ಜೂನ್​ 1ರಿಂದ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕೆಲಸ ಮಾಡಲ್ಲ! ಯಾವೆಲ್ಲ ಸ್ಮಾರ್ಟ್​ಫೋನ್​? ಇಲ್ಲಿದೆ ನೋಡಿ ಪಟ್ಟಿ | WhatsApp

ವಿಜಯವಾಣಿ - 2025-05-31T153914.372
Published on

WhatsApp: ಇದೇ ಜೂನ್ 1ರಿಂದ ಕೆಲವು ಐಫೋನ್‌ಗಳು ಮತ್ತು ಆ್ಯಂಡ್ರಾಯ್ಡ್ ವರ್ಶನ್​ನ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಅಷ್ಟಕ್ಕೂ ಈ ಪಟ್ಟಿಯಲ್ಲಿ ನಿಮ್ಮ ಫೋನ್‌ ಕೂಡ ಇದೆಯೇ ಎಂಬುದನ್ನು ಮೊದಲು ಪರಿಶೀಲಿಸಿ. ಅಕಸ್ಮಾತ್​ ಇದ್ದಲ್ಲಿ, ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದಿದ್ರೆ, ಜೂನ್ 01ರ ನಂತರ ವಾಟ್ಸ್​ಆ್ಯಪ್​ ಉಪಯೋಗಿಸಲು ಸಾಧ್ಯವಿಲ್ಲ.

ಅಧಿಕ ಸಂಖ್ಯೆಯಲ್ಲಿ ಹಳೆಯ ಐಫೋನ್‌ಗಳು ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಇತ್ತೀಚಿನ ಅಪ್ಡೇಟ್​ ವರ್ಶನ್​ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ಮೆಟಾ ಸಂಸ್ಥೆ ತಿಳಿಸಿದೆ.​ ಹೊಸ ಅಪ್‌ಡೇಟ್‌ನ ವಾಟ್ಸ್​ಆ್ಯಪ್ ಬೆಂಬಲಿಸದ ಹಳೆಯ ಮಾದರಿಯ ಫೋನ್​ಗಳ ಪಟ್ಟಿಯನ್ನು ಇದೀಗ ಬಿಡುಗಡೆಗೊಳಿಸಲಾಗಿದೆ. ಯಾವೆಲ್ಲ ಫೋನ್​ಗಳು ಈ ಪಟ್ಟಿಯಲ್ಲಿವೆ? ಎಂಬ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.

ಮ್ಯಾಕ್​ ವರ್ಶನ್​ (ಐಫೋನ್​)

1. ಐಫೋನ್ 5s,

2. ಐಫೋನ್ 6,

3. ಐಫೋನ್ 6 ಪ್ಲಸ್,

4. ಐಫೋನ್ 6s,

5. ಐಫೋನ್ 6s ಪ್ಲಸ್

6. ಐಫೋನ್ SE

ಆ್ಯಂಡ್ರಾಯ್ಡ್ ಫೋನ್​ಗಳು

1. ಸ್ಯಾಮ್​ಸಂಗ್ ಗ್ಯಾಲಕ್ಸಿ S4

2. ಸ್ಯಾಮ್​ಸಂಗ್ ಗ್ಯಾಲಕ್ಸಿ ನೋಟ್​ 3

3. ಸೋನಿ ಎಕ್ಪಿರಿಯಾ ಜೆ1

4. ಎಲ್​ಜಿ ಜಿ2

5. ಹುವಾಯಿ ಅಸೆಂಡ್ ಪಿ6

6. ಮೊಟೋ ಜಿ ಮೊದಲ ಜನರೇಷನ್​

7. ಮೊಟೊರೊಲಾ ರೇಜರ್​ ಎಚ್​ಡಿ

8. ಮೊಟೊ ಇ (2014)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net