ಬೆಂಗಳೂರು: ನಟ ದರ್ಶನ್, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜುಲೈ 18ರಂದು ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ದರ್ಶನ್ರನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಜಾಮೀನು ಸಿಗುತ್ತಾ ಅಥವಾ ಮತ್ತೆ ಜೈಲು ಪಾಲಾಗುತ್ತಾರಾ ಕಾದು ನೋಡಬೇಕಿದೆ. ಇದರ ನಡುವೆ ಅಭಿಮಾನಿಗಳು ನೆಚ್ಚಿನ ನಟನ ಬಿಡುಗಡೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.
ಅಭಿಮಾನಿಗಳು ನಿತ್ಯವು ತಮ್ಮ ನಟನ ಜಪ ಮಾಡುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂಬ ಭರವಸೆಯಲ್ಲಿದ್ದಾರೆ. ಆಷಾಡ ಶುಕ್ರವಾರದಂದು ಮಹಿಳಾ ಅಭಿಮಾನಿಯೊಬ್ಬರು ದರ್ಶನ್ ಫೋಟೋ ಹಿಡಿದು ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಏರಿದ್ದರು. ಇನ್ನು ಕೆಲ ಅಭಿಮಾನಿಗಳು ದೇವಸ್ಥಾನಗಳಲ್ಲಿ ದರ್ಶನ್ ಹೆಸರಿನಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ನಮ್ಮ ಬಾಸ್ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ಹಾತೊರೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ಕೆಲ ಅಭಿಮಾನಿಗಳು ಪ್ರಖ್ಯಾತ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಸಂಬಂಧ ಪ್ರಶ್ನೆ ಕೇಳಿರುವ ಸಂಗತಿ ಇದೀಗ ವೈರಲ್ ಆಗಿದೆ. ಈ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖ ಮಠದಲ್ಲಿ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನವಿದೆ. ಇಲ್ಲಿಗೆ ಭೇಟಿ ನೀಡಿದ ಅಭಿಮಾನಿಗಳು ದೇವಿಯ ಕಳಸದ ಮುಂದೆ ದರ್ಶನ್ ಬಿಡುಗಡೆ ಆಗ್ತಾರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ದೇವಿ ಕೊಟ್ಟ ಉತ್ತರ ಕೇಳಿ ಅಭಿಮಾನಿಗಳು ಕಂಗಾಲಾಗಿದ್ದಾರೆ.
ನಮ್ಮ ಡಿಬಾಸ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿದ್ದಾರೆ. ಕೊಲೆಯಲ್ಲಿ ಅವರ ಪಾತ್ರ ಇದೆಯೋ? ಇಲ್ವೋ? ಗೊತ್ತಿಲ್ಲ. ಆದರೆ, ನಮ್ಮ ಬಾಸ್ ಮಾತ್ರ ಜೈಲಿನಿಂದ ಹೊರಗಡೆ ಬರಬೇಕು. ಅದು ಕೂಡ ನಿರಪರಾಧಿಯಾಗಿ ಬಿಡುಗಡೆಯಾಗಬೇಕು. ಅವರು ಯಾವಾಗ ಹೊರಗಡೆ ಬರುತ್ತಾರೆ ಎಂದು ಚೌಡೇಶ್ವರಿ ದೇವಿಯ ಕಳಸದ ಮುಂದೆ ಕೇಳಿದ್ದಾರೆ.
ದೇವಿಯ ಉತ್ತರ ಏನಿತ್ತು?
ದರ್ಶನ್ ಯಾವಾಗ ಬಿಡುಗಡೆ ಆಗುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಚೌಡೇಶ್ವರಿ ದೇವಿ ಯಾವುದೇ ಉತ್ತರವನ್ನು ನೀಡಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಎಷ್ಟು ದಿವಸ ಆಗುತ್ತದೆ ಎಂದು ಕೇಳಿದಕ್ಕೆ ದೇವಿ ಇನ್ನೂ ಸಮಯಬೇಕು. ತುಂಬಾ ಕಷ್ಟ ಇದೆ. ಈಗಲೇ ಹೇಳಲು ಆಗಲ್ಲ ಎಂದು ಹೇಳುತ್ತಿದ್ದಾಳೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕು ಅಂತಾ ಅಭಿಮಾನಿಗಳು ತುಂಬಾ ಬೇಸರದಿಂದ ಹೇಳಿಕೊಂಡಿದ್ದಾರೆ.
ಅಂದಹಾಗೆ ಚೌಡೇಶ್ವರಿ ದೇವಿಯ ಮಹಿಮೆ ಎಂಥದ್ದು ಅಂದರೆ ಈ ಹಿಂದೆ ನಡೆದಿದ್ದು ಹಾಗೂ ಮುಂದೆ ನಡೆಯುವುದನ್ನು ಬರೆದು ಹೇಳುವ ಶಕ್ತಿ ಚೌಡೇಶ್ವರಿ ದೇವಿಗೆ ಇದೆ ಎಂದು ಜನರು ನಂಬಿದ್ದಾರೆ. ತಾಯಿಯ ಬಳಿ ಪ್ರಶ್ನೆ ಕೇಳುವುದು ಹೇಗೆಂದರೆ, ಚೌಡೇಶ್ವರಿಯ ಉತ್ಸವದ ಮೂರ್ತಿಯ ಪೀಠವನ್ನು ಇಬ್ಬರು ವ್ಯಕ್ತಿಗಳು ಹಿಡಿದು ಕೊಳ್ಳುತ್ತಾರೆ. ಮೂರ್ತಿಯ ಮುಂದಿರುವ ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹರಡಲಾಗುತ್ತದೆ. ಬಳಿಕ ದೇವಿಯು ಕಳಸದಲ್ಲಿ ಅದರ ಮೇಲೆ ಬರೆಯುತ್ತಾಳೆ. ದೇಶದ ನಾನಾ ಭಾಗಗಳಿಂದ ಅನೇಕ ಭಕ್ತರು ತಮ್ಮ ಕಷ್ಟಗಳನ್ನು ಕೇಳಿಕೊಂಡು ಇಲ್ಲಿಗೆ ಬರುತ್ತಾರೆ. ಹೀಗಾಗಿ ಈ ದೇವಸ್ಥಾನ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲು ಜಾಮೀನು ಸಿಗುವುದು ಈ ಆರೋಪಿಗೆ ಮಾತ್ರ! ದರ್ಶನ್ ಗತಿ ಏನು?
ಬೇರೆ ನಟರ ಸಿನಿಮಾ ನೋಡಲ್ಲ ಎಂದ ದಚ್ಚು ಅಭಿಮಾನಿಗಳಿಗೆ ಖಡಕ್ ತಿರುಗೇಟು ಕೊಟ್ಟ ಉಮಾಪತಿ ಗೌಡ!