

Jail: ಸಾಮಾನ್ಯವಾಗಿ ನಮಗೆಲ್ಲ ತಿಳಿದಂತೆ ಜೈಲು ಒಂದು ಬಂಧಿಖಾನೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಸ್ಥಳ. ಅದರಲ್ಲೂ ಜೈಲಿನ ಬಗ್ಗೆ ಮಾತು ಬಂದಾಗಲೆಲ್ಲಾ ಮೊದಲು ನೆನಪಿಗೆ ಬರುವುದು ಜೈಲಿನ ಆಹಾರ. ಅಲ್ಲಿನ ಕೈದಿಗಳಿಗೆ ಯಾವುದೇ ರುಚಿಕರವಾದ ತಿಂಡಿ, ತಿನಿಸು, ಆರಾಮದಾಯಕ ಸೌಲಭ್ಯಗಳು ದೊರೆಯುವುದಿಲ್ಲ, ಕೇವಲ ರಾಗಿಮುದ್ದೆಯೊಂದೆ ಊಟ ಎಂದು ನಾವೆಲ್ಲ ತಿಳಿದಿದ್ದೇವೆ. ಆದರೆ, ಜೈಲಿನ ಕೈದಿಗಳಿಗೆ ಹಾಲು ಮತ್ತು ಮೊಟ್ಟೆಯನ್ನು ಕೊಡುವ ನಿಯಮವಿದೆ. ಆದರೆ ಅದನ್ನು ನಿರ್ದಿಷ್ಟವಾಗಿ ಯಾವೆಲ್ಲಾ ಕೈದಿಗಳಿಗೆ ಸಿಗುತ್ತದೆ ಎಂಬುದರ ವಿವರ ಹೀಗಿದೆ.
ನಾವು ಸಿನಿಮಾಗಳಲ್ಲಿ ನೋಡುವ ಜೈಲೇ ಬೇರೆ, ನಿಜ ಜೀವನದಲ್ಲಿರುವ ಜೈಲೇ ಬೇರೇ. ಸಿನಿಮಾಗಳಲ್ಲಿ ನೋಡಿದರೆ ಜೈಲಿನ ಆಹಾರ ಪದ್ಧತಿ ನಿಜವಾಗಿಯೂ ಹೀಗೇನಾ? ಎಂಬ ಆಲೋಚನೆ ಬರುವುದು ಸಹಜ. ಹಾಗಾದ್ರೆ ಜೈಲಿನ ಯಾವ ಕೈದಿಗಳಿಗೆ ಹಾಲು ಮತ್ತು ಮೊಟ್ಟೆಯನ್ನು ನೀಡಲಾಗುತ್ತದೆ ಎಂದು ತಿಳಿಯೋಣ. ಜೈಲಿನಲ್ಲಿ ಕಠಿಣ ನಿಯಮಗಳ ಹೊರತಾಗಿಯೂ ಕೈದಿಗಳಿಗೆ ನಿಯಮಗಳನುಸಾರ ಸೌಲಭ್ಯಗಳು ಲಭ್ಯವಿದೆ. ಜೈಲಿನೊಳಗೆ ಬಿ ಮತ್ತು ಸಿ ವರ್ಗವಿದೆ. ಅನೇಕ ಜೈಲುಗಳಲ್ಲಿ ರಾಜಕಾರಣಿ ಮತ್ತು ವಿಶೇಷ ವರ್ಗವೂ ಇದೆ.
ಹಿಂದೆ ವಿದ್ಯಾವಂತ ಕೈದಿಗಳನ್ನು ಬಿ ವರ್ಗದಲ್ಲಿ ಇರಿಸಲಾಗುತ್ತಿತ್ತು. ಒಬ್ಬ ಕೈದಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ವೈದ್ಯರು ಅವನಿಗೆ ವಿಶೇಷ ಆಹಾರವನ್ನು ಸೂಚಿಸಿದ್ದರೆ, ಅವರಿಗೆ ಹಾಲು, ಬೆಣ್ಣೆ ಮತ್ತು ಮೊಟ್ಟೆಯನ್ನು ತಿನ್ನಲು ಕೊಡಲಾಗುತ್ತದೆ. ಹಾಗೆಯೇ ಗರ್ಭಿಣಿ ಮಹಿಳಾ ಕೈದಿಗಳ ಆಹಾರ ಕ್ರಮಕ್ಕೆ ವಿಶೇಷ ಗಮನ ನೀಡಲಾಗುತ್ತದೆ. ಮಗು ಜನಿಸಿದಾಗ, ಅವರಿಗೆ ಹಾಲು ಮತ್ತು ಪೌಷ್ಟಿಕ ಆಹಾರವನ್ನು ಸಹ ನೀಡಲಾಗುತ್ತದೆ.
ಜೈಲಿನಲ್ಲಿ ಆಹಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಅಲ್ಲಿನ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ಇದು ಸರ್ಕಾರ ಕೈದಿಯ ಆಹಾರಕ್ಕಾಗಿ ಎಷ್ಟು ಖರ್ಚು ಮಾಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 2015ರ ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, ರಾಜ್ಯ ಸರ್ಕಾರಗಳು ಕೈದಿಗಳ ಆಹಾರಕ್ಕಾಗಿ ದಿನಕ್ಕೆ 52.42 ರೂ. ಖರ್ಚು ಮಾಡುತ್ತದೆ. ಇದರಲ್ಲಿ ಉಪಾಹಾರ ಸೇರಿದಂತೆ ಮೂರು ಊಟಗಳು ಸೇರಿವೆ.