whatsapp | ಮೆಟಾ ಒಡೆತನದ ಜನಪ್ರಿಯ ಮೆಸೇಜ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಶನಿವಾರ (12) ಭಾರತದಲ್ಲಿ ಬಳಕೆದಾರರಿಗೆ ಮೆಸೇಜ್ಗಳನ್ನು ಕಳುಹಿಸಲು ಮತ್ತು ಸ್ಟೇಟಸ್ ಅಪ್‌ಲೋಡ್ ಮಾಡಲು ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲ ಬಳಕೆದಾರರು ದೂರಿದ್ದಾರೆ.
ಇಂದು ಸಂಜೆ ಮೆಟಾ ಮಾಲೀಕತ್ವದ ಅಪ್ಲಿಕೇಶನ್‌ನಲ್ಲಿ ತಮ್ಮ ಸ್ಟೇಟಸ್‌ಗಳನ್ನು ಅಪ್‌ಲೋಡ್ ಮಾಡಲು ಹಾಗೂ ಸಂದೇಶಗಳನ್ನು ಕಳುಹಿಸಲು ಸಮಸ್ಯೆಯಾಗುತ್ತಿದೆ ಎಂದು ಬಳಕೆದಾರರು ವರದಿ ಮಾಡಿದ್ದಾರೆ.

ಇದನ್ನೂ ಓದಿ: ವನಜೀವಿ ರಾಮಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ|Vanajeevi Ramaiah
ಆ್ಯಪ್ ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್ ಡಿಟೆಕ್ಟರ್ ಪ್ರಕಾರ, ಸಂಜೆ 5:13 ರವರೆಗೆ ವಾಟ್ಸಾಪ್ ವಿರುದ್ಧ ಕನಿಷ್ಠ 463 ದೂರುಗಳು ದಾಖಲಾಗಿವೆ. 15% ಜನರು ಅಪ್ಲಿಕೇಶನ್‌ನಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ. 4% ಲಾಗಿನ್ ಸಮಯದಲ್ಲಿ ಸಮಸ್ಯೆ ಅನುಭವಿಸಿದ್ದಾರೆ. ಕನಿಷ್ಠ ಶೇ.81 ರಷ್ಟು ಬಳಕೆದಾರರು ಸಂದೇಶಗಳನ್ನು ಕಳುಹಿಸುವಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಾಟ್ಸಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲವು ಬಳಕೆದಾರರು ದೂರಿದ್ದಾರೆ.
Is it just me or your WhatsApp is down as well ? I am trying to upload status and it’s taking forever to do so . #Whatsappstatusdown
— Khusboo Sharma (@khusboo_runthla) April 12, 2025
ಇದನ್ನೂ ಓದಿ: ಯುವಕನ ಮಾಸ್ಟರ್ ಪ್ಲಾನ್ಗೆ ಬೆಚ್ಚಿಬಿದ್ದ ಸಿಬ್ಬಂದಿ; ಸೂಟ್‌ಕೇಸ್‌ನಲ್ಲಿದ್ದಳು ಆತನ ಪ್ರೇಯಸಿ| Viral vedeo
ಬಳಕೆದಾರರು ಹೇಳಿದ್ದೇನು?
ಕೆಲವು ಬಳಕೆದಾರರು ತಮ್ಮ ಸ್ಟೇಟಸ್‌ಗಳನ್ನು ವಾಟ್ಸಾಪ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ. ಇತರರು ಗ್ರೂಪ್‌ಗಳಿಗೆ ಮೆಸೇಜ್ ಮಾಡುವಾಗಲೂ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ವೈರಲ್ ಆಗಿದೆ.
Hey @WhatsApp , is the app down? I’m having trouble sending messages – they’re just not going through. Anyone else facing this? #WhatsAppDown
— Arpit shukla ✍🏽 (@JournoArpit) April 12, 2025
ಇದು ನಾನು ಮಾತ್ರವೇ ಅಥವಾ ನಿಮ್ಮ ವಾಟ್ಸಾಪ್ ಕೂಡ ಡೌನ್ ಆಗಿದೆಯೇ? ನಾನು ಸ್ಟೇಟಸ್ ಅಪ್‌ಲೋಡ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹಾಗೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎಂದು ಬಳಕೆದಾರರು X ನಲ್ಲಿ ಹೇಳಿದ್ದಾರೆ.
(ಏಜೆನ್ಸೀಸ್)
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ಗೆ ಬಿಗ್ಶಾಕ್!; 661 ಕೋಟಿ ರೂ. ಆಸ್ತಿ ಸ್ವಾಧೀನಕ್ಕೆ ಮುಂದಾದ ED