More

    50ಕ್ಕೂ ಹೆಚ್ಚು ಐಎಎಸ್​ ಅಧಿಕಾರಿಗಳನ್ನು ನೀಡಿದೆ ಇದೊಂದೇ ಊರು; 13 ಜನ ಒಂದೇ ಕುಟುಂಬದವರು

    ಲಖನೌ: ಶಿಕ್ಷಕರ ಹಳ್ಳಿ, ಯೋಧರ ಗ್ರಾಮ ಎಂದೆಲ್ಲ ವಿಶೇಷಣಗಳೊಂದಿಗೆ ಊರನ್ನು ಕರೆಯುವುದ್ನು ಕೇಳಿರುತ್ತೇವೆ. ಅದರರ್ಥ ಆ ಊರಲ್ಲಿ ಶಿಕ್ಷಕರ ವೃತ್ತಿಯಲ್ಲಿರುವವರು, ಯೋಧರಾಗಿ ಸೇವೆ ಸಲ್ಲಿಸುತ್ತಿರುವವರುಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದೇ ಅರ್ಥ.

    ಅಂತೆಯೇ ಇಲ್ಲೊಂದು ಹಳ್ಳಿಯನ್ನು ಐಎಎಸ್​ ಊರು ಎಂದೇ ಕರೆಯಲಾಗುತ್ತದೆ. ಹೌದು ನಿಮ್ಮ ಊಹೆ ಸರಿಯಾದದ್ದೇ. ಈ ಊರಿನಿಂದ ಐಎಎಸ್​ ಅಧಿಕಾರಿಗಳಾಗಿ ಆಯ್ಕೆಯಾದವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಭಾರತದ ಯಾವುದೇ ಗ್ರಾಮಕ್ಕಿಂತಲೂ…!

    ಉತ್ತರಪ್ರದೇಶದ ಜೌನ್​ಪುರ ಜಿಲ್ಲೆಯ ಮಾಧವ ಪಟ್ಟಿ ಗ್ರಾಮದಲ್ಲಿ ಈವರೆಗೆ 50ಕ್ಕೂ ಹೆಚ್ಚು ಜನರು ಐಎಎಸ್​, ಐಪಿಎಸ್​ ಸೇರಿ ಅಖಿಲ ಭಾರತ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಇನ್ನೂ ಬ್ಯಾಂಕ್​, ಇತರ ಉನ್ನತ ಹುದ್ದೆಗಳಿಗೆ ಆಯ್ಕೆಯಾದವರ ಸಂಖ್ಯೆಗಂತೂ ಲೆಕ್ಕವೇ ಇಲ್ಲ.

    ಇದನ್ನೂ ಓದಿ; ಸಾವಿನಲ್ಲೂ ಗುಟ್ಟು ಬಿಟ್ಟು ಕೊಡದ ಶ್ರೀಲಂಕಾ ಗ್ಯಾಂಗ್​ಸ್ಟರ್; ಎರಡು ವರ್ಷಗಳಿಂದ ಭಾರತದಲ್ಲೇ ಅಡಗಿದ್ದ…! 

    ಅಷ್ಟಕ್ಕೂ ಮಾಧವಪಟ್ಟಿ ಗ್ರಾಮದ ಜನ ಸಂಖ್ಯೆ ಕೇವಲ ನಾಲ್ಕು ಸಾವಿರ. ಬಹುತೇಕರು ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ವಿಶೇಷವೆಂದರೆ, ಒಂದೇ ಕುಟುಂಬದ ನಾಲ್ಕು ಜನರು ಐಎಎಸ್​ ಅಧಿಕಾರಿಗಳಾಗಿದ್ದಾರೆ.

