

Champions Trophy: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥೇಯವನ್ನು ಪಾಕಿಸ್ತಾನ ಹೊತ್ತುಕೊಂಡಿದೆ. ಫೆ.19ರಂದು ಶುರುವಾದ ಮೊದಲ ಪಂದ್ಯವನ್ನು ಆಡಿದ ಪಾಕ್, ನ್ಯೂಜಿಲೆಂಡ್ ಎದುರು 60 ರನ್ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಚಾಂಪಿಯನ್ಸ್ ಟ್ರೋಫಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪಂದ್ಯಕ್ಕೆ ಸಾಕ್ಷಿಯಾಗಿದೆ. ಇದೇ ಪಂದ್ಯದಲ್ಲಿ ಎರಡು ಐತಿಹಾಸಿಕ ದಾಖಲೆಗಳು ಕ್ರಿಕೆಟ್ ಇತಿಹಾಸ ಪುಟ ಸೇರಿವೆ.
ಇಂದು ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸೀಸ್, ಆಂಗ್ಲರಿಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. ಜಾಸ್ ಬಟ್ಲರ್ ನೇತೃತ್ವದಲ್ಲಿ ಅಖಾಡಕ್ಕಿಳಿದ ಇಂಗ್ಲೆಂಡ್ ಪಡೆ, 50 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 351 ರನ್ಗಳ ಬೃಹತ್ ಗುರಿಯನ್ನು ಆಸ್ಟ್ರೇಲಿಯಾಗೆ ನೀಡಿತು. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ಪಟ್ಟಿಗೆ ಇಂಗ್ಲೆಂಡ್ಗೆ ಸೇರ್ಪಡೆಗೊಂಡಿದೆ. ಇದರೊಂದಿಗೆ 165 ರನ್ ಸಿಡಿಸಿದ ಬೆನ್ ಡಕೆಟ್, ಕೆವಿನ್ ಪೀಟರ್ಸನ್ ದಾಖಲೆಯನ್ನು ಮುರಿದು, ತಮ್ಮದೇ ದಾಖಲೆಯನ್ನು ನಿರ್ಮಿಸಿದರು.
ಇಂಗ್ಲೆಂಡ್ ದಾಖಲಿಸಿದ ಸ್ಕೋರ್ ಅಂತಾರಾಷ್ಟ್ರೀಯ ಏಕದಿನ ಫಾರ್ಮೆಟ್ನಡಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿದೆ. ಅಸಲಿಗೆ ಯಾವೆಲ್ಲ ತಂಡಗಳು 300ರ ಗಡಿ ದಾಟಿದೆ? ಯಾವ ತಂಡದ್ದು ಅತೀ ಹೆಚ್ಚು? ಇದರಲ್ಲಿ ಭಾರತ ಎಷ್ಟನೇ ಸ್ಥಾನ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
1. ಇಂಗ್ಲೆಂಡ್- 351/8: ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ದಾಖಲಿಸಿದ ಒಟ್ಟು ಸ್ಕೋರ್ ಇದಾಗಿದೆ.
2. ನ್ಯೂಜಿಲೆಂಡ್: 2004ರಲ್ಲಿ ಓವಲ್ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ಕಿವಿ ಪಡೆ 347/7 ರನ್ ದಾಖಲಿಸಿತ್ತು. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.
3. ಪಾಕಿಸ್ತಾನ: ಇನ್ನು ಮೂರನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. 2017ರಲ್ಲಿ ಓವಲ್ನಲ್ಲಿ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್ 338/4 ಸ್ಕೋರ್ ದಾಖಲು ಮಾಡಿ, ಮೂರನೇ ಸ್ಥಾನದಲ್ಲಿದೆ.
4. ಭಾರತ: 2013ರಲ್ಲಿ ಕಾರ್ಡಿಫ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 331/7 ರನ್ ಸಿಡಿಸಿತ್ತು. ಈ ಪಟ್ಟಿಯಲ್ಲಿ ಮೆನ್ ಇನ್ ಬ್ಲ್ಯೂ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.
5. ಇಂಗ್ಲೆಂಡ್: 2009ರಲ್ಲಿ ಸೆಂಚ್ಯೂರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 323/8 ರನ್ ಬಾರಿಸಿದ ಇಂಗ್ಲೆಂಡ್ ಐದನೇ ಸ್ಥಾನದಲ್ಲಿದೆ,(ಏಜೆನ್ಸೀಸ್).