್ ಮತ್ತು ಕಿರಣ್ ದಂಪತಿಗೆ ಒಬ್ಬ ಮಗನೂ ಇದ್ದಾನೆ.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net