    ಐಎಎಸ್​​ ಅಧಿಕಾರಿಗಳ ಕುಟುಂಬ: ಈ ಗ್ರಾಮದ ಠಾಕೂರ್​ ಸೂರ್ಯಬಲಿ ಸಿಂಗ್​ ಎಂಎ ಹಾಗೂ ಎಲ್​ಎಲ್​ಬಿಯಲ್ಲಿ ಟಾಪರ್​ ಆಗಿದ್ದರು. ಇವರ ಸಹೋದರ ಭಗವಾನ್​ ದೀನ್​​ ಸಿಂಹ ಸಹಿತ ಇವರ ಕುಟುಂಬದಲ್ಲಿ ಒಟ್ಟು 13 ಜನರು ಐಎಎಸ್​​ ಪಾಸ್​ ಮಾಡಿದ್ದಾರೆ. 1960ರಲ್ಲಿ ವಿನಯಕುಮಾರ್​ ಸಿಂಹ ಐಎಎಸ್​ ಪಟ್ಟಿಯಲ್ಲಿ 13ನೇ ಟಾಪರ್​ ಆಗಿದ್ದರು. ಇವರು ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದರು. ಅಜಯಕುಮಾರ್​ ಸಿಂಹ ಹಾಗೂ ಛತ್ರಸಾಲ್​ ಸಿಂಹ 1961ರಲ್ಲಿ ನಾಗರಿಕ ಸೇವೆಗೆ ಆಯ್ಕೆಯಾದರು.

    ಇದನ್ನೂ ಓದಿ; ಯಾರಿಗೆ ಸಿಗುತ್ತೆ? ಯಾರಿಗೆ ಇಲ್ಲ? ಶ್ರೀಮಂತ ದೇಶಗಳಿಂದ ಮುಂಗಡ ಖರೀದಿ; 100 ಕೋಟಿ ಡೋಸ್​ಗೆ ಹಣ ಪಾವತಿ

    ಭಗವಾನ್​ ದೀನ್​​ ಸಿಂಹರ ಮಗ ಇಂದ್ರಕುಮಾರ್​ ಸಿಂಹ 1951ರಲ್ಲಿಯೇ ಐಎಎಸ್​ ಅಧಿಕಾರಿಯಾಗಿದ್ದರು. 16 ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸಹೋದರ ವಿದ್ಯಾಪ್ರಕಾಶ್ ಸಿಂಹ 1953ರಲ್ಲಿ ಐಎಎಸ್​ ಪರೀಕ್ಷೆ ಪಾಸ್​ ಮಾಡಿದ್ದರು.

    ಇದೇ ಕುಟುಂಬದ ಮನಸ್ವಿಕುಮಾರ್​ ಸಿಂಹ್​ ಪಂಜಾಬ್​ ಕೇಡರ್​ನಲ್ಲಿ, ಸಹೋದರ ಯಶಸ್ವಿ ಕುಮಾರ್​ ಸಿಂಹ ಉತ್ತರಾಖಂಡ್​ ಕೇಡರ್​ ಅಧಿಕಾರಿಯಾಗಿದ್ದಾರೆ. ಹೀಗೆ ಇವರ ಕುಟುಂಬದಲ್ಲಿ 13 ಐಎಎಸ್​ ಹಾಗೂ 50ಕ್ಕೂ ಅಧಿಕ ಜನರು ಗೆಜೆಟೆಡ್​ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್​ ಅಧಿಕಾರಿಯಾಗುವುದೇ ಆಗಿದೆ. ಇದಕ್ಕಾಗಿ ಅವರು 10ನೇ ತರಗತಿಯಿಂದಲೇ ಕಠಿಣ ಪರಿಶ್ರಮದಲ್ಲಿ ತೊಡಗುತ್ತಾರೆ. ವಿಪರ್ಯಾಸವೆಂದರೆ, ಈ ಹಳ್ಳಿಯಿನ್ನೂ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

    26 ವರ್ಷಗಳ ಬಳಿಕ ಪಾತಾಳಕ್ಕಿಳಿದಿದೆ ಚಿನ್ನ; ಹಳದಿ ಲೋಹ ಆಕರ್ಷಣೆ ಕಳೆದುಕೊಂಡರೆ ಲಾಭ ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts