ವಾಟ್ಸ್ಯಾಪ್​ನಲ್ಲಿಯೇ ಕಂಡುಹಿಡಿಯಬಹುದು ಫಾರ್ವಡ್​ ಮೇಸೇಜ್​ಗಳ ಅಸಲಿಯತ್ತು....!

whastapp
Published on

ನವದೆಹಲಿ: ವಾಟ್ಸ್ಯಾಪ್​ನಲ್ಲಿ ತಲೆನೋವು ಎಂದರೆ ಫಾರ್ವರ್ಡ್​ ಮೇಸೇಜ್​ಗಳು ಎಂದುಕೊಳ್ಳುತ್ತಿರಾದರೆ, ಅವುಗಳು ಹೊರಬಿದ್ದಿದ್ದು ಎಲ್ಲಿಂದ? ಮೂಲವಾದರೂ ಯಾವುದು ಎಂಬುದನ್ನು ಇನ್ನು ಮೇಲೆ ಸುಲಭವಾಗಿ ಕಂಡುಕೊಳ್ಳಬಹುದು.

ಹೌದು...! ಇನ್ನುಮುಂದೆ ವಾಟ್ಸ್ಯಾಪ್​ನಲ್ಲಿ 'ಸರ್ಚ್​ ದಿ ವೆಬ್​' ಆಪ್ಷನ್​ ಇರಲಿದೆ. ಯಾವುದೇ ಫಾರ್ವಡ್​ ಮೇಸೇಜ್​ಗಳಲ್ಲಿರುವ ಮಾಹಿತಿಯ ಮೂಲ ಯಾವುದು ಎಂಬುದು ಗೊತ್ತಾಗಲಿದೆ.

ವಾಟ್ಸ್ಯಾಪ್​ನ ಲೇಟೆಸ್ಟ್​ ವರ್ಷನ್​ನಲ್ಲಿ ಇಂಥದ್ದೊಂದು ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ ಇದು ಬ್ರೆಜಿಲ್​, ಇಟಲಿ, ಐರ್ಲೆಂಡ್​, ಮೆಕ್ಸಿಕೋ, ಸ್ಪೇನ್​, ಇಂಗ್ಲೆಂಡ್​ ಹಾಗೂ ಅಮೆರಿಕದಲ್ಲಿ ಲಭ್ಯವಿದೆ.

ವಾಟ್ಸ್ಯಾಪ್​ನಲ್ಲಿ ಬಹಳಷ್ಟು ಬಾರಿ ಹರಿದಾಡುವ ಮೇಸೇಜ್​ಗಳ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚುವ ಸರಳ ಅವಕಾಶ ಕಲ್ಪಿಸುವುದರಿಂದ ಅದರ ಸುದ್ದಿ ಮೂಲ ಅಥವಾ ಮಾಹಿತಿ ಮೂಲ ಯಾವುದೆಂದು ಕಂಡುಕೊಳ್ಳಬಹುದು ಎಂದು ವಾಟ್ಸ್ಯಾಪ್​ ತಿಳಿಸಿದೆ.

ಮೇಸೇಜ್​ ನೋಡದೆ ಅಥವಾ ಅದನ್ನು ಇನ್ನೊಬ್ಬರಿಗೆ ಕಳುಹಿಸದೇ ತಮ್ಮ ಬ್ರೌಸರ್​ಗಳ ಮೂಲಕ ಅಪ್​ಲೋಡ್​ ಮಾಡುವ ಅವಕಾಶ ಇದರಲ್ಲಿರಲಿದೆ. ಸದ್ಯ ಭಾರತದಲ್ಲಿ ಈ ಸೌಲಭ್ಯ ಯಾವಾಗ ಲಬ್ಯವಾಗಲಿದೆ ಎಂಬುದನ್ನು ಕಂಪನಿ ತಿಳಿಸಿಲ್ಲ. ಆದರೆ, ಆದಷ್ಟು ಶೀಘ್ರ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೇ, ಬೇರೆ ಬೇರೆ ಡಿವೈಸ್​ಗಳಲ್ಲಿ ಒಂದೇ ಅಕೌಂಟ್​ ಮೂಲಕ ಲಾಗಿನ್​ ಆಗುವ ಸೌಲಭ್ಯವನ್ನು ಕಲ್ಪಿಸುವ ಕುರಿತು ವಾಟ್ಸ್ಯಾಪ್​ ಕಾರ್ಯೋನ್ಮುಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net